November 2026 New Rules: ನವೆಂಬರ್ 1ರಿಂದ ಎಲ್‌ಪಿಜಿ ಸೇರಿದಂತೆ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ

November 2026 New Rules: ಅಕ್ಟೋಬರ್ ಮುಗಿದು ನವೆಂಬರ್ ಎಂಟ್ರಿಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ನವೆಂಬರ್ ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ದರ ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರತಿ ತಿಂಗಳ ಮೊದಲ ದಿನದಂದು ಸರ್ಕಾರ ಹಾಗೂ ವಿವಿಧ ಆಡಳಿತಾತ್ಮಕ ಸಂಸ್ಥೆಗಳು ಹೊಸ ನಿಯಮಗಳನ್ನು ಜಾರಿಗೆ ತರುತ್ತಲಿರುತ್ತವೆ. ಅದರಂತೆಯೇ ಇದೀಗ ನವೆಂಬರ್ 1ರಿಂದಲೇ ಸಾರ್ವಜನಿಕರ ದೈನಂದಿನ ಜೀವನ, ಬಜೆಟ್ ಹಾಗೂ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುವ ಹಲವು ಮಹತ್ವದ ಬದಲಾವಣೆಗಳಾಗಲಿವೆ.

November 2026 New Rules LPG Gas Prices Nandini Milk Rates Train Booking and Banking rules Changes

ಹಾಲಿನ ದರ, ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ

* ಕೆಎಂಎಫ್‌ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸುತ್ತಿದೆ. ಇದರ ಜೊತೆಗೆ ಬೆಣ್ಣೆ, ತುಪ್ಪ, ಪನ್ನೀರ್ ಸೇರಿದಂತೆ ಇತರ ಹಾಲಿನ ಉತ್ಪನ್ನಗಳ ದರವೂ ನವೆಂಬರ್ 1ರಿಂದ ಹೆಚ್ಚಳ ಆಗಲಿವೆ.

* ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ: ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಹಾಗೂ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಿವೆ. ಅಲ್ಲದೆ, ಎಲ್‌ಪಿಜಿ ಸಬ್ಸಿಡಿ ಪಡೆಯಲು ಗ್ರಾಹಕರು ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಸಬ್ಸಿಡಿ ಹಣ ಜಮೆ ಆಗುವುದಿಲ್ಲ.

ರೈಲ್ವೆ ಮುಂಗಡ ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ

ಭಾರತೀಯ ರೈಲ್ವೆಯು ಟಿಕೆಟ್ ಬುಕಿಂಗ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಈ ಮೊದಲು ಪ್ರಯಾಣದ ದಿನಾಂಕಕ್ಕಿಂತ 120 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಅವಕಾಶ ಇತ್ತು. ಈಗ ಈ ಮಿತಿಯನ್ನು 60 ದಿನಗಳಿಗೆ (2 ತಿಂಗಳು) ಇಳಿಸಲಾಗಿದೆ. ಆದರೆ ಈಗಾಗಲೇ 120 ದಿನಗಳ ಮುಂಚಿತವಾಗಿ ಬುಕ್ ಮಾಡಲಾದ ಟಿಕೆಟ್‌ಗಳಿಗೆ ಇದು ಅನ್ವಯ ಆಗುವುದಿಲ್ಲ.

ಪಿಂಚಣಿದಾರರಿಗೆ ಮಹತ್ವದ ಮಾಹಿತಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಿಂಚಣಿದಾರರು ತಮ್ಮ ಪಿಂಚಣಿ ನಿರಂತರವಾಗಿ ಪಡೆಯಲು ವಾರ್ಷಿಕ 'ಡಿಜಿಟಲ್ ಲೈಫ್
ಸರ್ಟಿಫಿಕೇಟ್' ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಪಿಂಚಣಿದಾರರು ನವೆಂಬರ್ 30ರೊಳಗೆ ಜೀವನ್ ಪ್ರಮಾನ್ ಪೋರ್ಟಲ್, ಬ್ಯಾಂಕ್, ಅಂಚೆ ಕಚೇರಿ ಅಥವಾ ಡೋರ್‌ಸ್ಟೆಪ್ ಬ್ಯಾಂಕಿಂಗ್ ಮೂಲಕ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ, ಪಿಂಚಣಿ ಸ್ಥಗಿತಗೊಳ್ಳಬಹುದು.

