Bengaluru Rains: ವಾಯುಭಾರ ಕುಸಿತ: ನಗರದಲ್ಲಿ ಇಂದು ಧಾರಾಕಾರ ಮಳೆ! ಸಂಚಾರ ಅಸ್ತವ್ಯಸ್ತ

Bengaluru Weather Alert: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರವು ಸಂಜೆ ಮಳೆ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವದಿಂದಾಗಿ ನಗರದಲ್ಲಿ ಕೆಲ ದಿನಗಳಿಂದ ಜೋರು ಮಳೆ ಸುರಿಯುತ್ತಿದೆ. ಇಂದು ಸಂಜೆ ವಿದ್ಯಾಪೀಠದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಅಧಿಕೃತ ಮಾಹಿತಿ ನೀಡಿದೆ. ನಗರದ ಮಳೆ ಮುನ್ಸೂಚನೆಯ ವಿವರ ಇಲ್ಲಿದೆ.

ಬದಲಾಗುತ್ತಿರುವ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ನಗರದಲ್ಲಿ ಮಳೆ, ಚಳಿಯ ವಾತಾವರಣ ಕಂಡು ಬರುತ್ತಿದೆ. ಇಂದು ಬೆಳಗ್ಗೆಯಿಂದ ಸಾಮಾನ್ಯದಂತಿದ್ದ ಹವಾಮಾನವು ಸಂಜೆಯಾಗುತ್ತಿದ್ದಂತೆ ದಿಢೀರ್ ಮಳೆ ಆಯಿತು. ಬಿಇಎಲ್ ಕ್ಯಾಂಪರ್, ಹೊಸ ತಿಪ್ಪಸಂದ್ರ, ಬೊಮ್ಮನಹಳ್ಳಿ, ಉತ್ತರಹಳ್ಳಿ, ಕೋರಮಂಗಳ, ಗೊಟ್ಟಿಗೆರೆ, ಬೆಳ್ಳಂದೂರು, ಹಂಪಿನಗರ, ಕೆಂಗೇರಿ, ಆರ್‌.ಆರ್. ನಗರ ಸೇರಿದಂತೆ ಬಹುತೇಕ ನಗರಾದ್ಯಂತ ಧಾರಾಕಾರ ಮಳೆ ಆಗಿದೆ.

Bengaluru Lashes Heavy Rainfall Today Monday Flood on Road Traffic Jam in Few Areas

ಸಾಮಾನ್ಯವಾಗಿದ್ದ ಮಳೆ ನೋಡ ನೋಡುತ್ತಲೇ ವ್ಯಾಪಕ ಸ್ವರೂಪದಲ್ಲಿ ಸುರಿಯಲಾರಂಭಿಸಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬಂದ ಜೋರು ಮಳೆಗೆ ನಗರದಲ್ಲಿ ಸಂಜೆ ಸಂಚಾರ ಅಸ್ತವ್ಯಸ್ತವಾಯಿತು. ಬೀದಿ ಬದಿ ವ್ಯಾಪಾರಕ್ಕೆ ಪೆಟ್ಟು ಬಿತ್ತು. ಕಚೇರಿ ಕೆಲಸ ಮುಗಿಸಿ ತೆರಳುತ್ತಿದ್ದ ನೌಕರರು ಸೇರಿದಂತೆ ಸಾರ್ವಜನಿಕರಿಗೆ ಈ ಮಳೆ ಕಿರಿ ಕಿರಿ ಉಂಟು ಮಾಡಿತು. ಕೆಲವೆಡೆ ಈ ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ರಸ್ತೆಗುಂಡಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತದ್ದು ಸಾಮಾನ್ಯವಾಗಿತ್ತು. ಕೆಲವು ವಾಹನ ಸವಾರರು ಮಳೆಯಲ್ಲೇ ಸವಾರಿ ಮಾಡಿದ್ದು ಕಂಡು ಬಂತು.

ಎಲ್ಲೆಲ್ಲಿ ಹೆಚ್ಚು ಮಳೆ ಆಗಿದೆ?

ನಗರದಲ್ಲಿ ರಾತ್ರಿ 8.15ರ ಹೊತ್ತಿಗೆ ಸಿಕ್ಕ ಮಾಹಿತಿ ಪ್ರಕಾರ, ವಿದ್ಯಾಪೀಠದಲ್ಲಿ 35 ಮಿ.ಮೀ., ಆರ್‌ಆರ್‌ ನಗರ ಕೆಂಗೇರಿ 34 ಮಿ.ಮೀ., ಆರ್‌ಆರ್‌ ನಗರ-2 33ಮಿ.ಮೀ., ಪೀಣ್ಯ ಕೈಗಾರಿಕೆ ಪ್ರದೇಶ 31.5 ಮಿ.ಮೀ., ಹಂಪಿನಗರ 30, ಬಿಳೇಕಹಳ್ಳಿ 27ಮಿ.ಮೀ., ಬಸವೇಶ್ವರನಗರ 27ಮಿ.ಮೀ, ಕೋರಮಂಗಲ 27ಮಿ.ಮೀ, ಅರಕೆರೆ 26 ಮಿ.ಮೀ, ವನ್ನಾರ್‌ಪೇಟೆ 24.5 ಮಿ.ಮೀ, ಹೆರೋಹಳ್ಳಿ 24.5 ಮಿ.ಮೀ, ಹಗದೂರು 24 ಮಿ.ಮೀ, ಹೆಮ್ಮಿಗೆಪುರ 24 ಮಿ.ಮೀ, ಮಾರತ್ತಹಳ್ಳಿ 23.5 ಮಿ.ಮೀ, ಬೊಮ್ಮನಹಳ್ಳಿ 21ಮಿ.ಮೀ, ನಾಗಪುರ 22.5 ಮಿ.ಮೀ, ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 20.ಮಿ.ಮೀ, ಮಳೆ ದಾಖಲಾಗಿದೆ.

ಉಳಿದಂತೆ ವಿವಿಪುರಂ, ದೊಡ್ಡಬಿದಕಲ್ಲು, ನಂದಿನಿ ಬಡಾವಣೆ, ಪುಕೇಶಿನಗರ, ಅಂಜನಾಪುರ, ದೊಡ್ಡಾನೆಕುಂದಿ, ವಿಜ್ಞಾನ ನಗರ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಈ ಮಳೆ ನಾಳೆ ಮಂಗಳವಾರ ಸೆಪ್ಟಂಬರ್ 2ರವೆಗೂ ಮುಂದುವರಿಯಲಿದೆ ಎಂದು ಊಹಿಸಲಾಗಿದೆ.

ಬೆಂಗಳೂರಿನ ಮಳೆ ಮುನ್ಸೂಚನೆ

ನಗರಾದ್ಯಂತ ಮುಂದಿನ ಐದು ದಿನಗಳ ಕಾಲ ಇದೇ ರೀತಿ ವಾತಾವರಣ ನಿರ್ಮಾಣವಾಗಲಿದೆ. ಮಂಗಳವಾರದಿಂದ ಮಳೆ ವ್ಯಾಪಕ ಮಳೆ ಬಾರದಿದ್ದರೂ ಆಗಾಗ ಜಿಟಿ ಜಿಟಿ ಮಳೆಯ ನಿರೀಕ್ಷೆ ಇದೆ. ಗರಿಷ್ಠ ತಾಪಮಾನದಲ್ಲಿ ಕೊಂಚ ಬದಲಾವಣೆ ಆಗಲಿದ್ದು, ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌ ನಿಂದ 27ಕ್ಕೆ ಇಳಿಕೆ ಆಗಲಿದೆ. ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+