• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ರಮ ಡಿಸ್ಕೋಥೆಕ್: ಹೈಗ್ರೌಂಡ್ಸ್ ಪೊಲೀಸರಿಂದ ಸ್ಯಾಂಡಲ್ ವುಡ್ ನಟನ ಬಂಧನ

|

ಬೆಂಗಳೂರು, ಆಗಸ್ಟ್ 31: ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣಾ ಸರಹದ್ದಿನ ಲಿ-ಮೆರಿಡಿಯನ್ ಹೊಟೇಲ್ ನಲ್ಲಿರುವ 'ಶುಗರ್ ಫ್ಯಾಕ್ಟರಿ' ಎಂಬ ಹೆಸರಿನ ಬಾರ್ & ರೆಸ್ಟೋರೆಂಟ್ ನಲ್ಲಿ ಅಬಕಾರಿ ಲೈಸೆನ್ಸ್ ನಿಯಮಾವಳಿಗಳನ್ನು ಮತ್ತು ಡಿಸ್ಕೋಥೆಕ್ ನಿಮಯಗಳನ್ನು ಉಲ್ಲಂಘಿಸಿ, ಬಾರ್ ಅಂಡ್ ರೆಸ್ಟೋರೆಂಟ್ ನಡೆಸಿದ್ದಕ್ಕಾಗಿ, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರಿಗೆ ಮದ್ಯ ಹಾಗೂ ಊಟ ತಿಂಡಿಗಳನ್ನು ಸರಬರಾಜು ಮಾಡುತ್ತಾ, ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ, ಸಿಸಿಬಿ ಘಟಕದ ಮಹಿಳೆ ಮತ್ತು ಮಾದಕದ್ರವ್ಯ ದಳದ ಅಧಿಕಾರಿಗಳಿಗೆ ಬಂದಿತ್ತು.

ಕುಡುಕರಿಗೂ ಬಂತು ಅಚ್ಛೇ ದಿನ್: ನಿಂತಲ್ಲೇ ಅಮಲೇರಿಸುವ ಸುದ್ದಿ!

ಈ ಮಾಹಿತಿಯಾಧಾರದ ಮೇಲೆ ಕಾರ್ಯಪ್ರವೃತ್ತರಾದ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು, ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದ್ದಾರೆ. ಇವರಲ್ಲಿ ಒಬ್ಬರು ಸ್ಯಾಂಡಲ್ ವುಡ್ ನಟ ಮತ್ತು 'ಬಿಗ್ ಬಾಸ್' ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ರೋಹನ್ ಗೌಡಾ ಕೂಡಾ ಒಬ್ಬರು.

ಇವರಿಂದ, ಸೌಂಡ್ ಸಿಸ್ಟಂ, ಮ್ಯೂಸಿಕ್ ಕಂಟ್ರೋಲರ್, ಮದ್ಯದ ಬಾಟಲ್‍ಗಳು, ಸ್ವೈಪಿಂಗ್ ಮಿಷಿನ್, ನಗದು 2,100/- ವಶಪಡಿಸಿಕೊಳ್ಳುವಲ್ಲಿ, ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಅಬಕಾರಿ ನಿಯಮಗಳನ್ನು ಮತ್ತು ಕಂಟ್ರೋಲಿಂಗ್ ಆಫ್ ಪ್ಲೇಸ್ ಆಫ್ ಪಬ್ಲಿಕ್ ಎಂಟರ್ಟೈನ್ಮೆಂಟ್ ನಿಯಮಗಳನ್ನು ಉಲ್ಲಂಘಿಸಿ, ಅವಧಿ ಮೀರಿ ಗ್ರಾಹಕರಿಗೆ ಮದ್ಯವನ್ನು ಸರಬರಾಜು ಮಾಡಿ ಅಲ್ಲಿಯೇ ಸೇವನೆ ಮಾಡಲು ಅನುವು ಮಾಡಿಕೊಟ್ಟು, ಧ್ವನಿವರ್ಧಕವನ್ನು ಉಪಯೋಗಿಸಿ ಅಕ್ಕಪಕ್ಕದ ಸಾರ್ವಜನಿಕರಿಗೆ ಶಬ್ದ ಮಾಲಿನ್ಯವನ್ನು ಉಂಟು ಮಾಡಿ ತೊಂದರೆ ನೀಡುತ್ತಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ.

ಬೆಂಗಳೂರಿನ 107 ಬಾರ್ & ರೆಸ್ಟೋರೆಂಟ್, ಪಬ್ ಲೈಸೆನ್ಸ್ ರದ್ದು

ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ. ಆರೋಪಿ ರೋಹನ್ ಗೌಡ, ಈ ಹಿಂದೆ ಸುದೀಪ್ ಅಭಿನಯದ 'ಮಾಣಿಕ್ಯ' ಚಿತ್ರದಲ್ಲೂ ಅಭಿನಯಿಸಿದ್ದರು. ಇದಾದ ನಂತರ, 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

English summary
Bengaluru High Grounds Police Arrested Three Persons Including Sandalwood Star For Not Obeying the Excise Department Rules And Regulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X