Get Updates
Get notified of breaking news, exclusive insights, and must-see stories!

Bengaluru Airport: ಪ್ರಯಾಣಿಕರೇ ಚಿಂತೆ ಬಿಡಿ, ಈ ಸೌಕರ್ಯ ಪಡೆದು ಆರಾಮಾಗಿ ಓಡಾಡಿ..

ಬೆಂಗಳೂರು, ಜೂನ್ 19: ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Bengaluru International Airport) ವಾರ್ಷಿಕವಾಗಿ ಲಕ್ಷಾಂತರ ಪ್ರಯಾಣಿಕರಿಗೆ ವೈಮಾನಿಕ ಸೇವೆ ನೀಡುತ್ತದೆ. ನೀತ್ಯ ಸಾಕಷ್ಟು ಮಂದಿ ಇಲ್ಲಿಗೆ ಬರುತ್ತಾರೆ. ಈ ಪ್ರಯಾಣಿಕರಿಗೆ ಪ್ರಯಾಣ ಸೇವೆ ಮತ್ತಷ್ಟು ಮುದಗೊಳಿಸಲು, ವಿಶೇಷವಾಗಿಸಲು ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಈ ಮೂಲಕ ಏರ್‌ಪೋರ್ಟ್‌ ಮತ್ತಷ್ಟು ಜನಸ್ನೇಹಿ ಆಗಿದೆ.

ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಏರ್‌ಪೋರ್ಟ್ (KIA) ಯುವ ಪ್ರಯಾಣಿಕರು (ಮಕ್ಕಳು) ಹಾಗೂ ಬ್ಯಾಗ್ ಕ್ಯಾರಿ ಮಾಡುವವರಿಗೆ ಹೆಚ್ಚಿನ ಸೌಕರ್ಯ ನೀಡಿದೆ. ಮಕ್ಕಳೊಂದಿಗೆ ವಿಮಾನ ಪ್ರಯಾಣ ಮಾಡುವ ಪೋಷಕರ ಪರವಾಗಿ ಪ್ರೀತಿ ಮತ್ತು ಕಾಳಜಿಯನ್ನು ಪ್ರತಿ ಪ್ರಯಾಣದಲ್ಲಿ ತುಂಬುತ್ತಿದೆ.

Bengaluru International Airport Launches Baby Carrier Trolleys for Young Travellers

ಬೆಂಗಳೂರು ಏರ್‌ಪೋರ್ಟ್‌ ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ 'ಹ್ಯಾಂಡ್‌ಬ್ಯಾಗ್ ಟ್ರಾಲಿಗಳೊಂದಿಗೆ ಬೇಬಿ ಕ್ಯಾರಿಯರ್‌'ಗಳನ್ನು ಪರಿಚಯಿಸಲಾಗಿದೆ. ಇದರಿಂದ ಯುವ ಪ್ರಯಾಣಿಕರಿಗೆ ಹೊಸ ಸೌಕರ್ಯ ಸಿಕ್ಕಂತಾಗಿದೆ. ಮುಖ್ಯವಾಗಿ ಪೋಷಕರಿಗೆ ಅನುಕೂಲ ಒದಗಿಸಲೆಂದು ಈ ವ್ಯವಸ್ಥೆ ಪರಿಚಯಿಸಲಾಗಿದೆ.

ನೀವು ಮಕ್ಕಳು ಹಾಗೂ ದೊಡ್ಡ ದೊಡ್ಡ ಬ್ಯಾಗ್‌ಗಳ ಜೊತೆಗೆ ನಿಲ್ದಾಣಕ್ಕೆ ಬಂದಾಗ ಬೋರ್ಡಿಂಗ್ ಪಾಸ್ ಪಡೆಯುವಾಗ, ಮಕ್ಕಳನ್ನು ವಿಶಾಲ ಟರ್ಮಿನಲ್‌ನಲ್ಲಿ ತಮ್ಮೊಂದಿಗೆ ಕರೆದೊಯ್ಯವಾಗ ಆಗುತ್ತಿದ್ದ ಭಾರದ ಸಮಸ್ಯೆ, ಸಣ್ಣ ಪುಟ್ಟ ಅನಾನುಕೂಗಳ ನಿವಾರಣೆಗೆ ಕ್ರಮ ವಹಿಸಲಾಗಿದೆ. ನೀವು ಈ ಎರಡು ವಿಧದ ಟ್ರಾಲಿ ಬ್ಯಾಗ್ ಉಪಯೋಗಿಸಬಹುದು.

