Bengaluru Weather: ನಗರದಲ್ಲಿಂದು ಮಳೆ ಆರ್ಭಟ, ವಿವಿಧೆಡೆ ಟ್ರಾಫಿಕ್ ಜಾಮ್: ಹಬ್ಬಕ್ಕೆ ಊರಿಗೆ ಹೊರಟವರಿಗೆ ಕಿರಿಕಿರಿ

ಬೆಂಗಳೂರು: ನಗರದ ವಿವಿಧಡೆ ಇಂದು ಮಧ್ಯಾಹ್ನ ಬಳಿಕ ಜೋರು ಮಳೆ ಆಯಿತು. ಸಂಜೆ 4.30 ಗಂಟೆ ಹೊತ್ತಿಗೆ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಆಗಿದ್ದು, 87 ಬಡಾವಣೆಗಳ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸಾಕ್ಷಿಯಾಗಿವೆ. ದೀಪಾವಳಿಗೆ ತಮ್ಮ ಊರುಗಳಿಗೆ ತೆರಳುತ್ತಿದ್ದ ವಾಹನ ಸವಾರರು, ಕಚೇರಿ ಕೆಲಸ ಬೇಗ ಮುಗಿಸಿ ಮನೆ ಕಡೆಗೆ ಹೊರಟವರಿಗೆ ಮಳೆ ಅಡ್ಡಿ ಉಂಟು ಮಾಡಿತು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಈ ಸಂಬಂಧ ಶುಕ್ರವಾರ ಬೆಂಗಳೂರಿಗೆ ಯೆಲ್ಲೋ ಅಲಟ್‌ ಸಹ ನೀಡಲಾಗಿದ್ದು, ಇಂದಿನ ಸಂಜೆ ಮಳೆ ತಡರಾತ್ರಿವರೆಗೂ ಮುಂದುವರಿಯುವ ಸಾಧ್ಯತೆ ಇದೆ.

Bengaluru Heavy Rain

ಬೆಳಗ್ಗೆಯಿಂದ ಬಿಸಿಲು ಕಂಡು ಬಂತಾದರೂ ಮಧ್ಯಾಹ್ನ ಹೊತ್ತಿಗೆ ಮೋಡ ಕವಿಯಿತು. ಸಂಜೆ ಹೊತ್ತಿಗೆ ಗೊಟ್ಟಿಗೆರೆ, ವಿಧಾನಸೌಧ, ಜೆಪಿ ನಗರ, ಜಯನಗರ, ಮೆಜೆಸ್ಟಿಕ್ ಸುತ್ತಮುತ್ತ, ಜಕ್ಕೂರು, ಬೆಳ್ಳಂದೂರು, ಮಾರತ್ತಹಳ್ಳಿ, ಕೋರಮಂಗಲ, ವಿಜ್ಞಾನನಗರ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಹೊರಮಾವು, ಯಲಹಂಕ, ಥಣಿಸಂದ್ರ, ಬಸವೇಶ್ವರ ನಗರ, ಜ್ಞಾನಭಾರತಿ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಡೆಗಳಲ್ಲಿ ಜೋರು ಮಳೆ ದಾಖಲಾಗಿದೆ.

ಮೆಜೆಸ್ಟಿಕ್, ಜೆಪಿ ನಗರ, ಕೆ.ಆರ್. ಮಾರುಕಟ್ಟೆ, ಕೋರಮಂಗಲ, ಹೊರ ಮಾವು, ಹೊರ ವರ್ತುಲ ರಸ್ತೆಯಲ್ಲಿ ಸುರಿದ ದಿಢೀರ್ ಮಳೆಗೆ ಜನ ಸಂಚಾರ ಅಸ್ತವ್ಯಸ್ತವಾಯಿತು. ಜೆಪಿ ನಗರ, ಜ್ಞಾನ ಭಾರತಿ ಬಳಿ ಮೈಸೂರು ರಸ್ತೆ, ಜಕ್ಕಸಂದ್ರ, ಜಯನಗರ ಪ್ರಮುಖ, ಟೌನ್‌ ಹಾಲ್ ಮುಂದೆ, ಓಕಳಿಪುರಂ ರಸ್ತೆ ಅಂಡರ್‍‌ ಪಾಸ್‌ನಲ್ಲಿ ಮತ್ತು ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿಯಿತು. ಇದರಿಂದ ಸಂಚಾರ ನಿಧಾನವಾಗಿತ್ತು. ಮಳೆಗೆ ಸಂಚಾರ ಸಿಗ್ನಲ್ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ನಿರ್ಮಾಣವಾಗಿತ್ತು.

