Bengaluru Parking: ಬೆಂಗಳೂರಿನ ಈ ಮಾಲ್‌ನಲ್ಲಿ ಒಂದು ಗಂಟೆ ಕಾರು ಪಾರ್ಕಿಂಗ್‌ಗೆ 1,000 ರೂಪಾಯಿ!
ಬೆಂಗಳೂರು, ಮಾರ್ಚ್ 06: ಬೆಂಗಳೂರಿನಲ್ಲಿ ಬಾಡಿಗೆ ಅಂತು ಗಗನಕ್ಕೆ ಏರಿರೋದು ಗೊತ್ತೆ ಇದೆ. ಸಿಲಿಕಾನ್ ಸಿಟಿಯಲ್ಲಿ ಜಾಗ ತಗೋಳೋದು ಮಧ್ಯಮ ವರ್ಗಕ್ಕೆ ಗಗನ ಕುಸುಮವೆ. ಬೆಂಗಳೂರಿನ ಮಾಲ್‌ಗಳಲ್ಲಿ ಪಾರ್ಕಿಂಗ್ ರೇಟ್ ತುಸು ಜಾಸ್ತಿನೇ ಇದೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಸಕತ್ ವೈರಲ್ ಆಗುತ್ತಿದೆ.
ಶಾಪಿಂಗ್ ಮಾಲ್ ಒಂದರಲ್ಲಿ 'ಪ್ರೀಮಿಯಂ ಪಾರ್ಕಿಂಗ್'ಗೆ ಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ ಎಂಬ ಸೈನ್ ಬೋರ್ಡ್ ಹಾಕಲಾಗಿದ್ದು, ಅದರ ಫೋಟೋ ಸಕತ್ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಹೌಹಾರಿದ್ದಾರೆ. ಇದು ಬೆಂಗಳೂರೋ.. ಸಿಂಗಾಪುರ, ಹಾಂಗ್‌ಕಾಂಗ್, ಲಂಡನ್, ದುಬೈಯೋ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

'ಪ್ರೀಮಿಯಂ ಪಾರ್ಕಿಂಗ್'ಗೆ ಗಂಟೆಗೆ 1,000 ರೂಪಾಯಿ ಶುಲ್ಕ
ಬೆಂಗಳೂರಿನ ಪ್ರಸಿದ್ಧ ಯುಬಿ ಸಿಟಿ ಶಾಪಿಂಗ್ ಮಾಲ್ "ಪ್ರೀಮಿಯಂ ಪಾರ್ಕಿಂಗ್" ಗೆ ಪ್ರತಿ ಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸುತ್ತಿದೆ. ಸೈನ್ ಬೋರ್ಡ್ ತೋರಿಸುವ ಫೋಟೋ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಕಾಮೆಂಟ್‌ಗಳ ಮೂಲಕ ಪಾರ್ಕಿಂಗ್ ಬೋರ್ಡ್ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
'ಬೆಂಗಳೂರು ಸ್ಯಾನ್ ಫ್ರಾನ್ಸಿಸ್ಕೋ ಆಗಲು ಪ್ರಯತ್ನಿಸುತ್ತಿದೆ...', 'ಅವರು ಬೆಂಗಳೂರನ್ನು ಸಿಂಗಾಪುರ, ಹಾಂಗ್‌ಕಾಂಗ್, ಲಂಡನ್, ದುಬೈ ಮಾಡುತ್ತಿದ್ದಾರೆ ಅಲ್ಲವೇ?..., 'ಒಳಗಡೆ ಕಾರಿಗೆ ಸ್ನಾನ ಮಾಡಿಸುತ್ತಾರೆಯೇ ಅಥವಾ ಡೈಮಂಡ್ ಫೇಶಿಯಲ್ ಮಾಡುತ್ತಾರೆಯೇ...?' ಕಾರಿಗೆ ಒಳಗಡೆ ಏನಾದರೂ ಬ್ಲೂ ಟಿಕ್ ಸಿಗುತ್ತದೆಯೇ... ಸೇರಿದಂತೆ ಹಲವು ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.

