20 ಬ್ಯಾಕ್‌ಲಾಗ್, ಜೊಮ್ಯಾಟೊ ಡೆಲಿವರಿ ಬಾಯ್.. ಈಗ ವಿಮಾನ ಪೈಲಟ್: ಇದು ಯುವಕನ ರೋಚಕ ಯಶೋಗಾಥೆ!

ಜೀವನದಲ್ಲಿ ಕನಸು ಕಾಣುವುದು ಸುಲಭ, ಆದರೆ ಆ ಕನಸನ್ನ ನನಸಾಗಿಸಿಕೊಳ್ಳುವ ಹಾದಿ ಎಂದಿಗೂ ಸುಲಭವಾಗಿರುವುದಿಲ್ಲ. ಆ ದಾರಿಯಲ್ಲಿ ಎದುರಾಗುವ ಅಡೆತಡೆಗಳಿಗೆ ಹೆದರಿ ಅನೇಕರು ಅರ್ಧದಲ್ಲೇ ತಮ್ಮ ಗುರಿಯನ್ನ ಕೈಬಿಡುತ್ತಾರೆ. ಆದರೆ, ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಹೌದು, 22ನೇ ವಯಸ್ಸಿನಲ್ಲಿ ಓದುತ್ತಿದ್ದ ಇಂಜಿನಿಯರಿಂಗ್‌ನಲ್ಲಿ ಬರೊಬ್ಬರಿ 20 ಬ್ಯಾಕ್‌ಲಾಗ್‌ಗಳನ್ನ ಉಳಿಸಿಕೊಂಡು, ಜೀವನ ಸಾಗಿಸಲು ಮಳೆ-ಬಿಸಿಲೆನ್ನದೆ ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ, ಇಂದು ತನ್ನ 29ನೇ ವಯಸ್ಸಿನಲ್ಲಿ ವಿಮಾನ ಹಾರಿಸುವ ಪೈಲಟ್ ಆಗಿ ಬೆಳೆದು ನಿಂತಿದ್ದಾನೆ. ಈ ಯುವಕನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವಜನತೆಗೆ ಸ್ಫೂರ್ತಿಯಾಗಿದೆ.

From Zomato Delivery Boy To A Pilot The Inspiring Journey Of A 29-Year-Old Defying All The Odds

ಇಂಜಿನಿಯರಿಂಗ್ ಬ್ಯಾಕ್‌ಲಾಗ್

ಯಾವುದೇ ಒಬ್ಬ ವಿದ್ಯಾರ್ಥಿಗೆ ಇಂಜಿನಿಯರಿಂಗ್‌ನಲ್ಲಿ 20 ವಿಷಯಗಳು ಉಳಿದುಕೊಂಡಿವೆ ಎಂದರೆ, ಸಮಾಜ ಆತನನ್ನ ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಆತನಿಗೆ ಭವಿಷ್ಯವಿಲ್ಲ, ಆತನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಈ ಯುವಕ ಪರಿಸ್ಥಿತಿಯೂ ಇದೇ ಆಗಿತ್ತು. ಒಂದೆಡೆ ಓದಿನಲ್ಲಿ ಹಿನ್ನಡೆ, ಮತ್ತೊಂದೆಡೆ ಜೀವನ ನಿರ್ವಹಣೆಯ ಸವಾಲು.

ಹೀಗಾಗಿ ಬೈಕ್‌ ಹತ್ತಿ ಮನೆಮನೆಗೆ ಆಹಾರ ತಲುಪಿಸುವ ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದ. ಟ್ರಾಫಿಕ್‌ನಲ್ಲಿ ಬೈಕ್ ಓಡಿಸುತ್ತಾ, ಜನರ ಬೈಗುಳಗಳನ್ನ ಕೇಳುತ್ತಾ ಕೆಲಸ ಮಾಡುತ್ತಿದ್ದರೂ, ಆತನ ಮನಸ್ಸಿನಲ್ಲಿ ಮಾತ್ರ ಆಕಾಶದಲ್ಲಿ ಹಾರಾಡುವ ವಿಮಾನದ ಪೈಲಟ್ ಆಗಬೇಕೆಂಬ ಕನಸು ಸದಾ ಜೀವಂತವಾಗಿತ್ತು.

