Bengaluru Heat: ಸೆಪ್ಟೆಂಬರ್‌ನಲ್ಲೇ ಬೆಂಗಳೂರಿನಲ್ಲಿ ಉರಿ ಬಿಸಿಲು: ಸಾರ್ವಕಾಲಿಕ 33°C ದಾಖಲೆ ಮುರಿಯುತ್ತಾ ತಾಪಮಾನ

Bengaluru Heat Wave Alert: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮಾಯವಾಗಿದ್ದು, ಉರಿಬಿಸಲಿನ ವಾತಾವರಣ ಕಂಡು ಬರುತ್ತಿದೆ. ಮಳೆಗಾಲ ಮುಗಿಯಲು ಒಂದು ತಿಂಗಳು ಬಾಕಿ ಇರುವಾಗಲೇ ನಗರಾದ್ಯಂತ ದಾಖಲೆಯ ತಾಪಮಾನ ದಾಖಲಾಗಿದೆ. ಈವರೆಗಿನ ಸೆಪ್ಟೆಂಬರ್ ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಇದೆ. ಇಂದು ಸೋಮವಾರ ಬೆಂಗಳೂರು ನಗರದಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಸಾರ್ವಕಾಲಿಕ ದಾಖಲೆ ಮುರಿಯುವ ಉಷ್ಣಾಂಶ ಕಂಡು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಗರದಲ್ಲಿ ಆಗಸ್ಟ್ ಕೊನೆಯ ದಿನದವರೆಗೂ ಮಬ್ಬು ವಾತಾವರಣ ನಿರ್ಮಾಣವಾಗಿ ತಂಪು ಗಾಳಿ ಬೀಸುತ್ತಿತ್ತು. ಸಂಜೆ ಅಲ್ಲಲ್ಲಿ ಹಗುರದಿಂದ ಸಾಮಾನ್ಯ ಮಳೆ ಆಗುತ್ತಿತ್ತು. ಸೆಪ್ಟೆಂಬರ್ ಮೊದಲ ವಾರವೇ ವಾತಾವರಣ ಸಂಪೂರ್ಣ ಕಣ್ಮರೆಯಾಗಿದ್ದು, ಮಳೆ ಸುರಿಸುವ ಮೋಡಗಳು ಇಲ್ಲ. ಎಲ್‌ ನಿನೋ ಪ್ರಭಾವದಿಂದ ಮಳೆ ಕೊರತೆ ಉಂಟಾಗಿದ್ದು, ಬೆಂಗಳೂರಿನಲ್ಲಿ ಕೆಲವು ದಿನಗಳಲ್ಲಿ ಬೇಸಿಗೆ ವಾತಾವರಣ ಕಂಡು ಬಂದಿದೆ. ನಿತ್ಯವು 30 ಡಿ.ಸೆ.ಗೂ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಸಿ.ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.

Bengaluru Heat

ಇವತ್ತೇ ಬೆಂಗಳೂರಲ್ಲಿ 33.2 ಡಿ.ಸೆ. ದಾಖಲು

ಇಂದು ಸೋಮವಾರ (ಸೆ.7) ನಗರದಲ್ಲಿ ಗರಿಷ್ಠ 33.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20.5 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರದಲ್ಲಿ ಕ್ರಮವಾಗಿ 32.2 ಮತ್ತು 20.5 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎ ಎಲ್ ಏರ್ ಪೊರ್ಟ್‌ನಲ್ಲಿ 32 ಮತ್ತು 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಇಂದಿನ ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