ಟೆಲಿಕಾಂ ನಿಯಮಗಳು

* ಸ್ಪ್ಯಾಮ್ ಸಂದೇಶ ತಡೆ: ಸೈಬರ್ ವಂಚನೆ ತಡೆಯಲು ಟ್ರಾಯ್ (TRAI) ಕಟ್ಟುನಿಟ್ಟಿನ ನಿಯಮ ತಂದಿದ್ದು, ಟೆಲಿಕಾಂ ಸಂಸ್ಥೆಗಳು ಬ್ಯಾಂಕ್ ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಬರುವ ಸಂದೇಶಗಳನ್ನು ಟ್ರೇಸ್ ಮಾಡುವ ವ್ಯವಸ್ಥೆ ಜಾರಿಗೆ ತರಲಿವೆ.

* ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಾಗ ಕರೆ ಮಾಡುವವರ ಹೆಸರು ಮೊಬೈಲ್ ಪರದೆಯ ಮೇಲೆ ಕಾಣಿಸುವ ತಂತ್ರಜ್ಞಾನ ಹಂತ-ಹಂತವಾಗಿ ಜಾರಿಯಾಗಲಿದೆ.

ಬ್ಯಾಂಕ್ ಖಾತೆ ಹಾಗೂ ಲಾಕರ್‌ಗೆ 4 ನಾಮಿನಿಗಳ ಅವಕಾಶ

ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಲಭಗೊಳಿಸಲಾಗಿದ್ದು, ಖಾತೆದಾರರು ಹಾಗೂ ಸೇಫ್ ಡೆಪಾಸಿಟ್ ಲಾಕರ್ ಹೊಂದಿರುವವರು ಗರಿಷ್ಠ 4 ಜನರವರೆಗೆ ನಾಮಿನಿಗಳನ್ನು ಕೊಡಬಹುದು. ಪ್ರತಿಯೊಬ್ಬ ನಾಮಿನಿಗೂ ಶೇರ್‌ ಪ್ರಮಾಣವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಇದು ತುರ್ತು ಸಂದರ್ಭಗಳಲ್ಲಿ ಕುಟುಂಬಸ್ಥರಿಗೆ ಅನುಕೂಲ ಆಗಲಿದೆ.

ಫಾಸ್ಟ್‌ಟ್ಯಾಗ್ ಸಂಬಂಧ ಹೊಸ ನಿಯಮ

ಟೋಲ್ ಪ್ಲಾಜಾ ಸಮೀಪ ವಾಸಿಸುವ ಸ್ಥಳೀಯ ವಾಹನ ಸವಾರರಿಗೆ ಅನುಕೂಲ ಆಗುವಂತೆ ಎನ್‌ಹೆಚ್‌ಎಐ 'ರಿಯಾಯಿತಿ ದರದ ವಾರ್ಷಿಕ ಸ್ಥಳೀಯ ಪಾಸ್' ಪರಿಚಯಿಸಿದೆ. ನಗರ ಸಭೆ/ಪುರಸಭೆ ಮಿತಿಯ ಹೊರಗಿರುವ ಟೋಲ್‌ಗಳಿಗೆ ₹1,500 ಹಾಗೂ ನಗರ ಸಭೆ/ಪುರಸಭೆ ವ್ಯಾಪ್ತಿಯ ಒಳಗಿರುವ ಟೋಲ್‌ಗಳಿಗೆ ₹3,000 ರೂಪಾಯಿ ನಿಗದಿಪಡಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆಯ ಮೇಲಿನ ಶುಲ್ಕ ಪರಿಷ್ಕರಣೆ

ಪ್ರಮುಖ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಹಾಗೂ ಶುಲ್ಕ ನೀತಿಗಳನ್ನು ಬದಲಾಯಿಸುತ್ತಿವೆ. ಕ್ರೆಡಿಟ್ ಕಾರ್ಡ್ ಬಳಸಿ ಹೆಚ್ಚಿನ ಮೊತ್ತದ ಕರೆಂಟ್/ನೀರಿನ ಬಿಲ್ ಪಾವತಿ, ಶಾಲಾ ಶುಲ್ಕ, ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ಮನೆ ಬಾಡಿಗೆ ಪಾವತಿ ಅಥವಾ ವ್ಯಾಲೆಟ್‌ಗೆ ಹಣ ಲೋಡ್ ಮಾಡಿದರೆ ಶೇಕಡ 1ರ ವರೆಗೆ ಹೆಚ್ಚುವರಿ ಸರ್ಚಾರ್ಜ್ ವಿಧಿಸಲಾಗುತ್ತದೆ. ಒಟ್ಟಿನಲ್ಲಿ ಪ್ರತಿ ತಿಂಗಳಂತೆ ನವೆಂಬರ್ ಆರಂಭದಲ್ಲೇ ಈ ಹೊಸ ನಿಯಮಗಳು ಜಾರಿಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+