ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆ

|
Google Oneindia Kannada News

ಬೆಂಗಳೂರು, ಮೇ20: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆಬಂದಿದ್ದು ಏರ್ ಪೋರ್ಟ್ ಪೊಲಸರು ತೀವ್ರ ತಪಾಸಣೆಯನ್ನು ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿ, ಕಾಲ್ ಕಟ್ ಮಾಡಿದ್ದ. ಇದರಿಂದಾಗಿ ಅಲರ್ಟ್ ಆಗಿರುವ ಪೊಲೀಸರು ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆಯನ್ನು ಮಾಡುತ್ತಿದ್ದಾರೆ.

ನಗರದ ಕಂಟ್ರೋಲ್ ರೂಮ್‌ಗೆ ಅಪರಿಚಿತ ವ್ಯಕ್ತಿ ಬೆಳಗಿನ ಜಾವ 3 ಗಂಟೆಗೆ ಕರೆಯನ್ನು ಮಾಡಿದ್ದ. ಈ ವಿಚಾರವನ್ನು ಏರ್ ಪೋರ್ಟ್ ಪೊಲೀಸರಿಗೆ ರವಾನಿಸಲಾಗಿತ್ತು. ಬಾಂಬ್ ನಿಷ್ಟ್ರಿಯ ದಳದೊಂದಿಗೆ ಪೊಲೀಸರು ಸತತ ಎರಡು ಗಂಟೆಗಳಿಂದ ತಪಾಸಣೆಯನ್ನು ನಡೆಸಿದ್ದಾರೆ. ಈ ವರೆಗೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ.

ಬಹುಶಃ ಹುಸಿಬಾಂಬ್ ಕರೆ ಇರಬಹುದು ಎನ್ನಲಾಗಿದೆ. ಆದರೂ ಎಚ್ಚರ ತಪ್ಪದೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಚಿಂಚು ತಪಾಸಣೆಯನ್ನು ಮಾಡುತ್ತಿದ್ದಾರೆ.

Recommended Video

Kohli ಈ ಬಾರಿ ಮೊದಲ ಬಾರಿ ಪಂದ್ಯ ಶ್ರೇಷ್ಠರಾಗಿ ಹೇಳಿದ್ದೇನು? | Oneindia Kannada
Bengaluru International Airport KIAL gets hoax bomb call, security tightened

ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿಯವರು "ಬಾಂಬ್ ಕರೆ ಬಂದಿದೆ ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಮಾಡುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.

English summary
Bengaluru: Kempegowda International Airport gets hoax bomb call, security tightened. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X