'ಶಕ್ತಿ' ಯೋಜನೆ ಜಾರಿಯಾದ ಬಳಿಕ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲೂ ಭಾರೀ ಹೆಚ್ಚಳ: ಅಂಕಿಅಂಶ, ವರದಿ, ವಿವರ

ಬೆಂಗಳೂರು, ಜೂನ್‌ 17: ಶಕ್ತಿ ಯೋಜನೆ ಪ್ರಾರಂಭವಾದ ನಂತರ, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ. ಈ ಯೋಜನೆಯು ರಾಜ್ಯದಾದ್ಯಂತ ಮಹಿಳೆಯರಿಗೆ ಅನುಕೂಲಕರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಚ್ಚರಿಯ ವಿಚಾರವೆಂದರೆ, ಈ ಯೋಜನೆ ಜಾರಿಯಾದ ಬಳಿಕ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲೂ ಭಾರೀ ಹೆಚ್ಚಳ ಕಂಡುಬಂದಿದೆ ಎಂದು 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌' ಪತ್ರಿಕೆ ವರದಿ ಮಾಡಿದೆ.

ಶಕ್ತಿ ಯೋಜನೆ ಪ್ರಾರಂಭವಾದ ನಂತರ ಎರಡು ರೀತಿಯ ಬದಲಾವಣೆಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಮಹಿಳೆಯರು, ಖಾಸಗಿ ಬಸ್‌ಗಳು ಮತ್ತು ಆಟೋಗಳಂತಹ ಇತರ ಸಾರಿಗೆ ವಾಹನಗಳನ್ನು ಬಳಸುತ್ತಿದ್ದರು. ಅವರಲ್ಲಿ ಬಹುತೇಕರು ಬಿಎಂಟಿಸಿ ಬಸ್‌ಗಳತ್ತ ಮುಖ ಮಾಡಿದ್ದಾರೆ.

Bengaluru: Men Ridership In Govt Busses Also Increased After Shakti Scheme Launched

ಎರಡನೆಯದು ತಮ್ಮ ಕೆಲಸದ ಜಾಗಗಳಿಗೆ ನಡೆದುಕೊಂಡು ಹೋಗುತ್ತಿದ್ದವರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಆರಿಸಿಕೊಂಡಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಹೆಚ್ಚಿನ ಪ್ರಯಾಣಿಕರು ಕಂಡುಬರುತ್ತಿರುವುದಕ್ಕೆ ಇನ್ನೊಂದು ಕಾರಣವೆಂದರೆ, ಶಕ್ತಿ ಯೋಜನೆ ಆರಂಭವಾಗಿ ಕೇವಲ ಒಂದು ವಾರ ಘಟಿಸಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಪ್ರಯಾಣಿಕರಲ್ಲಿ ಉತ್ಸಾಹವಿರುವುದು ಕಂಡುಬಂದಿದೆ.

Bengaluru: Men Ridership In Govt Busses Also Increased After Shakti Scheme Launched

ಬಿಎಂಟಿಸಿಯ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 27.34 ಲಕ್ಷ ಆಗಿತ್ತು. ಜೂನ್ 12 ರಂದು ಒಟ್ಟು 34.94 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅದರಲ್ಲಿ 17.57 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ ಎಂದು ವರದಿ ಹೇಳಿದೆ. ಜೂನ್ 13 ರಂದು 40.17 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಸವಾರಿ ಮಾಡಿದ್ದಾರೆ. ಅದರಲ್ಲಿ 20.57 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ.

ಜೂನ್ 14 ರಂದು 33.44 ಲಕ್ಷ ಮಂದಿ ಬಿಎಂಟಿಟಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲಿ 16.85 ಲಕ್ಷ ಮಹಿಳಾ ಪ್ರಯಾಣಿಕರು. ಜೂನ್ 15 ರಂದು 33.28 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಅದರಲ್ಲಿ 17.67 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ.

ಈ ಎಲ್ಲಾ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದೆ, ಪುರುಷ ಪ್ರಯಾಣಿಕರ ಸಂಖ್ಯೆಯಲ್ಲೂ ಅಧಿಕ ಏರಿಕೆ ಕಂಡುಬಂದಿದೆ.

Bengaluru: Men Ridership In Govt Busses Also Increased After Shakti Scheme Launched

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಶಾಹೀನ್ ಶಾಸ 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌' ಜೊತೆ ಮಾತನಾಡಿ, 'ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯು ಗಮನಾರ್ಹವಾಗಿದೆ, ಜೂನ್ 12 ರಂದು 17 ಲಕ್ಷ ಮತ್ತು ಜೂನ್ 13 ರಂದು 20 ಲಕ್ಷ ಮಹಿಳೆಯರು ಬಿಎಂಟಿಸಿಯಲ್ಲಿ ಪ್ರಯಾಣಿಸಿದ್ದಾರೆ. ಜೂನ್ 14 ರಂದು ಇದು 16.85 ಲಕ್ಷಕ್ಕೆ ಇಳಿದಿದೆ. ಆದರೆ ಇದು ಜೂನ್ 12 ರಂದು ದಾಖಲಾದ ಸಂಖ್ಯೆಗಳಿಗೆ ಹತ್ತಿರದಲ್ಲಿದೆ' ಎಂದು ಹೇಳಿದ್ದಾರೆ.

'ಇತರ ಸಾರಿಗೆ ವಿಧಾನಗಳನ್ನು ಬಳಸುತ್ತಿದ್ದ ಪ್ರಯಾಣಿಕರು ಶುಲ್ಕದ ಅನುಕೂಲದಿಂದಾಗಿ ಬಿಎಂಟಿಸಿ ಕಡೆಗೆ ಮುಖ ಮಾಡಿದ್ದಾರೆ. ನಡೆದುಕೊಂಡು ಹೋಗುತ್ತಿದ್ದವರು ಸಹ ಬಸ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ' ಎಂದು ಅವರು ಹೇಳಿದರು.

ಯಾವುದೇ ಯೋಜನೆಯ ಪ್ರಾರಂಭದಲ್ಲಿ ಸಂಭ್ರಮವಿರುತ್ತದೆ. ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಭಾರೀ ಏರಿಕೆ ಕಂಡುಬಂದಿರುವುದು ಇದಕ್ಕೆ ಕಾರಣವೆಂದು ತಜ್ಞ ಶ್ರೇಯಾ ಗಾಡೆಪಲ್ಲಿ ಅವರು ತಿಳಿಸಿದ್ದಾರೆ.

'ಯಾವುದೇ ಮೌಲ್ಯಮಾಪನ ಮತ್ತು ಯಾವುದೇ ತೀರ್ಪುಗಳಿಗೆ ಬರುವ ಮೊದಲು ನಾವು ಕೆಲವು ತಿಂಗಳ ಡೇಟಾವನ್ನು ಪರಿಶೀಲಿಸಬೇಕು' ಎಂದು ಗಡೇಪಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+