'ಪ್ರೀಮಿಯಂ ಪಾರ್ಕಿಂಗ್ ಎಂದರೇನು..? ಕಾರ್ ಪಾರ್ಕಿಂಗ್ ಜೊತೆಗೆ 1 ತಿಂಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀಮಗೆ ಸ್ಟಾಕ್ ಟಿಪ್ ಏನಾದ್ರು ಸಿಗುತ್ತಾ...? ಹೌದು ಅನ್ನೋದಾದರೇ ಈ ದುಡ್ದು ಅಲ್ಲಿಗೆ ಸರಿ ಹೋಗುತ್ತದೆ' ಎಂದು ಒಬ್ಬ ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
ಪ್ರೀಮಿಯಂ ಪಾರ್ಕಿಂಗ್ 2012 ರಿಂದಲೂ ಇದೆ!
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು 2012 ರಿಂದಲೂ ಇದೆ ಇದೇನು ಹೊಸದೇನಲ್ಲ ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಒಂದು ವರ್ಷ ಕಾರು ಪಾರ್ಕ್ ಮಾಡಿದರೇ ಎಷ್ಟು ಹಣ ಆಗುತ್ತದೆ ಎಂಬುದನ್ನು ಲೆಕ್ಕಾ ಹಾಕಿದ್ದಾರೆ. ಅವರ ವಿವರವಾದ ಹಣಕಾಸು ವಿಶ್ಲೇಷಣೆ ಪ್ರಕಾರ, ದಿನಕ್ಕೆ ಸರಾಸರಿ 10 ಗಂಟೆಗಳಿಗೆ ಗಂಟೆಗೆ 1000 ರೂಪಾಯಿ ಎಂದರೆ ದಿನಕ್ಕೆ 10,000 ರೂಪಾಯಿ ಆಗುತ್ತದೆ. ಅಂದರೆ ತಿಂಗಳಿಗೆ 3 ಲಕ್ಷ ಅಥವಾ ವರ್ಷಕ್ಕೆ 36 ಲಕ್ಷ. ಹೂಡಿಕೆಯ ಮೇಲೆ ನಿರೀಕ್ಷಿತ ಆದಾಯವು ವರ್ಷಕ್ಕೆ 20% ಆಗಿದ್ದರೆ ಆ ಭೂಮಿಯ ಬೆಲೆ 36 ಲಕ್ಷ / 0.2 = 1.8 ಕೋಟಿ ಆಗಿರಬೇಕು" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಮತ್ತೆ ಕೆಲವರು, 'ಇದೇನು ದೊಡ್ಡ ವಿಷಯವಲ್ಲ, ಒಂದು ಪೋರ್ಚ್, ಜುಗಾರ್, ಫೆರಾರಿ ಮಾಲೀಕರು ಗಂಟೆಗೆ 1000 ಆರಾವಾಗಿ ನೀಡುತ್ತಾರೆ. ಆಲ್ಟೋ, 800, ವ್ಯಾಗನೋರ್ ಇತ್ಯಾದಿಗಳನ್ನು ಮನೆಯಲ್ಲಿ ನಿಲ್ಲಿಸಿ ಮೆಟ್ರೋ, ಬಸ್‌ನಲ್ಲಿ ಬನ್ನಿ" ಎಂದಿದ್ದಾರೆ. ಮತ್ತೊಬ್ಬರು ಕೋಟ್ಯಾಂತರ ರೂಪಾಯಿ ಕೊಟ್ಟು ಕಾರು ಕೊಂಡವರು, ಸಾವಿರ ರೂಪಾಯಿಯನ್ನು ನೋಡಲ್ಲ ಬದಲಿಗೆ ತನ್ನ ಕಾರಿನ ಸೇಫ್ಟಿ ನೋಡುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications