ಕರ್ನಾಟಕದ 18 ಗ್ರಾಮಗಳ ವ್ಯಾಪ್ತಿಯ ಪ್ರಮುಖ ಯೋಜನೆ: ಭೂಸ್ವಾಧೀನಕ್ಕೆ ಪರಿಹಾರ ನಿಗದಿ, ಎಷ್ಟು ಕೋಟಿ ?
ಬೆಂಗಳೂರಿನ ಪ್ರಮುಖ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಹಾರ ನೀಡುವುದಕ್ಕೆ ಮುಂದಾಗಿದೆ. ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆಗೆ ಭೂಮಿ ನೀಡುವವರಿಗೆ ಅಥವಾ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನಿಗದಿ ಮಾಡಲಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಭೂಮಿಗೆ ಎರಡುಪಟ್ಟು ಅಥವಾ ಎರಡರಷ್ಟು ಪರಿಹಾರ ಸಿಗಲಿದೆ. ಗ್ರಾಮೀಣ ಭಾಗದವರಿಗೆ ಮೂರುಪಟ್ಟು ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆಗೆ ಕೊನೆಗೂ ಪರಿಹಾರ ನೀಡುವ ವಿಚಾರ ಮುನ್ನೆಗೆ ಬಂದಿದೆ. 2024 - 25ನೇ ಸಾಲಿನ ಮಾರ್ಗಸೂಚಿಯ ಅನ್ವಯ ಪರಿಹಾರ ನಿಗದಿ ಮಾಡುವುದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಜುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಿಡಿಎ ಸೂಕ್ತ ಪರಿಹಾರ ನೀಡುತ್ತಿಲ್ಲ ಹಾಗೂ ಪರಿಹಾರವನ್ನು ತುಂಬಾ ವಿಳಂಭವಾಗಿ ಅಥವಾ ಹಲವು ವರ್ಷಗಳ ನಂತರ ನೀಡುತ್ತಿದೆ ಎಂದು ಕೆಲವು ಭೂಮಿದಾರರು ಆರೋಪಿಸಿದ್ದರು. ಅಲ್ಲದೇ ಇದೇ ಕಾರಣಕ್ಕೆ ಬಿಡಿಎಗೆ ಜಾಗ ಬಿಟ್ಟುಕೊಡುವುದಿಲ್ಲ ಎಂದೂ ಕೆಲವು ಆಸ್ತಿದಾರರು ಹೇಳಿರುವುದು ಇದೆ. ಇದೀಗ ಈ ಗೊಂದಲಗಳಿಗೆ ಬಿಡಿಎ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. 18 ಗ್ರಾಮಗಳಲ್ಲಿ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದು ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು Deccan Herald ವರದಿ ಮಾಡಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಲ್ಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರಕ್ಕೆ ರೂಪಿಸಿದ ಪ್ರಮುಖ ಯೋಜನೆಗಳಲ್ಲಿ ಇದು ಸಹ ಒಂದಾಗಿದೆ. ಬೆಂಗಳೂರಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವ ಉದ್ದೇಶದಿಂದಾಗಿ 10 ಪಥದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಈ ಪ್ರಮುಖ ರಸ್ತೆಯು ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಯನ್ನು ಸಹ ಸಂಪರ್ಕಿಸುತ್ತದೆ. ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಿದೆ.
18 ಗ್ರಾಮಗಳಲ್ಲಿ ಭೂಸ್ವಾಧೀನ: ಇನ್ನು ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ವ್ಯಾಪ್ತಿಗೆ 18 ಗ್ರಾಮಗಳು ಬರಲಿವೆ. ಸರ್ಜಾಪುರ, ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆ ಹಾಗೂ ಹೊಸಕೋಟೆ ರಸ್ತೆ ಸೇರಿದಂತೆ ಹಲವು ಗ್ರಾಮಗಳ ಮೂಲಕ ಈ ಯೋಜನೆ ಹಾದು ಹೋಗಲಿದೆ. ಇದೀಗ 18 ಗ್ರಾಮಗಳಿಗೆ ಭೂಸ್ವಾಧೀನಕ್ಕೆ ಬಿಡಿಎ ದರ ನಿಗದಿ ಮಾಡಿದೆ.
ಈ ಪೆರಿಫೆರಲ್ ರಿಂಗ್ ರಸ್ತೆಗೆ 2006 - 2027ನೇ ಸಾಲಿನಲ್ಲಿಯೇ 1860 ಎಕರೆ ಭೂಮಿ ಗುರತಿಸಲಾಗಿತ್ತು. 1894ರ ಕಾಯಿದೆಯಂತೆ ಪರಿಹಾರ ಕೊಡುವುದಕ್ಕೆ ಅವಕಾಶವಿಲ್ಲ ಎಂದಿರುವ ಬಿಡಿಎ, 2013ರ ಕಾಯಿದೆ ಎರಡನ್ನೂ ಸಮತೋಲನ ಮಾಡಿ ಪರಿಹಾರ ನಿಗದಿಪಡಿಸುವುದಕ್ಕೆ ನಿರ್ಧರಿಸಿದೆ. ಆದರೆ, ರೈತರು ಮಾರುಕಟ್ಟೆ ಮೌಲ್ಯ ಆಧರಿಸಿ ಪರಿಹಾರ ನಿಗದಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಇನ್ನು ಬಿಡಿಎ ಹೊಸ ಪ್ರಸ್ತಾವನೆಯಂತೆ ವರ್ತೂರಿನಲ್ಲಿ ಒಂದು ಎಕರೆಗೆ 6.75 ಕೋಟಿ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ. ಆದರೆ ಸರ್ಕಾರದ ಈ ಪರಿಹಾರವನ್ನು ರೈತರು ವಿರೋಧಿಸಿದ್ದಾರೆ. ಈ ಪರಿಹಾರ ಮೊತ್ತವು ತುಂಬಾ ಕಡಿಮೆಯಾಗಿದೆ. ಈಗ ಇರುವ ಮಾರುಕಟ್ಟೆಯ ದರಕ್ಕೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ರೈತರ ವಿರೋಧ: ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿಗದಿ ಮಾಡಿರುವ ಪರಿಹಾರವು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರಮೊತ್ತವನ್ನು ನಿಗದಿ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಕರ್ನಾಟಕದ ಬಹುದೊಡ್ಡ ಯೋಜನೆ: ಇನ್ನೂ ಈ ಯೋಜನೆಯು ಕರ್ನಾಟಕದ ಮಟ್ಟಿಗೆ ಬಹುದೊಡ್ಡ ಯೋಜನೆ ಎಂದೇ ಪರಿಗಣಿಸಲಾಗಿದೆ. ಕರ್ನಾಟಕದ 18 ಪ್ರಮುಖ ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ. ಆದರೆ ಒಮ್ಮತ ಮೂಡದ ಕಾರಣಕ್ಕೆ ಈ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ.












Click it and Unblock the Notifications