Bengaluru metro: ಮೊಬೈಲ್‌ ತೆಗೆದುಕೊಳ್ಳಲು ಹಳಿಗೆ ಇಳಿದ ಮಹಿಳೆ, ಮುಂದಾಗಿದ್ದೇನು?- ಇಲ್ಲಿದೆ ಮಾಹಿತಿ

ಬೆಂಗಳೂರು, ಜನವರಿ, 02: ಬೆಂಗಳೂರಿನ ನಮ್ಮ ಮೆಟ್ರೋ ಅಂತೂ ಇತ್ತೀನ ದಿನಗಳಲ್ಲಿ ಹೆಚ್ಚಾಗಿ ಒಂದಲ್ಲ ಒಂದು ವಿಚಾರದದಲ್ಲಿ ಸುದ್ದಿಯಲ್ಲಿರುತ್ತಲೇ ಇದೆ. ಅದರಲ್ಲೂ ಯುವಕ, ಯುವತಿಯರ ಪುಂಡಾಟ, ರೀಲ್ಸ್‌ ಮಾಡಿ ರೂಲ್ಸ್‌ ಬ್ರೇಕ್‌ ಮಾಡುವುದರಿಂದ ಹಿಡಿದು ಇತರ ಘಟನೆಗಳು ಕೂಡ ನಡೆದಿರುವ ಉದಾಹರಣೆಗಳು ಇವೆ. ಹಾಗೆಯೇ ಇದೀಗ ಕೆಳಗೆ ಬಿದ್ದ ಮೊಬೈಲ್‌ ಅನ್ನು ಎತ್ತಿಕೊಳ್ಳಲು ಮಹಿಳೆಯೊಬ್ಬರು ಹಳಿಗೆ ಇಳಿದ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ಹೊಸವರ್ಷದಂದು ಆಗಿದ್ದು, ಇದರಿಂದ ಏನೆಲ್ಲ ಸಮಸ್ಯೆಗಳು ಆಗಿವೆ ಗೊತ್ತಾ ಇಲ್ಲಿದೆ ಮಾಹಿತಿ.

ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮೆಟ್ರೋ ಹಳಿಗೆ ಮಹಿಳೆಯೊಬ್ಬರು ಇಳಿದ ಆಘಾತಕಾರಿ ಘಟನೆ ಹೊಸ ವರ್ಷದಂದೇ ಬೆಂಗಳೂರಿನ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಸೋಮವಾರ (ಜನವರಿ 01) ಸಂಜೆ 6:40ರ ಸುಮಾರಿಗೆ ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ಮಹಿಳೆ ಮೆಟ್ರೋಗಾಗಿ ಕಾಯುತ್ತಾ ನಿಂತಿದ್ದು, ಈ ವೇಳೆ ಅವರ ಕೈಯಿಂದ ಮೊಬೈಲ್‌ ಜಾರಿ ಮೆಟ್ರೋ ಹಳಿ ಮೇಲೆ ಬಿದ್ದಿದೆ. ಅದನ್ನು ತೆಗೆದುಕೊಳ್ಳು ಮಹಿಳೆ ಟ್ರ್ಯಾಕ್‌ಗೆ ಇಳಿದಿದ್ದಾರೆ. ತಕ್ಷಣ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

Bengaluru metro: A woman got down on metro track to take her mobile phone

ಇಲ್ಲಿನ ಮೆಟ್ರೋ ಸಿಬ್ಬಂದಿಯ ಮುಂಜಾಗ್ರತೆಯಿಂದ ಭಾರೀ ಅನಾಹುತ ತಪ್ಪಿದೆ. ಮಹಿಳೆಯ ಬೇಜವಾಬ್ದಾರಿತನದ ವರ್ತನೆಯಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತ ಆಗಿತ್ತು. ನೇರಳೆ ಮಾರ್ಗದ ಲೈನ್‌ನಲ್ಲಿ ಜಸ್ಟ್‌ ಮಿಸ್‌ ಆಗಿ ಮಹಿಳೆ ದೊಡ್ಡ ಆಘಾತದಿಂದ ಪಾರಾಗಿದ್ದಾರೆ ಎಂದು ಬಿಎಂಆರ್‌ಸಿಎಲ್‌ ತಿಳಿದೆ.

ವಿದ್ಯುತ್ ಸ್ಥಗಿತಗೊಳಿಸಿದ ಬಳಿಮ ಎಲ್ಲವನ್ನೂ ರೀಸೆಟ್ ಮಾಡಲು 15 ನಿಮಿಷ ಸಮಯ ತೆಗೆದುಕೊಂಡಿತು. ಆದ್ದರಿಂದ ಮೆಟ್ರೋ ಸಂಚಾರ ಈ ಮಾರ್ಗದಲ್ಲಿ ವಿಳಂಬವಾಯಿತು ಎಂದು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+