ಸತತ ಪ್ರಯತ್ನ: ಅಸಾಧ್ಯವೆನಿಸಿದ ಕನಸಿನತ್ತ ಹೆಜ್ಜೆ

ಸಾಮಾನ್ಯವಾಗಿ ಕನಸುಗಳು ನಾವು ಅಂದುಕೊಂಡಷ್ಟು ಬೇಗ ನನಸಾಗುವುದಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನ ಅಸಾಧ್ಯ ಎಂದು ನಿರ್ಧರಿಸಬಾರದು. 22ನೇ ವಯಸ್ಸಿನಿಂದ 29ನೇ ವಯಸ್ಸಿನವರೆಗಿನ ಈ 7 ವರ್ಷಗಳ ಸುದೀರ್ಘ ಪಯಣದಲ್ಲಿ ಈ ಯುವಕ ಎದುರಿಸಿದ ಕಷ್ಟಗಳು ಒಂದೆರಡಲ್ಲ. ತಾನು ಅಂದುಕೊಂಡಿದ್ದನ್ನ ಸಾಧಿಸಲೇಬೇಕು ಎಂಬ ಹಠದಿಂದ, ಹಗಲಿರುಳು ಕಷ್ಟಪಟ್ಟು ಹಣ ಕೂಡಿಟ್ಟು, ಪೈಲಟ್ ತರಬೇತಿಗೆ ಸೇರಿಕೊಂಡ.

"ನನಗೆ ಇದು ಬೇಕು" ಎಂದು ಕನಸು ಕಂಡ ದಿನದಿಂದ "ನಾನು ಇದನ್ನು ಅಂತಿಮವಾಗಿ ಸಾಧಿಸಿದೆ" ಎಂಬ ದಿನದವರೆಗಿನ ಅಂತರದಲ್ಲಿ ಜೀವನ ಕಲಿಸಿದ ಪಾಠಗಳು ಆತನನ್ನು ಮತ್ತಷ್ಟು ಗಟ್ಟಿಯಾಗಿಸಿದವು. ಇದೀಗ 29ನೇ ವಯಸ್ಸಿನಲ್ಲಿ ಆತ ಖಾಸಗಿ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ.

ವಾಣಿಜ್ಯ ಪೈಲಟ್ ಆಗುವ ಗುರಿ

ಖಾಸಗಿ ಪೈಲಟ್ ತರಬೇತಿ ಮುಗಿಸಿರುವ ಈ ಯುವಕ, ಈಗ ವಾಣಿಜ್ಯ ಪೈಲಟ್ ಆಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾನೆ. ಬೀದಿ ಬೀದಿಗಳಲ್ಲಿ ಬೈಕ್‌ ಓಡಿಸುತ್ತಿದ್ದ ಕೈಗಳು ಇಂದು ಕೋಟ್ಯಂತರ ರೂಪಾಯಿ ಬೆಲೆಬಾಳುವ ವಿಮಾನದ ಸ್ಟೀರಿಂಗ್ ಹಿಡಿದಿವೆ. ಒಂದು ಕನಸು ನನಸಾಗಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡ ಮಾತ್ರಕ್ಕೆ ಅದು ಸೋಲೆಂದು ಭಾವಿಸಬಾರದು ಎಂಬುದನ್ನ ಈ ಕಥೆ ಜಗತ್ತಿಗೆ ಸಾರಿದೆ.

ಸಮಯ ಮತ್ತು ಸಂದರ್ಭಗಳು ನಮ್ಮ ವಿರುದ್ಧವಾಗಿದ್ದಾಗ, ಎಲ್ಲರೂ ನಮ್ಮನ್ನು ಕೈಬಿಟ್ಟಾಗ, ನಮ್ಮ ಮೇಲಿನ ನಂಬಿಕೆ ಮಾತ್ರ ನಮ್ಮನ್ನ ಗುರಿ ತಲುಪುವಂತೆ ಮಾಡುತ್ತದೆ. ಸೋಲುಗಳು ಶಾಶ್ವತವಲ್ಲ, ನಿರಂತರ ಪ್ರಯತ್ನ ಮತ್ತು ಛಲವಿದ್ದರೆ ಜೊಮ್ಯಾಟೊ ಡೆಲಿವರಿ ಬಾಯ್ ಕೂಡ ಪೈಲಟ್ ಆಗಬಹುದು ಎಂಬುದಕ್ಕೆ ಈ ಯುವಕನ ಜೀವನವೇ ದೊಡ್ಡ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+