ಬೆಂಗಳೂರು-ಮಧುರೈಗೆ ಪ್ರಯಾಣಿಕನಿಗೆ ಕೋವಿಡ್ -19 ಸೋಂಕು
ಬೆಂಗಳೂರು, ಮೇ 28 : ಬೆಂಗಳೂರಿನಿಂದ ಮಧುರೈಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದ ವ್ಯಕ್ತಿಗೆ ಕೋವಿಡ್ - 19 ಸೋಂಕು ತಗುಲಿದೆ. ಸೋಮವಾರದಿಂದ ದೇಶಿಯ ವಿಮಾನಯಾನ ಸೇವೆ ದೇಶದಲ್ಲಿ ಆರಂಭವಾಗಿದೆ.
Recommended Video
ಗುರುವಾರ ಇಂಡಿಗೋ ಸಂಸ್ಥೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದೆ. ಮೇ 27ರಂದು ಬೆಂಗಳೂರಿನಿಂದ ಮಧುರೈಗೆ 6ಇ 7214 ವಿಮಾನದಲ್ಲಿ ಸಂಚಾರ ನಡೆಸಿದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಹೇಳಿದೆ.
ಮಧುರೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಕಡ್ಡಾಯವಾಗಿ ಕೋವಿಡ್ - 19 ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಧರಿಸಿದ್ದ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವಿಮಾನವನ್ನು ಸ್ಯಾನಿಟೈಸ್ ಮಾಡಲಾಗಿದೆ. ವಿಮಾನಯಾನ ಸಚಿವಾಲಯ ಮಾರ್ಗಸೂಚಿ ಅನ್ವಯ ಎಲ್ಲಾ ವಿಮಾನಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ವಿಮಾನದ ಎಲ್ಲಾ ಸಿಬ್ಬಂದಿಗಳಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ. ವಿಮಾನದಲ್ಲಿ ಪ್ರಯಾಣಿಸಿದ ಇತರ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಇಂಡಿಗೋ ಹೇಳಿದೆ.
ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಮೇ 25ರ ಸೋಮವಾರದಿಂದ ದೇಶದಲ್ಲಿ ವಿಮಾನ ಸಂಚಾರ ಆರಂಭಕ್ಕೆ ಅವಕಾಶ ನೀಡಲಾಗಿತ್ತು. ದೇಶಿಯ ವಿಮಾನ ಸಂಚಾರ ಆರಂಭವಾದ ಬಳಿಕ ದೇಶದಲ್ಲಿ ಇದುವರೆಗೆ ನಾಲ್ವರು ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.












Click it and Unblock the Notifications