2 ತಿಂಗಳಿನಿಂದ 4 ವರ್ಷದೊಳಗಿನ ಚಿಕ್ಕ ಪ್ರಯಾಣಿಕರಿಗೆಂದೇ ಬೇಬಿ ಕ್ಯಾರಿಯರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಮ್ಮ ಮಗುವಿಗೆ ಆರಾಮದಾಯಕ ಸವಾರಿ ಕಲ್ಪಿಸಿಕೊಡುತ್ತದೆ. ಪೋಷಕರಿಗೆ ಸಹಾಯವಾಗುತ್ತದೆ. ನೀವು ಮಗು ಮತ್ತು ಬ್ಯಾಗ್ ಎರಡನ್ನು ಒಬ್ಬರೇ ಕ್ಯಾರಿ ಮಾಡಬಹುದಾಗಿದೆ.

ಕನ್ನಡಕ್ಕೂ ಜಾಗ ಕೊಟ್ಟ ಕೆಐಎ

ಇತ್ತೀಚೆಗೆ ವಿಮಾನ ನಿಲ್ದಾಣದ ಜಾಲತಾಣದಲ್ಲಿ, ಡಿಸ್ಲೈ ಸೂಚನಾ ಫಲ, ಸಂವಹನದಲ್ಲಿ ಕನ್ನಡವನ್ನು ಜಾರಿಗೆ ತಂದಿದೆ. ನೀವು ವಿಮಾನ ಪಟ್ಟಿ, ವೇಳಾಪಟ್ಟಿ, ಸಮಯ ಎಲ್ಲವನ್ನು ಕನ್ನಡದಲ್ಲಿ ತಿಳಿಯಬಹುದು. ಕನ್ನಡ ಭಾಷೆಗೆ ಏರ್‌ಪೋರ್ಟ್‌ನಲ್ಲಿ ಜಾಗ ಮಾಡಿಕೊಡಲಾಗಿದೆ. ಈ ಹಿಂದೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತ್ರ ಇತ್ತು. ಇದೀಗ ಕನ್ನಡಕ್ಕೂ ನಾಮಫಲಕ, ಜಾಲತಾಣ ಹಾಗೂ ಇತರೆಡೆ ಸ್ಥಾನ ಲಭಿಸಿದೆ.

ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣ ಅಪ್ಡೇಟ್ಸ್‌

ಬೆಂಗಳೂರು ಏರ್‌ಪೋರ್ಟ್‌ ಮೇಲೆ ಪ್ರಯಾಣಿಕರ ಒತ್ತಡ ಹೆಚ್ಚಾಗುತ್ತಿದೆ. ವಾರ್ಷಿಕವಾಗಿ ಪ್ರಯಾಣಿಕರ ಸಂಖ್ಯೆ ಏರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಏರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ನಿರ್ಮಿಸಲು ರಾಜ್ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಮೂರು ಜಾಗ ಗುರುತಿಸಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಸದಸ್ಯರ ತಂಡ ಮೂರು ಜಾಗ ಪರಿಶೀಲಿಸಿಕೊಂಡು ಹೋಗಿದ್ದಾರೆ. ಆದರೆ ಮರಳಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಕೆ ಆಗುತ್ತಿದ್ದಂತೆ ಯೋಜನೆ, ಟೆಂಡರ್ ಸೇರಿದಂತೆ ಇತರ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+