Get Updates
Get notified of breaking news, exclusive insights, and must-see stories!

Bengaluru Flower Show 2025: ಇಂದಿನಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಥಿಮ್, ವಿಶೇಷತೆ & ಆನ್‌ಲೈನ್ ಬುಕ್ಕಿಂಗ್

ಬೆಂಗಳೂರು, ಜನವರಿ 16: ಜನವರಿ 26ರ 'ಗಣರಾಜ್ಯೋತ್ಸವ ದಿನಾಚರಣೆ' ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರು ಸಸ್ಯಕಾಶಿ ಲಾಲ್‌ ಬಾಗ್‌ನಲ್ಲಿ 217ನೇ ' ಫಲಪುಷ್ಪ ಪ್ರದರ್ಶನ 2025' ನಡೆಯಲಿದೆ. ಇಲ್ಲಿ ನಾನಾ ಬಗೆಯ ದೇಶ ವಿದೇಶಗಳ ತರಹೇವಾರಿ ಬಣ್ಣ ಬಣ್ಣದ ಪುಷ್ಪಗಳು ಇಲ್ಲಿ ಅನಾವರಣಗೊಳ್ಳಲಿವೆ. ಇಂದು ಗುರುವಾರ (ಜನವರಿ 16) ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಸಾರ್ವಜನಿಕರಿಗೆ ಕಣ್ತುಂಬಿಕೊಳ್ಳಲು ಅವಕಾಶ ದೊರೆಯಲಿದೆ.

ಜನವರಿ 16 ರಿಂದ 27 ರವರೆಗೆ ಒಟ್ಟು 12 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ 'ಫಲಪುಷ್ಪ ಪ್ರದರ್ಶನ' ನಡೆಯಲಿದೆ. ಆನ್‌ಲೈನ್ ಮೂಲಕ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಬಂದು ಹೋಗಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಒಟ್ಟು 2.8 ಕೋಟಿ ರೂಪಾಯಿ ವೆಚ್ಚದಲ್ಲಿ ಈ 'ಫಲಪುಷ್ಪ ಪ್ರದರ್ಶನ 2025' ಆಯೋಜಿಸಲಾಗಿದೆ.

Bengaluru Lalbagh Flower Show 2025 From Jan 16th to 27th Know Theme and Speciality Inauguration

ಫಲಪುಷ್ಪ ಪ್ರದರ್ಶನದ ಥೀಮ್ ಏನು?

ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಈ ಫಲಪುಷ್ಪ ಪ್ರದರ್ಶನವು ಮಹರ್ಷಿ ವಾಲ್ಮಿಕಿ ವಿಷಯಾಧಾರಿತ ಕಲೆಗಳನ್ನು ಅನಾವರಣಗೊಳಿಸಲಾಗುತ್ತದೆ. ಸುಮಾರು 03 ಲಕ್ಷಕ್ಕೂ ಅಧಿಕ ಬಣ್ಣ ಬಣ್ಣದ ಹೂವುಗಳಿಂದ ಚಿತ್ತಾಕರ್ಷಣೆಗಳು ಜನರನ್ನು ಸೆಳೆಯಲಿವೆ. ಮಹರ್ಷಿ ವಾಲ್ಮಿಕಿಯ ಸಾಕಷ್ಟು ವಿಷಯಗಳು ಹೂಗಳಲ್ಲಿ ಅನಾವರಣಗೊಳ್ಳಲಿವೆ.

ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಕುರಿತು ಗೊತ್ತಿಲ್ಲದ ವಿಷಯಗಳನ್ನು ಇಲ್ಲಿ ಹೂಗಳ ಮೂಲಕ ತಿಳಿಸುವ ಪ್ರಯತ್ನ ಇದಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಸಹ ಮಾಡಲಾಗಿದೆ. ಪ್ರದರ್ಶನವನ್ನು ಸಿಎಂ ಉದ್ಘಾಟಿಸಲಿದ್ದು, ಡಿಸಿಎಂ ಡಿಕೆ ಶಿವಕುಮಾರ್, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅತಿಥಿಗಳಾಗಿ ಭಾಗವಹಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Bengaluru Lalbagh Flower Show 2025 From Jan 16th to 27th Know Theme and Speciality Inauguration

ಪ್ರದರ್ಶನದಲ್ಲಿ ಏನೆಲ್ಲ ಇರಲಿದೆ?

ಲಕ್ಷಾಂತರ ಹೂವುಗಳಿಂದ ರಾಮಾಯಣ ಬರೆದ ಶ್ರೀ ಮಹರ್ಷಿ ವಾಲ್ಮಿಕಿ ಅವರ ಆಶ್ರಮ, ದೃಶ್ಯ, ಹುತ್ತ, ಜಟಾಯು ಪಕ್ಷಿ, ರಾಮಾಯಣ, ಮಹಾಕಾವ್ಯ ಕೃತಿಯ ಪ್ರತಿಕೃತಿ, ಅವರ ತಪಸ್ಸಿಗೆ ಕುಳಿತ ದೃಶ್ಯಗಳ ಸೇರಿದಂತೆ ಅನೇಕ ವಿಷಯಗಳು ಹೂವುಗಳಲ್ಲಿ ಅನಾವರಣಗೊಳ್ಳಲಿವೆ. ರಾಮಾಯಣ ಬರೆಯಲು ಕೂತ ಮಹರ್ಷಿ ಅವರ ದೃಶ್ಯಗಳನ್ನು ಹೂಗಳಲ್ಲಿ ಚಿತ್ರಿಸಲಾಗಿದೆ. ಇದು ಪ್ರದರ್ಶನದ ಸೊಬಗು ಹೆಚ್ಚಿಸಲಿದೆ. ಈ ಮೇಲಿನ ಎಲ್ಲ ಅಂಶಗಳ ಸೇರಿದಂತೆ ಸಾಕಷ್ಟು ವಿಷಯಗಳು, ಕಲಾಕೃತಿಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು.

ಆನ್‌ಲೈನ್ ಟಿಕೆಟ್ ಬುಕ್ಕಿಂಗ್

ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳ ಮೂಲಕ ಲಾಲ್‌ಬಾಗ್‌ಗೆ ಬರಬಹುದು. ಆನ್‌ಲೈನ್‌ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಅಧಿಕೃತ ಜಾಲತಾಣ https://hasiru.karnataka.gov.in/ ಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

1.50 ಲಕ್ಷ ಡಚ್ ಗುಲಾಬಿ ಹೂವು

ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ (ವಾಲ್ಮೀಕಿ) ಕಲಾಕೃತಿಯ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಈ ಕಲಾಕೃತಿಯ ಪೀಠಭಾಗವು 10 ಅಡಿ ಎತ್ತರ ಮತ್ತು 38 ಅಡಿ ಸುತ್ತಳತೆಯನ್ನು ಹೊಂದಿದೆ. 1.50 ಲಕ್ಷ ಡಚ್ ಗುಲಾಬಿ ಹೂವುಗಳು ಮತ್ತು ನಾಲ್ಕು ಕ್ವಿಂಟಲ್ ಪಿಂಚ್ಡ್ ಗುಲಾಬಿ ಹೂವು ಬಳಸಲಾಗುವುದು. ಮೂರು ಕ್ವಿಂಟಾಲ್ ಹೈದರಾಬಾದ್ ಸೇವಂತಿಗೆ ಹೂವ ಬಳಕೆ ಆಗಲಿವೆ.

ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸ್ಪಂದಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದು, ಶೌಚಗೃಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಾಜಿನ್ ಮೇಲೆ, ಗೇಟ್ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲ ಮೂಲಸೌಕರ್ಯ ಒದಗಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+