Bengaluru Krishi Mela 2024: ನವೆಂಬರ್ 14 ರಿಂದ ನಾಲ್ಕು ದಿನ ಕೃಷಿ ಮೇಳ: ಹೊಸ ತಳಿಗಳ ಬಿಡುಗಡೆ
ಬೆಂಗಳೂರು, ನವೆಂಬರ್ 13: ಹಿಂಗಾರು ಹಂಗಾಮಿನ ಋತುವಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ''ಹವಾಮಾನ ಚತುರ ಡಿಜಿಟಲ್ ಕೃಷಿ'' ಎಂಬ ಘೋಷವಾಕ್ಯದಡಿ ಬೃಹತ್ 'ಕೃಷಿ ಮೇಳ 2024' ಹಮ್ಮಿಕೊಳ್ಳಲಾಗಿದೆ. ಈ ಮೇಳವು ನಾಳೆ ನವೆಂಬರ್ 14ರಿಂದ ನವೆಂಬರ್ 17ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಕೃಷಿ ಮೇಳ ಆಯೋಜನೆ ಕುರಿತು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ವಿ.ಸುರೇಶ್ ಅವರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಮಾತ್ರವಲ್ಲದೇ, ಅರಣ್ಯ ಇಲಾಖೆ, ಮೀನುಗಾರಿ, ರೇಷ್ಮೆ ಇಲಾಖೆ, ಅರಣ್ಯ, ಪಶುಸಂಗೋಪನೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಸಮಾಜ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಹಕಾರದಲ್ಲಿ ಜರುಗಲಿದೆ ಎಂದು ಮಾಹಿತಿ ನೀಡಿದರು.

ಪ್ರತಿ ವರ್ಷ ಹೊಸ ಬೀಜ ತಳಿಗಳು, ತಂತ್ರಜ್ಞಾನ ಆವಿಷ್ಕಾರ, ಹೊಸ ಸಲಕರಣೆಗಳೊಂದಿಗೆ ನಡೆದುಕೊಂಡು ಬರುತ್ತಿರುವ ಕೃಷಿ ಮೇಳದಲ್ಲಿ ಈ ವರ್ಷವು ಒಟ್ಟು 04 ನಾಲ್ಕು ನೂತನ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ.
ಹೊಸ 04 ನಾಲ್ಕು ನೂತನ ತಳಿಗಳು
* ಮುಸುಕಿನ ಜೋಳ ಸಂಕರಣ ಎಂ.ಎ.ಎಚ್ 15-84
* ಹಲಸಂದೆ ಕೆಬಿಸಿ-12
* ಸೂರ್ಯ ಕಾಂತಿ ಕೆ.ಬಿ.ಎಸ್.ಎಚ್-90
* ಬಾಜ್ರ ನೇಪಿಯರ್ ಪಿ.ಬಿ.ಎನ್-242
ಈ ನಾಲ್ಕು ಹೊತ ಬೀಜ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ರೈತರಿಗೆ ಮೇಳದಲ್ಲಿ ಲೋಕರ್ಪಾಣೆಗೊಳಿಸಲಾಗುವುದು. ಅವುಗಳ ಇಳುವರಿ, ಬಿತ್ತನೆ ವಿಧಾನ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು ಎಂದರು.
ಆಗಮಿಸುವ ಲಕ್ಷಾಂತರ ಸಾರ್ವಜನಿರಕು ಸೇರಿದಂತೆ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಖುಷಿ ಬೇಸಾಯ, ರೇಷ್ಮೆ ಕೃಷಿ, , ನೂತನ ತಳಿಗಳ ಪ್ರಾತಕ್ಷಿಕೆ, ತೋಟಗಾರಿಕೆ, ಸಿರಿಧಾನ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ, ಮಣ್ಣು ರಹಿತ ಕೃಷಿ ಪದ್ಧತಿ ಯಂತಹ ಅನೇಕ ಪ್ರಾತಕ್ಷಿಕೆಗಳಿಂದ ರೈತರಿಗೆ ಸೂಕ್ತ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.

ಮೇಳದಲ್ಲಿ ಏನೆಲ್ಲ ಇರಲಿದೆ?
ಮೇಳದಲ್ಲಿ ಡಿಜಿಟಲ್ ಕೃಷಿಗೆ ಅಗತ್ಯವಾಗಿರುವ ಸಲಕರಣೆ ಪ್ರದರ್ಶನಗೊಳ್ಳಲಿವೆ. ಸಾಧನಗಳು ತಂತ್ರಜ್ಞಾನ ಸಹಿತ ಕೃಷಿ ಚಟುವಟಿಕೆಗಳನ್ನು ಸರಳಗೊಳಿಸಲು ಒತ್ತು ನೀಡಲಾಗಿದೆ. ಮಣ್ಣು ಮತ್ತು ಬೆಳೆಗಳ ಆರೋಗ್ಯ ಪರಿವೀಕ್ಷಣೆಗೆ ಮಲ್ಟಿಸ್ಪೆಕ್ಟ್ರಲ್ ಡ್ರೋನ್, ಕೃಷಿ ಡ್ರೋನ್, ರೋಬೋಟಿಕ್ ಕೃಷಿ ಯಂತ್ರ, ಹಣ್ಣಿನ ವರ್ಗೀಕರಣ ಯಂತ್ರ, ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ, ಆಳ ನಿಯಂತ್ರಕ ರೋಟವೇಟರ್, ಸ್ವಯಂಚಾಲಿತ ಬೂಮ್ ಸ್ಟೇಯರ್, ಸೌರಶಕ್ತಿ ಚಾಲಿತ ಬರ್ಡ್ ಸ್ಟೇರರ್ಗಳು ಕೃಷಿ ಮೇಳದಲ್ಲಿ ಪ್ರದರ್ಶನವಾಗಲಿವೆ.
ಈ ವರ್ಷವು ಕೃಷಿಯಲ್ಲಿ ಸಾಧನೆ ಮಾಡಿದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಮೇಳದಲ್ಲಿ 700 ಮಳಿಗೆ, ಅಗತ್ಯ ವ್ಯವಸ್ಥೆ
ಒಟ್ಟು 700 ಮಳಿಗೆಗಳು ಕೃಷಿ ಮೇಳದಲ್ಲಿ ಇರಲಿವೆ. ಹೊಸ ನೂತನ ತಂತ್ರ ಜ್ಞಾನ, ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ಪರಿಹಾರ, ಪ್ರಾತಕ್ಷ್ಮತೆ ಒದಗಿಸಲಿದ್ದೇವೆ. ಕೃಷಿ ಮೇಳಕ್ಕೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರಾಗಿ ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣ ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಸಹ ಇರುತ್ತದೆ.
ಕೃಷಿ ಮೇಳಕ್ಕೆ ಬರುವವರಿಗೆ ಅನುಕೂಲವಾಗಲೆಂದು ಪ್ರತ್ಯೇಕ ವಾಹನ ನಿಲುಗಡೆ, ಉಚಿತ ಪ್ರವೇಶ, ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಕಲ್ಲಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications