ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಗೂ ಜನರ ವಿರೋಧ
ಬೆಂಗಳೂರು, ಜುಲೈ 23: ಶಿವಾನಂದ ಸರ್ಕಲ್ ಸಮೀಪ ನಿರ್ಮಾಣವಾಗಲಿರುವ ಸ್ಟೀಲ್ ಬ್ರಿಡ್ಜ್ ಗೂ ಜನ ವಿರೋಧ ವ್ಯಕ್ತಪಡಿಸಿದ್ದು ಇಂದು ಶಾಂತಿಯುತ ಪ್ರತಿಭಟನೆ ನಡೆಸಿದರು.
ರೇಸ್ ಕೋರ್ಸ್ ರಸ್ತೆಯಿಂದ ಶಿವಾನಂದ ಸರ್ಕಲ್ ವರೆಗೆ 19.85 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ಜೂನ್ 8ರಂದು ರಾಜ್ಯ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಭೂ ಪರಭಾರೆ ಸೇರಿ ಒಟ್ಟಾರೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವೆಚ್ಚ 40 ಕೋಟಿ ದಾಟಲಿದೆ.

ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗಿನ 1800 ಕೋಟಿ ರೂಪಾಯಿಯ ಫ್ಲೈ ಓವರ್ ನಿರ್ಮಾಣವನ್ನು ಜನರ ಪ್ರತಿಭಟನೆಯ ನಂತರ ಸರಕಾರ ಕೈಬಿಟ್ಟಿತ್ತು. ಇದೀಗ ಈ ಫ್ಲೈಓವರ್ ನಿರ್ಮಾಣವನ್ನೂ ಜನ ವಿರೋಧಿಸುತ್ತಿದ್ದಾರೆ.

ಹರೇ ಕೃಷ್ಣ ರಸ್ತೆ ಮತ್ತು ಕುಮಾರ್ ಕೃಪಾ ರಸ್ತೆಯ ಮಧ್ಯೆ ಶಿವಾನಂದ ಸರ್ಕಲ್ ನಲ್ಲಿ ಈ ಫ್ಲೈಓವರ್ ನಿರ್ಮಾಣವಾಗಲಿದೆ. ಎಂ ವೆಂಕಟ ರಾವ್ ಇನ್ಫ್ರಾ ಪ್ರಾಜೆಕ್ಟ್ ಈ ನಿರ್ಮಾಣ ಮಾಡಲಿದ್ದು ಒಂದು ವರ್ಷದೊಳಗೆ ನಿರ್ಮಾಣ ಮುಗಿಯಲಿದೆ.













Click it and Unblock the Notifications