GBA: ಬೆಂಗಳೂರಲ್ಲಿ 'ಗ್ಯಾಂಗ್ ವರ್ಕ್' ಸ್ವಚ್ಛತಾ ಅಭಿಯಾನ, ಹಸಿ-ಒಣ ಕಸ ಬೇರ್ಪಡಿಸದಿದ್ದರೆ ದಂಡ!

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ ತೆರವು, ಒತ್ತುವರಿ, ನಿವೇಶನ ಸ್ವಚ್ಛತೆ ಅಭಿಯಾನ ಮುಂದುವರಿಸಿದ್ದು, ಇದೀಗ 'ಗ್ಯಾಂಗ್ ವರ್ಕ್' ಮೂಲಕ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮನೆಗಳಿಂದ ಹಸಿ ಮತ್ತು ಒಣ ಕಸ ವಿಂಗಡಿಸದವರ ವಿರುದ್ಧ ದಂಡ ಪ್ರಯೋಗಕ್ಕೆ ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇಂದು ಶುಕ್ರವಾರ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ಹಾಗೂ ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ, ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ರವರು ಹೆಚ್.ಎಸ್.ಆರ್. ಲೇಔಟ್ ಹಾಗೂ ಸಿಂಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಿದರು.

Bengaluru GBA

ಹೆಚ್.ಎಸ್.ಆರ್. ಲೇಔಟ್‌ನಲ್ಲಿ 'ಗ್ಯಾಂಗ್ ವರ್ಕ್' ಮೂಲಕ ಸ್ವಚ್ಛತೆ

ಹೆಚ್.ಎಸ್.ಆರ್. ಲೇಔಟ್‌ನ 19ನೇ ಮುಖ್ಯ ರಸ್ತೆಯ ಬಿಎಂಟಿಸಿ ಬಸ್ ಡಿಪೋ ಹಿಂಭಾಗ ಸೇರಿದಂತೆ ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ವೀಕ್ಷಿಸಿ ಅಗತ್ ಸೂಚನೆ ನೀಡಿದರು.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಸ್ವಚ್ಚತೆಗಾಗಿ ಗ್ಯಾಂಗ್ ವರ್ಕ್

ಹೆಚ್.ಎಸ್.ಆರ್. ಲೇಔಟ್‌ ನಲ್ಲಿ ಪ್ರತಿದಿನ ಮನೆ ಮನೆ ಕಸ ಸಂಗ್ರಹಣೆ ನಂತರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ ಪೌರಕಾರ್ಮಿಕರೊಳಗೊಂಡಂತೆ ಆಯಾ ವಾರ್ಡ್ ನ ಕಸ ಸಂಗ್ರಹಿಸುವ ಆಟೋ ಚಾಲಕರು ಹಾಗೂ ಸಹಾಯಕರು ಸೇರಿ ಒಂದು ತಂಡವಾಗಿ (ಗ್ಯಾಂಗ್ ವರ್ಕ್) ನಿಗದಿಪಡಿಸಿದ ರಸ್ತೆಗಿಳಿದು ಬ್ಲಾಕ್‌ಸ್ಪಾಟ್‌ ಹಾಗೂ ಪಾದಚಾರಿ ಮಾರ್ಗದಲ್ಲಿ ಇರುವ ಕಸ ತೆರವಿಗೆ ಸೂಚಿಸಿದರು.

ಈ ವೇಳೆ ಗ್ಯಾಂಗ್ ವರ್ಕ್ ಮೂಲಕ ಕೆರೆ ಪ್ರದೇಶ, ಉದ್ಯಾನಗಳು ಸೇರಿದಂತೆ ರಸ್ತೆ ಬದಿಯ ಹೂಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಹಾಗೂ ಒಣ ಎಲೆ-ಕಸಗಳನ್ನು ಆಟೋಗಳ ಮೂಲಕ ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದ್ದು, ಈ ಗ್ಯಾಂಗ್ ವರ್ಕ್ ನಿಂದ ಸಾರ್ವಜನಿಕ ಸ್ಥಳಗಳು ಶೀಘ್ರವಾಗಿ ಸ್ವಚ್ಛಗೊಳ್ಳುಬೇಕೆಂದು ಆಯುಕ್ತರು ತಿಳಿಸಿದರು.