ಹಬ್ಬಕ್ಕೆ ಊರಿಗೆ ಹೊರಟವರಿಗೆ ಮಳೆ ಅಡ್ಡಿ

ವಾರಂತ್ಯದ ಹಿನ್ನೆಲೆಯಲ್ಲಿ ಹಬ್ಬಕ್ಕೆ ಊರುಗಳಿಗೆ ತೆರಳುವವರಿಗೆ, ಮೋಜು ಮಸ್ತಿ ಮಾಡಲು ಸಜ್ಜಾಗಿದ್ದವರಿಗೆ ಹಿಂಗಾರು ಮಳೆ ಕೊಕ್ಕೆ ಹಾಕಿದ್ದು, ಎಲ್ಲದ್ದಕ್ಕು ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ. ಸ್ವಂತ ಬೈಕ್, ಕಾರಿನಲ್ಲಿ ಹೊರಟವರಂತೂ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವಂತಾಗಿದೆ. ಕೆಲವೆಡೆ ಟ್ರಾಫಿಕ್ ಜಾಮ್‌ನಿಂದ ಪರದಾಡಿದ್ದಾರೆ.

ಉಳಿದಂತೆ ಕಾಡುಗೋಡಿ, ಬೊಮ್ಮನಹಳ್ಳಿ, ವರ್ತೂರು, ಕೆಂಪೇಗೌಡ ಬಡಾವಣೆ, ಡೈರಿ ವೃತ್ತ, ಎಂಜಿ ರಸ್ತೆ ಇನ್ನಿತರ ಕಡೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿಯಿತು. ಐಎಂಡಿ ಇಂದು ನಗರಕ್ಕೆ ಯೆಲ್ಲೋ ಅಲರ್ಟ್ ನೀಡಿದ್ದರಿಂದ ರಾತ್ರಿ ಪೂರ್ತಿ ಮಳೆ ಆಗುವ ಲಕ್ಷಣಗಳು ಕಾಣಿಸುತ್ತಿವೆ.

ಹಬ್ಬದಲ್ಲಿ ಬೆಂಗಳೂರಿಗೆ ಮಳೆ ಮುನ್ಸೂಚನೆ

ಇಂದು ಮತ್ತು ನಾಳೆ (ಶನಿವಾರ) ಅಂದರೆ ಮುಂದಿನ 24ಗಂಟೆಗಳಲ್ಲಿ ನಗರಾದ್ಯಂತ ಆಗಾಗ ಮಬ್ಬು ವಾತಾವರಣ ಕಂಡು ಬರಲಿದ್ದು, ಅಲಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಕೆಲವೆಡೆ ಹಗುರ ಮಳೆ ಆಗಲಿದ್ದು, ಇನ್ನೂ ಕೆಲವೆಡೆ ಬಿರುಸಿನ ಮಳೆ ಬರಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಹಬ್ಬದಲ್ಲಿ ಮಳೆ ಕಿರಿ ಕಿರಿ: ತಾಪಮಾನ ಇಳಿಕೆ

ಶನಿವಾರ ದೀಪಾವಳಿ ಹಬ್ಬ ಶುರುವಾಗಲಿದ್ದು, ಅಂದು ಸಹ ಮಳೆ ಬರಲಿದ್ದು, ಇದು ಮಾರುಕಟ್ಟೆ ಖರೀದಿಗಾರರಿಗೆ, ವ್ಯಾಪಾರಸ್ಥರಿಗೆ ಕಿರಿ ಕಿರಿ ಉಂಟು ಮಾಡಬಹುದು. ಇನ್ನೂ ತಾಪಮಾನ ನೋಡುವುದಾದರೆ ಇಂದು ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ 3 ದಿನ ಗರಿಷ್ಠ ತಾಪಮಾನ ಕುಸಿದು 29 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+