ಬೆಂಗಳೂರಲ್ಲಿ ಮಾಂಸ ಪ್ರಿಯರಿಗೆ ದಿಢೀರ್ ಶಾಕ್, ಈ ಕಾರಣಕ್ಕೆ ಚಿಕನ್ & ಮಟನ್ ಬೆಲೆ ಭರ್ಜರಿ ಹೆಚ್ಚಳ
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿ ಪ್ರಮಾಣ ತೀವ್ರವಾಗಿ ಹೆಚ್ಚಳವಾಗಿದೆ. ಹವಾಮಾನ ವೈಪರೀತ್ಯ ಹಾಗೂ ಹೆಚ್ಚುತ್ತಿರುವ ಚಳಿ ಪ್ರಮಾಣವು ನಾನ್‌ವೆಜ್ ಪ್ರಿಯರಿಗೆ ಶಾಕ್ ಎದುರಾಗಿದೆ
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಳವಾಗುತ್ತಿರುವುದು ಹಾಗೂ ವರ್ಷಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಕುರಿ ಮತ್ತು ಕೋಳಿ ಮಾಂಸ ಮಾರಾಟವು ಭರ್ಜರಿಯಾಗಿ ನಡೆಯುತ್ತಿದೆ. ಚಳಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಕೋಳಿ ಮತ್ತು ಕುರಿ ಮಾಂಸದ ಮಾರಾಟಕ್ಕೆ ಭಾರೀ ಬೇಡಿಕೆ ಬಂದಿದೆ. ಅಲ್ಲದೇ ಇತ್ತೀಚೆಗೆ ಮೊಟ್ಟೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲವೂ ಸಹ ಮಾಂಸ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಚಳಿಗಾಲ ಆಗಿರುವುದರಿಂದಾಗಿ ಕುರಿ ಮತ್ತು ಕೋಳಿ ಉತ್ಪಾದನೆಯು ಇಳಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಬೇಡಿಕೆಯೂ ಹೆಚ್ಚಳವಾಗುತ್ತಿದ್ದು, ಮಾಂಸ ಮಾರಾಟದ ಬೆಲೆಯಲ್ಲಿ ಭರ್ಜರಿ ಹೆಚ್ಚಳವಾಗಿದೆ. ಕುರಿ ಮತ್ತು ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಮಟನ್ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ವಿವಿಧ ಮಾಂಸದ ಬೆಲೆಯು ಇನ್ನೊಂದು ವಾರದ ಅವಧಿಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಕೋಳಿ ಬೆಲೆ ಹೆಚ್ಚಳ
ಇನ್ನು ಚಳಿಗಾಲ ಹಾಗೂ ವರ್ಷಾಂತ್ಯ ರಜೆಗಳ ಹಿನ್ನೆಲೆಯಲ್ಲಿ ಜನ ಪಾರ್ಟಿ ಮೂಡ್‌ನಲ್ಲಿ ಇದ್ದಾರೆ. ಹೊಸ ವರ್ಷಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಹೊಸ ವರ್ಷದ ಗುಂಗು ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಚಿಕನ್ (ಕೋಳಿ ಮಾಂಸ) ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಕರ್ನಾಟಕದಾದ್ಯಂತ ಕೋಳಿ ಮಾಂಸದ ಬೆಲೆಗಳು ಏಕಾಏಕಿ ಜಿಗಿತ ಕಂಡಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಚಿಕನ್ ಬೆಲೆಯು ಪ್ರತಿ ಕೆಜಿಗೆ 290 ರೂಪಾಯಿ ತಲುಪಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 300 ರೂಪಾಯಿ ಗಡಿ ದಾಟುವ ನಿರೀಕ್ಷೆಯಿದೆ.
ಇತ್ತೀಚೆಗೆ ಮೊಟ್ಟೆ ಬೆಲೆಯಲ್ಲಿ ಭರ್ಜರಿ ಹೆಚ್ಚಳವಾಗಿತ್ತು. ನಂತರ ಕೋಳಿ ಮಾಂಸದ ಬೆಲೆಗಳು ತೀವ್ರವಾಗಿ ಏರಿಕೆಯಾಗಿರುವುದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದಂತೆ ಆಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಈಗಾಗಲೇ ಕೋಳಿ ಮಾಂಸದ ಬೆಲೆ 300 ರೂಪಾಯಿ ಸಮೀಪಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 290 ರೂಪಾಯಿಗೆ ತಲುಪಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ, ಚರ್ಮವಿರುವ (Skin Chicken) ಕೋಳಿ ಮಾಂಸವನ್ನು ಕೆಜಿಗೆ ಸುಮಾರು 270 ಕ್ಕೆ ಮಾರಾಟವಾಗುತ್ತಿದೆ. ಚರ್ಮರಹಿತ ಕೋಳಿ ಮಾಂಸದ ಬೆಲೆ ಕೆಜಿಗೆ 280 ರಿಂದ 290 ರೂಪಾಯಿಯ ವರೆಗೆ ತಲುಪಿದೆ. ಮುಂಬರುವ ದಿನಗಳಲ್ಲಿ ಬೆಲೆಗಳು ಮತ್ತಷ್ಟು ಏರುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಡಿಸೆಂಬರ್ ಆರಂಭದಿಂದ ಮೊಟ್ಟೆಯ ಬೆಲೆಗಳು ಪ್ರತಿ ಮೊಟ್ಟೆಗೆ 6 ರೂಪಾಯಿಯಿಂದ 8 ರೂಪಾಯಿಗೆ ಭರ್ಜರಿ ಹೆಚ್ಚಳವಾಗಿತ್ತು. ಕ್ರಿಸ್‌ಮಸ್ ಕೇಕ್ ತಯಾರಿಕೆಗೆ ಬೇಡಿಕೆ ಹೆಚ್ಚಾಗಿರುವುದು ಮತ್ತು ವಿದೇಶಗಳಿಗೆ ಮೊಟ್ಟೆ ರಫ್ತು ಹೆಚ್ಚಾಗಿರುವುದು ಮೊಟ್ಟೆಯ ಬೆಲೆ ಏರಿಕೆಗೆ ಕಾರಣ ಎಂದು ಕೋಳಿ ವ್ಯಾಪಾರಿಗಳು ಹೇಳಿದ್ದಾರೆ.
ಮೊಟ್ಟೆಗಳ ಜೊತೆಗೆ, ಕೋಳಿ ಮಾಂಸದ ಬೆಲೆಯೂ ಹೆಚ್ಚಾಗಿದೆ. ಪ್ರಸ್ತುತ ಇಂದಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 160 ರೂಪಾಯಿಯಿಂದ ರಿಂದ 180 ರೂ. ರವರೆಗೆ ಇದೆ.
ಮಟನ್ ಬೆಲೆಯೂ 900 ರೂಪಾಯಿ
ಇನ್ನು ಮೊಟ್ಟೆ ಮತ್ತು ಕೋಳಿ ಮಾತ್ರವಲ್ಲದೆ ಮಟನ್ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಚಿಕನ್ ಹಾಗೂ ಮಟನ್ ಬೆಲೆಯು ಗರಿಷ್ಠ ಏರಿಕೆ ಕಂಡಿದೆ. ಹವಾಮಾನ ವೈಪರೀತ್ಯ ಹಾಗೂ ಚಳಿಯಿಂದಾಗಿ ಕುರಿ ಬೆಳವಣಿಗೆ ಕುಸಿತ ಕಂಡಿದ್ದು, ಮಟನ್ ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಪ್ರತಿ ಕೆಜಿ ಮಟನ್ ಬೆಲೆಯು 900 ರೂಪಾಯಿ ಆಗಿದೆ. ಮುಂದಿನ ವಾರ ಒಂದು ಸಾವಿರ ರೂ. ಆಗುವ ಸಾಧ್ಯತೆ ಇದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಚಿಕನ್ ಮತ್ತು ಮಟನ್‌ನ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.












Click it and Unblock the Notifications