• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾಖಲೆಯ ಧ್ಯಾನ, ನಿರಾಹಾರ ಉಪವಾಸ ವ್ರತಕ್ಕೆ ಬೆಂಗಳೂರು ಸಾಕ್ಷಿ

|

ಬೆಂಗಳೂರು ಸೆಪ್ಟಂಬರ್ 02: ಒಂದು ದಿನ ಅನ್ನ, ನೀರಿಲ್ಲದೆ ಬದುಕುವುದು ಎಷ್ಟು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಉದ್ಯಾನನಗರಿ ವಿಶೇಷ ಉಪವಾಸ ವ್ರತಕ್ಕೆ ಸಾಕ್ಷಿಯಾಗಿದೆ. ದಿಗಂಬರ ಜೈನಮುನಿಶ್ರೀ 108 ಶ್ರೀ ಪ್ರಸನ್ನ ಸಾಗರಜೀ ಮಹಾರಾಜ್ ಅವರು ಒಂದು ಹನಿ ನೀರನ್ನೂ ಕುಡಿಯದೆ ಸತತ 16 ದಿನಗಳ ಕಾಲ ಕೈಗೊಂಡಿದ್ದ ನಿರಾಹಾರ ಉಪವಾಸ ವ್ರತವನ್ನು ಅಂತ್ಯ ಮಾಡಿದ್ದಾರೆ.

ಅಷ್ಟೇ ಅಲ್ಲ, ಈ ಅವಧಿಯಲ್ಲಿ ಅವರು ಬರೋಬ್ಬರಿ 384 ಗಂಟೆಗಳ ಕಾಲ ಕುಳಿತಲ್ಲೇ ಧ್ಯಾನಗೈದು ದಾಖಲೆ ನಿರ್ಮಿಸಿದ್ದಾರೆ. ಆಷಾಢ ಮಾಸದ ಚತುದರ್ಶಿಯಂದು (ಆಗಸ್ಟ್ 17 ರಂದು ಶ್ರಾವಣ ಹುಣ್ಣಿಮೆಗೂ ಮುನ್ನಾದಿನ) ಆರಂಭಗೊಂಡ ಮುನಿಶ್ರೀ 108 ಶ್ರೀಪ್ರಸನ್ನ ಸಾಗರಜೀ ಮಹಾರಾಜ್ ಅವರ ನಿರಾಹಾರ ಉಪವಾಸ ವ್ರತ' ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಮಾಪನಗೊಂಡಿತು.[ಪ್ರಕೃತಿಯ ವರದಾನ ವರಂಗ ಕೆರೆ ಬಸದಿಯ ನೋಡಿ]

ಧರ್ಮಸ್ಥಳ ಶ್ರೀ ಸುರೇಂದ್ರ ಕುಮಾರ್ ಮತ್ತು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ತ್ಯಾಗಿ ಸೇವಾ ಟ್ರಸ್ಟ್ ಮತ್ತು ಅಂತರ್ಮನ ಪದ್ಮಪ್ರಭು ಗುರುಭಕ್ತ ಪರಿವಾರ ಕರ್ನಾಟಕ ಜೈನ ಎಸೋಷಿಯೆಶನ್, ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ, ಖಂಡೇಲವಾಲ ದಿಗಂಬರ ಜೈನ ಸಮಾಜ ಮತ್ತು ಸಕಲ ಜೈನ ಸಮಾಜ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಸ್ವೌಮ್ಯ ಮೂರ್ತಿ ಮುನಿಶ್ರೀ 108 ಪಿಯೂಷ್ ಜೀ ಮಹಾರಾಜರು ಈ ಮಂಗಳ ಕಾರ್ಯಕ್ರಮಕ್ಕೆ ನಿರ್ದೇಶನ ನೀಡಿ ಉಪಸ್ಥಿತರಿದ್ದರು. ಜೈನ ಶ್ವೇತಾಂಬರ ಪಂಥದ ಸಾಧುಗಳು ಕೂಡಾ ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮುನಿಶ್ರೀ ಪ್ರಸನ್ನ ಸಾಗರರಿಗೆ ಶುಭಕೋರಿದರು. ಕನಕಗಿರಿ ಕ್ಷೇತ್ರದ ಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮಿಗಳು ಉಪಸ್ಥಿತರಿದ್ದರು.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]