ಸ್ಥಳದಲ್ಲಿದ್ದ ಕಸ ಸಂಗ್ರಹಣಾ ಆಟೋ ಚಾಲಕರೊಂದಿಗೆ ಸಂವಾದ ನಡೆಸಿದ ಆಯುಕ್ತರು, ಮನೆ-ಮನೆ ಕಸ ಸಂಗ್ರಹದ ನಂತರದ ಕಾರ್ಯವಿಧಾನ, ಕೆಲಸದ ಸವಾಲುಗಳು, ಸುರಕ್ಷತಾ ಸಾಧನಗಳ ಬಳಕೆ ಮತ್ತು ಸಕಾಲದಲ್ಲಿ ವೇತನ ಪಾವತಿಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.

ಮೂಲದಲ್ಲಿ ಕಸ ವಿಂಗಡಿಸದವರಿಗೆ ದಂಡ ಹಾಕಿ


ಮಿಶ್ರ ಕಸದಿಂದ ಕಸ ಬೇರ್ಪಡಿಸಲು ಉಂಟಾಗುತ್ತಿರುವ ತೊಂದರೆ ಕುರಿತು ಕಸ ಸಂಗ್ರಹಣಾ ಆಟೋ ಚಾಲಕರು ಮಾಡಿದ ಮನವಿ ಮೇರೆಗೆ ನಾಗರಿಕರು ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ನೀಡಬೇಕು, ನಿಯಮ ಉಲ್ಲಂಘಿಸಿ ಮಿಶ್ರ ಕಸ ನೀಡುವ ಮನೆಗಳಿಗೆ ಮಾರ್ಷಲ್‌ಗಳ ಮೂಲಕ ಸ್ಥಳದಲ್ಲೇ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಿಂಗಸಂದ್ರದ ಕಸ ಕಿಯೋಸ್ಕ್

ಸಿಂಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿರುವ ಕಸ ಕಿಯೋಸ್ಕ್ ಗೆ ಭೇಟಿ ನೀಡಿದ ಆಯುಕ್ತರು, ಮೂಲದಲ್ಲೇ ಕಡ್ಡಾಯ ಕಸ ವಿಂಗಡಣೆಗಾಗಿ ಇರಿಸಲಾಗಿದ್ದ ತ್ಯಾಜ್ಯ ವಿಂಗಡಣೆ ಬಿನ್ ಪರಿಶೀಲಿಸಿದರು. ಈ ಕಸ ಕಿಯೋಸ್ಕ್ ಬೆಳಗ್ಗೆ 7:00 ರಿಂದ ಸಂಜೆ 7:00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸಿಂಗಸಂದ್ರ ವಾರ್ಡ್ ವ್ಯಾಪ್ತಿಯ ನಿವಾಸಿಗಳು ಒಂದು ವೇಳೆ ಸಮಯದ ಅಭಾವದಿಂದ ಕಸ ಸಂಗ್ರಹಣ ಆಟೋಗಳಿಗೆ ಕಸ ನೀಡಲು ಸಾಧ್ಯವಾಗದ ಪಕ್ಷದಲ್ಲಿ ಈ ಕಸ ಕಿಯೋಸ್ಕ್ ಗೆ ಕಡ್ಡಾಯವಾಗಿ ವಿಂಗಡಣೆ ಮಾಡಿದಂತಹ ಕಸವನ್ನು ನೀಡಬಹುದಾಗಿದೆ ಎಂದರು.

ಸಿಂಗಸಂದ್ರದ ಕಸ ವರ್ಗಾವಣೆ ಕೇಂದ್ರದ ನಿರ್ವಹಣೆಗೆ ಮೆಚ್ಚುಗೆ

ಸಿಂಗಸಂದ್ರ ವ್ಯಾಪ್ತಿಯಲ್ಲಿರುವ ಕಸ ವರ್ಗಾವಣೆ ಕೇಂದ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿರುತ್ತದೆ. ತ್ಯಾಜ್ಯ ವರ್ಗಾವಣೆ ