ಬೆಂಗಳೂರು ಜನರಿಗೆ ಗುಡ್‌ನ್ಯೂಸ್! ಪಣತೂರಿನಲ್ಲಿ 45 ಎಕ್ರೆಯ ಭವ್ಯ ವೃಕ್ಷೋದ್ಯಾನ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಬೆಂಗಳೂರು ನಗರ ಜಿಲ್ಲೆಯ, ಪೂರ್ವ ತಾಲೂಕಿನ, ವರ್ತೂರು ಹೋಬಳಿ ಪಣತೂರು ಗ್ರಾಮದಲ್ಲಿ ಸುಮಾರು 145 ಎಕರೆ ಪ್ರದೇಶದ ಪೈಕಿ 45 ಎಕರೆ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ 'ವೃಕ್ಷೋದ್ಯಾನ'ವನ್ನು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಲೋಕಾರ್ಪಣೆಗೊಳಿಸಿದರು. ಇದರ ವಿಶೇಷತೆಗಳೇನು?

ಅರಣ್ಯ ಇಲಾಖೆಯ ನಗರವನ ಯೋಜನೆಯ ಅಡಿಯಲ್ಲಿ ಹಾಗೂ ಕ್ವಾಲ್ಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(Qualcomm India Pvt. Ltd.) ಸಂಸ್ಥೆಯ ಸಿಎಸ್ಆರ್(CSR) ನಿಧಿಯ ಸಹಾಯದೊಂದಿಗೆ 'ಸೇಟೀಸ್' ಎನ್‌ಜಿಒ ಸಹಯೋಗದೊಂದಿಗೆ ಇಲ್ಲಿನ 45 ಎಕರೆ ಸ್ಥಳ 'ವೃಕ್ಷೋದ್ಯಾನ' ಪ್ರದೇಶವನ್ನು ಅಭಿವೃದ್ಧಿಪಡಿಲಾಗಿದೆ.

Bengaluru

ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, 45 ಎಕ್ರೆಯ ಈ ಪ್ರದೇಶವು ವಿವಿಧ ಜಾತಿಯ ಮರಗಿಡ, ಪ್ರಾಣಿ, ಪಕ್ಷಿ ಸಂಕುಲದಿಂದ ಕೂಡಿದೆ. ಇನ್ನುಳಿದಿರುವ 100 ಎಕರೆ ಪ್ರದೇಶವನ್ನು ಕ್ವಾಲ್ಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರೇ ಅಭಿವೃದ್ಧಿಪಡಿಸಲು ಕೋರಿದ್ದಾರೆ. ಅರಣ್ಯ ಇಲಾಖೆಯಿಂದಲೂ ಅನುದಾನ ಸಹಾಯ, ಸಹಕಾರ ನೀಡಲಾಗುವುದೆಂದು ಅವರು ತಿಳಿಸಿದರು.

4.50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ

ಸದರಿ ಪಾರ್ಕ್ ಅನ್ನು 4.50 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 1 ಕೋಟಿ ರೂಪಾಯಿ ಹೆಚ್ಚುವರಿ ಸಿಎಸ್ಆರ್ ಅನುದಾನ ನೀಡಲಾಗಿದ್ದು, ಆ ಹಣದಲ್ಲಿ ಸುತ್ತಲೂ ಕಾಪೌಂಡ್ ನಿರ್ಮಿಸಲು ಉಪಯೋಗಿಸಿಕೊಳ್ಳುವಂತೆ ಸಚಿವರು ಸೂಚಿಸಿದರು. ಮುಂದೆ ಇನ್ನಷ್ಟು ಹಸಿರು ಬೆಳೆಸುವ ಕಾರ್ಯ ಯಥೇಚ್ಛವಾಗಿ ನಡೆಯಲಿ‌ ಎಂದು ಹೇಳಿದರು.

ಬೆಂಗಳೂರಿನ ಬೇರೆ ಕಡೆಗಳಲ್ಲಿ ಬೃಹತ್ ಉದ್ಯಾನ

ಬೆಂಗಳೂರು ನಗರದಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ ಹೊರತುಪಡಿಸಿ, ಬೇರೆ ಕಡೆಗಳಲ್ಲಿ ಬೃಹತ್ ಉದ್ಯಾನವನ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಾಗಲೇ ಘೋಷಿಸಿರುವಂತೆ ನಗರದ ಇನ್ನೂ 4 ಕಡೆ ಲಾಲ್ ಬಾಗ್, ಕಬ್ಬನ್ ಉದ್ಯಾನ ಮಾದರಿಯಲ್ಲಿ ಬೃಹತ್ ಪಾರ್ಕ್ ಅನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ‌ ಎಂದು ಅವರು ವಿವರಿಸಿದರು.

ವೃಕ್ಷೋದ್ಯಾನ ಯೋಜನೆಯ ಉದ್ದೇಶವೇನು?

ನಗರ ಪ್ರದೇಶದ ಜನರಿಗೆ ಹಸಿರು ವಾತಾವರಣವನ್ನು ಕಲ್ಪಿಸುವುದು. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕರಿಗೆ ಆರೋಗ್ಯಕರ ಸೌಲಭ್ಯಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ವೃಕ್ಷೋದ್ಯಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು

* ಸಾರ್ವಜನಿಕರ ಓಡಾಟಕ್ಕಾಗಿ ಮುರಮ್ (Murram) ಬಳಸಿ 2.00 ಕಿ.ಮಿ ಇಕೋ-ಟ್ರೇಲ್/ನೇಚರ್ ಟ್ರೇಲ್ ನಿರ್ಮಾಣ ಮತ್ತು ಸುತ್ತಲೂ ಕರ್ಬ್ ಸ್ಟೋನ್ಸ್ ಅಳವಡಿಸಲಾಗಿದೆ.

* ನೀರಿನ ಸೌಕರ್ಯಕ್ಕಾಗಿ ಹೊಸ ಕೊಳವೆಬಾವಿ (Borewell) ಕೊರೆಸಿ, ಪಂಪ್ ಹಾಗೂ ಬೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

* ವೀಕ್ಷಕರು ವಿಶ್ರಾಂತಿ ಪಡೆಯಲು ಪರ್ಗೋಲಾ (Pergola) ಹಾಗೂ ನೀರಿನ ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ.

* ಸಸ್ಯಗಳು, ಪ್ರಾಣಿ-ಪಕ್ಷಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ಯೂಆರ್ ಕೋಡ್ (QR Code) ಒಳಗೊಂಡ ನಾಮಫಲಕಗಳು ಮತ್ತು ಜಾಗೃತಿ ಬೋರ್ಡ್‌ಗಳನ್ನು ಸ್ಥಾಪಿಸಲಾಗಿದೆ.

* ತೆರೆದ ಜಿಮ್, ಮಕ್ಕಳ ಆಟದ ಉಪಕರಣಗಳು, ಶೌಚಾಲಯ, ವಾಹನ ನಿಲುಗಡೆ ಪ್ರದೇಶ, ಗಜಿಬೋ ಗಳನ್ನು ಅಳವಡಿಸಲಾಗಿದೆ. ಇಂದಿನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ.ಪಿ.ಸಿ ಮೋಹನ್, ಸಂಸದರಾದ ಮಂಜುಳಾ ಅರವಿಂದ ಲಿಂಬಾವಳಿ, ಸಮಾಜ ಸೇವಕಿಯರು ಮತ್ತಿತರರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+