ಬೆಂಗಳೂರು ಸಮಸ್ಯೆಯಿಂದ ವಿದೇಶಿಗರ ಪ್ರಶ್ನೆಗೆ ಉತ್ತರಿಸಲಾಗುತ್ತಿಲ್ಲ: ಉದ್ಯಮಿ ಕಿರಣ್ ಮಜುಂದಾರ್ ಶಾ
ಬೆಂಗಳೂರಿನ ಸ್ವಚ್ಛತೆ ಹಾಗೂ ರಸ್ತೆಗುಂಡಿ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ನಡೆದಿದೆಯಾದರೂ ಬೆಂಗಳೂರಿನ ವಿವಿಧ ಪ್ರದೇಶದಲ್ಲಿ ಸಮರ್ಪಕ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಸರಿಯಾಗಿ ನಡೆದಿಲ್ಲ. ಅಲ್ಲದೇ ಕಸ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಈ ವಿಚಾರದ ಬಗ್ಗೆ ಇದೀಗ ಉದ್ಯಮಿಗಳು ಸಹ ಧ್ವನಿ ಎತ್ತುತ್ತಿದ್ದಾರೆ.
ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಉದ್ಯಮಿಗಳು ಪ್ರಶ್ನೆ ಮಾಡುವುದು, ಟೀಕಿಸುವುದು ಮುಂದುವರಿದಿದೆ. ಅಲ್ಲದೇ ಬೆಂಗಳೂರಿನಲ್ಲಿ ರಸ್ತೆಗುಂಡಿ ಹಾಗೂ ಕಸದ ಸಮಸ್ಯೆ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ಬಗೆಹರಿಸುವಂತೆ ಉದ್ಯಮಿಗಳು ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು, ವಿದೇಶಿ ಅತಿಥಿಯೊಬ್ಬರು ಕೇಳಿದ ಪ್ರಶ್ನೆಯನ್ನು ಹಂಚಿಕೊಂಡಿರುವುದರಿಂದ ಮತ್ತೆ ಬೆಂಗಳೂರಿನ ರಸ್ತೆಗಳ ಗುಂಡಿಗಳ ಮುನ್ನೆಲೆಗೆ ಬಂದಿದೆ. ಇದನ್ನು ಯಾವುದೇ ಭಾರತೀಯರು ಕೇಳಲು ಬಯಸುವುದಿಲ್ಲ. ಬೆಂಗಳೂರಿನ ರಸ್ತೆಗಳು ಮಾತ್ರವಲ್ಲ, ವಿಲೇವಾರಿ ಆಗದ ಕಸದ ಸಮಸ್ಯೆಯೂ ಗಂಭೀರವಾಗಿದೆ ಎಂದು ಚೀನಾದ ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಈ ಟ್ವೀಟ್ ಅನ್ನು ಕಿರಣ್ ಮಜುಂದಾರ್ ಶಾ ಅವರು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ಬಯೋಕಾನ್ ಪಾರ್ಕ್‌ಗೆ ಬಂದಿದ್ದ ವಿದೇಶಿ ಉದ್ಯಮಿಯೊಬ್ಬರನ್ನು ಭೇಟಿ ಮಾಡಿದ್ದೆ. ಅವರು 'ರಸ್ತೆಗಳು ಏಕೆ ಕೆಟ್ಟದಾಗಿವೆ ಮತ್ತು ರಸ್ತೆಗಳಲ್ಲಿ ಯಾಕೆ ಇಷ್ಟೊಂದು ಕಸ ಇದೆ, ಸರ್ಕಾರ ಹೂಡಿಕೆದಾರರನ್ನು ಬೆಂಬಲಿಸುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರೆ, ಅಲ್ಲದೇ ನಾನು ಚೀನಾದಿಂದ ಬಂದಿದ್ದೇನೆ. ಆದರೆ, ಉತ್ತಮ ಗಾಳಿ ಮತ್ತು ಪರಿಸರಕ್ಕೆ ಅನುಕೂಲಕರವಾಗಿದ್ದ ಭಾರತವು ಯಾಕೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ.
ನಮ್ಮ ನಗರವನ್ನು ಸರಿಪಡಿಸಲು ಮತ್ತು ಅದನ್ನು ವಿಶ್ವ ದರ್ಜೆಯನ್ನಾಗಿ ಮಾಡಲು ರಾಜಕೀಯ ನಾಯಕರು, ರಾಜಕೀಯ ಇಚ್ಛಾಶಕ್ತಿಯನ್ನು ಯಾಕೆ ತೋರಿಸುತ್ತಿಲ್ಲ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಬಜೆಟ್ ಹಂಚಿಕೆ ಮತ್ತು ಅದರ ಅನುಷ್ಠಾನ ಮಾಡುವ ವಿಷಯದಲ್ಲಿ ಗಮನ ಹರಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜನರ ಮೆಚ್ಚುಗೆ: ಇನ್ನು ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಟ್ವೀಟ್‌ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿನವನಾಗಿ ನಾನು ಮುಂಬೈನಲ್ಲಿದ್ದೆ ಮತ್ತು ಇಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಆದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಮೂಲಸೌಕರ್ಯ ಯೋಜನೆ ಶ್ಲಾಘನೀಯ. ಬೆಂಗಳೂರು ಆಡಳಿತವು ಮುಂಬೈನಿಂದ ಕಲಿಯಬೇಕು. ನಾನು ಮುಂಬೈ ವಿಮಾನ ನಿಲ್ದಾಣದಿಂದ ನಾಥನ್ ಪಾಯಿಂಟ್‌ನಲ್ಲಿರುವ ನನ್ನ ಹೋಟೆಲ್‌ಗೆ ಸುಮಾರು 25/30 ನಿಮಿಷಗಳಲ್ಲಿ ಪ್ರಯಾಣಿಸಿದೆ. ಇಲ್ಲಿನ ಕರಾವಳಿ ರಸ್ತೆಯು ಪ್ರಯಾಣಿಸಲು ಹೆಮ್ಮೆಯ ಸಂಗತಿಯಾಗಿತ್ತು ಎಂದು ವಿಕಾಸ್ ಎನ್ನುವವರು ರಿಯಾಕ್ಟ್ ಮಾಡಿದ್ದಾರೆ.












Click it and Unblock the Notifications