Bengaluru Heat: 2023ರಲ್ಲೂ ಗರಿಷ್ಠ ತಾಪಮಾನ

ಮೂರು ವರ್ಷಗಳ ಹಿಂದೆ 2023ರ ಸೆಪ್ಟೆಂಬರ್‌ನಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿತ್ತು. ಅದಾದ ಬಳಿಕ ಈ ವರ್ಷ 2026 ಸೆಪ್ಟೆಂಬರ್ ಮೊದಲ ವಾರದಲ್ಲೇ 30 ಡಿ.ಸೆ. ತಾಪಮಾನ ದಾಟಿದೆ. ಮಳೆ ಸುರಿಸುವ ಮೋಡಗಳ ಕೊರತೆಯಿಂದಾಗಿ ಸ್ವಚ್ಛ ನೀಲಿ ಆಕಾಶವಿದ್ದು, ನೇರವಾಗಿ ಸೂರ್ಯ ಕಿರಣಗಳು ಭೂಮಿಗೆ ತಾಗುತ್ತಿವೆ. ಇದರಿಂದ ಮಳೆಗಾಲದಲ್ಲೂ ತೀವ್ರ ಶಾಖದ ಅನುಭವವಾಗುತ್ತಿದೆ. ಬೆಂಗಳೂರಿಗರು ಮಳೆಗಾಲಕ್ಕೂ ಮುನ್ನವೇ ಬೇಸಿಗೆ ಬಿಸಿಲ ಶಾಖ ಅನುಭವಿಸುವಂತಾಗಿದೆ.

ಬೆಂಗಳೂರಿನ 1 ವಾರದ ಹವಾಮಾನ ಮುನ್ಸೂಚನೆ

ಸೆಪ್ಟೆಂಬರ್ 13ರವರೆಗಿನ ಹವಾಮಾನ ಮುನ್ಸೂಚನೆಯನ್ನು ಐಎಂಡಿ ನೀಡಿದೆ. ಇದರಲ್ಲಿ ಮುಂದಿನ ಮೂರು ದಿನ ಅಂದರೆ ಸೆಪ್ಟೆಂಬರ್ 8ರಂದು ಮಂಗಳವಾರ ಗರಿಷ್ಠ 32 ಡಿಗ್ರೆ ಸೆಲ್ಸಿಯಸ್, ಸೆಪ್ಟೆಂಬರ್ 9 ಮತ್ತು 10ರಂದು 31 ಡಿಗ್ರೆ ಸೆಲ್ಸಿಯಸ್ ತಾಪಮಾನ ಕಂಡು ಬರುವ ನಿರೀಕ್ಷೆಗಳು ಇವೆ. ನಂತರದ ಮೂರು ದಿನ 30 ಡಿಗ್ರೆ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20-21 ಡಿಗ್ರೆ ಸೆಲ್ಸಿಯಸ್ ದಾಖಲಾಗಲಿದೆ . ಸ್ವಚ್ಛ ನೀಲಿ ಆಕಾಶ ಕಾಣಲಿದ್ದು, ಮಳೆ ಎಚ್ಚರಿಕೆ ಸದ್ಯಕ್ಕಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿಯಲ್ಲಿ 36.2 ಡಿ.ಸೆ. ತಾಪಮಾನ

ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲೂ ಮುಂಗಾರು ಮಳೆ ಕಣ್ಮರೆಯಾಗಿದೆ. ಎಲ್ಲೆಲ್ಲೂ ಬಿಸಿಲಿನ ಅಬ್ಬರ ಹೆಚ್ಚಾಗಿದ್ದು, ಮಳೆ ಕೊರತೆ ಎದುರಿಸಿದ್ದ ಜನರಿಗೆ ಬೇಸಿಗೆ ತೀವ್ರ ಶಾಖದ ಅನುಭವವಾಗುತ್ತಿದೆ.

ಐಎಂಡಿ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ ಬರೋಬ್ಬರಿ 36.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದೆ. ಉಳಿದಂತೆ ಬಾಗಲಕೋಟೆ, ಕೋಲಾರದ ಚಿಂತಾಮಣಿ ಮತ್ತು ಮೈಸೂರಿನಲ್ಲಿ ಬರೋಬ್ಬರಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದೇ ಶಾಖದ ಅಲೆಯ ಸ್ಥಿತಿ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+