ಬೆಂಗಳೂರಿನಲ್ಲಿ ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ: ಲೀಕ್ ಆಗ್ತಿದ್ದ ಸಿಲಿಂಡರ್‌ನಿಂದ ದಿಢೀರ್ ಸ್ಪೋಟ! Video
ಬೆಂಗಳೂರು: ಮನೆಗೆ ಎಂದಿನಂತೆ ಗೃಹ ಬಳಕೆಯ ಎಲ್ಅಡುಗೆ ಅನಿಲ ಕೊಡಲು ಬಂದ ಏಜೆನ್ಸಿಯ ಡೆಲಿವರಿ ಬಾಯ್, ಗ್ಯಾಸ್ ದಿಢೀರ್ ಸ್ಪೋಟದಿಂದ ಬೆಚ್ಚಿ ಬಿದ್ದಿದ್ದಾನೆ. ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ಒಂದು ಕ್ಷಣ ಎಂಥವರ ಎದೆಯನ್ನು ನಡುಗಿಸಿ ಬಿಡುವಂತಿದೆ.
ಗ್ಯಾಸ್ಯ ಸಿಲಿಂಡರ್ ತಲುಪಿಲು ಡೆಲಿವರಿ ಬಾಯ್ ಮನೆ ಬಾಗಿಲಿಗೆ ಬರುವುದನ್ನು ವಿಡಿಯೋದಲ್ಲಿ ತೊರಿಸಲಾಗಿದೆ. ಬಾಗಿಲ ಬಳಿಗೆ ಬಂದು, ಹೆಗಲ ಮೇಲಿದ್ದ 14 ಕೆಜಿ ತೂಕದ ಸಿಲಿಂಡರ್ ಅನ್ನು ಕೆಳಗೆ ಇಟ್ಟು ಅದರ ಮುಚ್ಚಳ ತೆರೆಯುತ್ತಿದ್ದಂತೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಜ್ವಾಲೆ ನೇರವಾಗಿ ಡೆಲಿವರಿ ಬಾಯ್ ಮುಖಕ್ಕೆ ರಾಚಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯ ಪ್ರವೇಶದ್ವಾರದ ಬಳಿ ಇಟ್ಟಾಗ ದುರ್ಘಟನೆ ನಡೆದಿದೆ. ಆಗ ಮನೆಯ ಒಳಗಿದ್ದ ಮಹಿಳೆಯೊಬ್ಬರು ಆಚೆ ಬಂದು ಬೆಂಕಿ ನಂದಿಸಲು ನೀರು ನೀಡಿದ್ದಾರೆ. ಡೆಲಿವರಿ ಬಾಯ್ ಸಮಯ ಪ್ರಜ್ಞೆ ಮೆರೆದು ಬಾಗಿಲಿನಿಂದ ಮತ್ತಷ್ಟು ಹೊರಗೆ ಗ್ಯಾಸ್ ನೂಕಿದ್ದಾನೆ. ಬೆಂಕಿಯ ಜ್ವಾಲೆ ಮಾತ್ರ ಉರಿಯುತ್ತಲೇ ಇದ್ದದ್ದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ಬಾಗಿಲ ಬಳಿ ಇಟ್ಟಿದ್ದ ದೀಪದಿಂದ ದುರ್ಘಟನೆ?
ಆ ಮನೆಯ ಮಹಿಳೆಯು ಮನೆಯಲ್ಲಿ ಎಂದಿನಂತೆ ಪೂಜೆ ನೆರವೇರಿಸಿ, ದೀಪವೊಂದನ್ನು ಮನೆ ಮುಂದಿನ ಬಾಗಿಲ ಬಳಿ ಇಟ್ಟಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದು ಬಾಗಿಲ ಬಳಿ ಸಿಲಿಂಡರ್ ಇಡುತ್ತಿದ್ದಂತೆ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸಿಲಿಂಡರ್ ಮುಂಚಿತವಾಗಿಯೇ ಲೀಕ್ ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸೋರಿಕೆಯ ಸಿಲಿಂಡರ್ ಹಾಗೂ ಎಣ್ಣೆ ದೀಪ ಒಂದೇ ಸ್ಥಳದಲ್ಲಿ ಒಟ್ಟಿಗೆಯಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣವು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದರಲ್ಲದೇ, ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಿಲಿಂಡರ್ ಬೆಂಕಿ ನಂದಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಹಾನಿ, ಪ್ರಾಣ ಹಾನಿ ಸಂಭವಿಸಿಲ್ಲ.
A gas cylinder caught fire during a delivery in Bengaluru's Malleshwaram area on Tuesday after leaking gas allegedly came into contact with a lit oil lamp outside a house.The delivery worker narrowly escaped without injuries, while CCTV footage captured the frightening moments when the fire broke out.The incident occurred within the limits of the Malleshwaram police station when the delivery worker was unloading the cylinder and placing it near the entrance of a house.According to a report by Asianet News, citing preliminary information, the cylinder reportedly had a minor gas leak. The leaking gas is suspected to have caught fire after coming into contact with a traditional oil lamp (diya) burning at the doorstep.The house occupant had reportedly washed the entrance, performed a puja and lit the diya on the threshold shortly before the cylinder was delivered.CCTV footage of the incident shows the delivery worker carrying the cylinder on his shoulder and placing it near the doorway. He appears to have failed to notice the burning lamp. Moments later, the leaking gas came into contact with the flame, triggering a sudden blaze.The fire quickly spread around the cylinder, triggering panic. However, the delivery worker managed to move away from the spot and escaped unhurt. His quick reaction is believed to have prevented a potentially serious accident.Following the incident, Malleshwaram police personnel and fire brigade staff rushed to the spot and inspected the scene. Officials confirmed that no members of the public were injured.The exact circumstances surrounding the suspected gas leak and the subsequent fire are being examined.The incident has once again highlighted the importance of taking precautions while handling LPG cylinders.Residents and delivery personnel are advised to ensure that cylinders are kept away from burning lamps, candles and other open flames during delivery and handling.
— Hate Detector 🔍 (@HateDetectors) November 4, 2026
ಘಟನೆಯಲ್ಲಿ ಬಾಗಿಲ ಮುಂದಿನ ತಡೆಗೋಡೆಗೆ ಹಾಕಿದ್ದ ಬಟ್ಟೆಗಳು ಸುಟ್ಟಿದ್ದು ಬಿಟ್ಟರೆ ಬೇರೆ ಯಾವುದೇ ಹಾನಿ ಉಂಟಾಗಿಲ್ಲ. ಇಂಥಹ ಘಟನೆಗಳು ಗ್ಯಾಸ್ ಏಜೆನ್ಸಿ ಅವರಿಗೂ ಒಂದು ಪಾಠವಾಗಿದೆ. ಡೆಲಿವರಿ ವೇಳೆ ಮುಂದೆ ಇಂಥಹ ಲೀಕೇಜ್, ಅವಘಡ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.


Click it and Unblock the Notifications
