ನಾಳೆಯಿಂದ ಬೆಂಗಳೂರಿನ ಪರಂಪರೆ ಸಾರುವ 'ಕರಗ' ಆರಂಭ
ಬೆಂಗಳೂರು, ಏ.10: ಬೆಂಗಳೂರು ಕರಗ ಮಹೋತ್ಸವ ನಾಳೆ(ಏ.10)ರಿಂದ ಆರಂಭಗೊಳ್ಳಲಿದೆ.
ಬೆಂಗಳೂರಿನ ಪಾರಂಪರಿಕ ಮಹತ್ವವನ್ನು ಸಾರುವ ಮಹೋತ್ಸವ ಇದಾಗಿದೆ. ಏ.11ರಿಂದ 21ರವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿದೆ.
ಬೆಳಗ್ಗೆ ಕಬ್ಬನ್ ಪಾರ್ಕ್‌ನ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆ ಪೂಜೆ ಮಾಡಿ ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಕರೆತರಲಾಗುತ್ತದೆ.ಕರಗ ಮಹೋತ್ಸವ ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ನಡೆಯಲಿದೆ.

ರಥೋತ್ಸವ ಹಾಗೂ ಧ್ವಜಾರೋಹಣದೊಂದಿಗೆ ಚಾಲನೆ ಪಡೆಯುತ್ತದೆ. ದ್ವಾದಶಿಯಂದು ದೀಪಗಳ ಆರತಿ, ತ್ರಯೋದಶಿಯಂದು ಹಸಿ ಕರಗ, ಚತುರ್ದಶಿಯಂದು ಪೊಂಗಲ್ ಸೇವೆ ನಡೆಯಲಿದ್ದು, ಚೈತ್ರ ಪೂರ್ಣಿಮೆಯಂದು ಕರಗಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವ, ಪಾಡ್ಯಮಿಯಂದು ಶಕ್ತಿಸ್ಥಳ ಏಳು ಸುತ್ತಿನ ಕೋಟೆ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಯಲಿದೆ.
ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭಗೊಂಡು ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಶ್ರೀಕೃಷ್ಣರಾಜ ಮಾರುಕಟ್ಟೆ ಮೂಲಕ ಅಕ್ಕಿಪೇಟೆ, ಅರಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್‌ಪೇಟೆ, ಸುಣ್ಣಕಲ್‌ಪೇಟೆಗಳಲ್ಲಿ ಕರಗ ಸಂಚರಿಸಲಿದೆ.











Click it and Unblock the Notifications