ಮುನಿಶ್ರೀ ಅವರು ತಮ್ಮ ಪ್ರವಚನದಲ್ಲಿ "ರಾಗಿಗೆ ರಾಗ, ವೈರಾಗಿಗೆ ವೈರಾಗ್ಯ ಚೆನ್ನಾಗಿರುತ್ತದೆ ಎಂದು ಮನುಷ್ಯ ಸ್ವಭಾವವನ್ನು ತಿಳಿಸಿದರು. ನಮ್ಮಲ್ಲಿ ಧರ್ಮವನ್ನು ನಂಬುವವರು ಕಡಿಮೆ. ಧರ್ಮವನ್ನು ಮಾಡುವವರು ಇನ್ನು ಕಡಿಮೆ. ಅದಕ್ಕಿಂತಲೂ ಕಮ್ಮಿ ಜನ ಪಾಪ ಕರ್ಮ ಬಿಡಲು ಬಯಸುತ್ತಾರೆ" ಎಂದರು. ಮುನಿಶ್ರೀ ಅವರು ಸಾರ್ವಜನಿಕರ ಎದುರು ಭಕ್ತರಿಂದ ಆಹಾರ ಸ್ವೀಕರಿಸಿ ಉಪವಾಸ ಮುಕ್ತಾಯಗೊಳಿಸಿದರು.

ದಿಂಗಬರ ಜೈನ ಮುನಿಗಳ ಆಹಾರ ಕ್ರಮ:

ಪಂಚ ನಮಸ್ಕಾರ ಮಂತ್ರದ ಮೂಲಕ ಭಕ್ತರು, ಮುನಿಶ್ರೀಗಳಿಗೆ ಪ್ರದಕ್ಷಿಣೆ ಮಾಡಿ, ಉಚ್ಚಾಸನದಲ್ಲಿ ಕೂರಿಸಿ, ಪಾದಪೂಜೆ ನೆರವೇರಿಸುತ್ತಾರೆ. ನಂತರ ನಮ್ಮ ದೇಹ-ಮನಸ್ಸು- ಮಾತು, ತಮಗೆ ಅರ್ಪಿಸುತ್ತಿರುವ ಆಹಾರ, ಜಲ ಶುದ್ಧವಾಗಿದೆ. ಆಹಾರ ಸ್ವೀಕರಿಸಿ, ಎಂದು ನವಧಾಭಕ್ತಿಯಿಂದ ಪ್ರಾರ್ಥಿಸುತ್ತಾರೆ .

ವಿಶೇಷವೆಂದರೆ, ಮುನಿಶ್ರೀಗಳಿಗೆ ಆಹಾರ ನೀಡುವ (ಶ್ರಾವಕರು)ಭಕ್ತರೂ ಸಹ ಕಟ್ಟುನಿಟ್ಟಿನ ವ್ರತ ಕೈಗೊಂಡಿರಬೇಕು. ಜೀವನ ಪೂರ್ತಿ ರಾತ್ರಿ ಭೋಜನ ತ್ಯಜಿಸಿದವರು, ಭೂಮಿಯಾಳದಲ್ಲಿ ಬೆಳೆಯುವ ಕಂದಮೂಲಗಳನ್ನು ತಿನ್ನದವರು ಮಾತ್ರ ಈ ದಿಂಗಬರ ಸಂತರಿಗೆ ಆಹಾರ ನೀಡಲು ಅರ್ಹತೆ ಪಡೆದಿರುತ್ತಾರೆ. ಇದೇ ಮೊದಲ ಬಾರಿಗೆ ಈ ಪಾರಣಾ ಮಹೋತ್ಸವ' ದಲ್ಲಿ ಮುನಿಶ್ರೀ 108 ಶ್ರೀಪ್ರಸನ್ನ ಸಾಗರಜೀ ಮಹಾರಾಜರು ಸಾರ್ವಜನಿಕವಾಗಿ ಬೊಗಸೆಯಲ್ಲಿ ಆಹಾರ ಸ್ವೀಕರಿಸಿದರು.

ಜೈನ ಸಂಪ್ರದಾಯದಲ್ಲಿ ಉಪವಾಸ ವ್ರತಕ್ಕೆ ತುಂಬಾ ಮಹತ್ವವಿದೆ. ವಿಶೇಷವಾಗಿ ಅಂತರ್ಮನ ಮುನಿಶ್ರೀ ಪ್ರಸನ್ನ ಸಾಗರಜೀ ಮಹಾರಾಜರು ಆತ್ಮಕಲ್ಯಾಣದ ಜೊತೆಗೆ ಲೋಕ ಕಲ್ಯಾಣಕ್ಕಾಗಿ ನಿರಂತರ 16 ದಿನಗಳ ಕಾಲ ನಿರಾಹಾರ (ಅನಶನ ವ್ರತ) ಉಪವಾಸ ವ್ರತವನ್ನು ಕೈಗೊಂಡಿದ್ದರು.

English summary
Bengaliru: Thousands of Jains congregated at Bengaluru on Friday to witness history. Jain monk 108 Prasannaji Sagarji Maharaj broke his 16 day long fast on Friday 2 September, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X