ಬೆಂಗಳೂರು: ಪತ್ನಿಯ ಜೊತೆ ಕಳೆದ ಬೆಡ್‌ರೂಂ ಖಾಸಗಿ ವಿಡಿಯೋವನ್ನು ಸ್ನೇಹಿತರಿಗೆ ಶೇರ್ ಮಾಡಿದ ಪತಿ: ಮುಂದೇನಾಯ್ತು?

ಬೆಂಗಳೂರು, ಅಕ್ಟೋಬರ್ 3: ಗಂಡ-ಹೆಂಡತಿ ಜಗಳ ಉಂಡು ತನಕ ಎಂಬ ಗಾದೆ ಮಾತಿತ್ತು. ಆದರೆ, ಈಗ ತುಸು ಬದಲಾವಣೆಯಾಗಿದ್ದು, ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಉದಾಹರಣೆಗಳಿವೆ. ಈ ನಡುಯೇ ಇದೀಗ ಸ್ವಂತ ಗಂಡನೇ ಬೆಡ್ ರೂಮ್ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಪತ್ನಿಯ ವಿಡಿಯೋ ಮಾಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ.

ಹೌದು.. ತನ್ನ ಪತಿ ಬೆಡ್ ರೂಮ್ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ವಿಡಿಯೋ ಮಾಡಿದ್ದಾನೆ ಎಂದು ಪತ್ನಿ ಆರೋಪ ಮಾಡಿದ್ದಾರೆ. ಹೀಗೆ ಗಂಡ-ಹೆಂಡತಿಯ ವಿಡಿಯೋ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲುವರೆಗೂ ಹೋಗಿದ್ದು, ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ನಿ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

Bengaluru Man Arrested for Sharing Bedroom Private Videos of Wife with Friends

ಪತ್ನಿ ಗಂಡ ಸೈಯದ್ ಇನಾಮುಲ್ ಹಕ್ ಎಂಬುವವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಬೆಡ್ ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಗಂಡ-ಹೆಂಡತಿಯ ಖಾಸಗಿ ಕ್ಷಣಗಳನ್ನು ಸೆರೆಹಿಡಿದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಷ್ಟೇ ಸಾಲದೆಂಬಂತೆ ಪತ್ನಿಯೊಂದಿಗಿನ ಖಾಸಗಿ ವಿಡಿಯೋಗಳನ್ನು ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಪತ್ನಿ ಆರೋಪ ಮಾಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪತ್ನಿ ಜೊತೆಗೆ ಕಳೆ ಖಾಸಗಿ ವಿಡಿಯೋವನ್ನು ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎನ್ನಲಾದ ಆರೋಪಿ ಸೈಯದ್ ಈ ಮೊದಲೇ ಮದುವೆ ಆಗಿದ್ದಾನೆ. ಯಾವುದೇ ವಿಚಾರ ತಿಳಿಸದೇ ಕದ್ದುಮುಚ್ಚಿ ಸೈಯದ್‌ ಯುವತಿ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಜೊತೆಗೆ ದೈಹಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದು, ಇದರಿಂದ ನೊಂದ ಯುವತಿ ಈ ಬಗ್ಗೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಪ್ರಕರಣದಲ್ಲಿ ಪತಿ ಸೇರಿದಂತೆ ನಾಲ್ವರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಇಂತಹ ಸುಮಾರು ಘಟನೆಗಳು ನಡೆದಿರುವ ಉದಾಹರಣೆಗಳಿವೆ.

ಯುವತಿಗೆ ಚಾಕು ಹಾಕಿದ ವಿವಾಹಿತ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಯುವತಿಗೆ ವಿವಾಹಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವಂತಹ ನೀಚ ಕೃತ್ಯ ಬೆಂಗಳೂರಿನ ವೈಟ್‌ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯೊಂದರಲ್ಲಿ ನಡೆದಿತ್ತು. ವಿವಾಹ ಆಗಿ ಮಗು ಇದ್ದರೂ ಸಹ ಕೋ ಲಿವಿಂಗ್ ಪಿಜಿಯಲ್ಲಿ ಟೆಕ್ಕಿ ಬಾಬು ಎಂಬಾತ ಒಬ್ಬನೇ ವಾಸ ಇದ್ದನು. ಅದೇ ಪಿಜೆಗೆ ಯುವತಿ ಬಂದು ವಾಸ ಆಗಿದ್ದಳು. ಆಕೆ ಬಾಬುಗೆ ಪರಿಚಯವಾಗಿದ್ದಳು. ಬಳಿಕ ಬಾಬು ಆಕೆಯ ಪೋನ್ ನಂಬರ್ ಪಡೆದಿದ್ದು, ಆಕೆಯೊಂದಿಗೆ ಮಾತನಾಡುತ್ತಿದ್ದನಂತೆ. ಮೂರು ದಿನಗಳ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಇದಕ್ಕೆ ಯುವತಿ ಒಪ್ಪಿರಲಿಲ್ಲ. ಆಗ ಆಕೆಯ ಖಾಸಗಿ ಪೋಟೋ ಇಟ್ಟುಕೊಂಡು 70,000 ರೂಪಾಯಿ ಹಣಕ್ಕೂ ಬೇಡಿಕೆ ಇಟ್ಟಿದ್ದನಂತೆ. ಕೊಡದಿದ್ದರೆ, ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ ಎಂದು ವರದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+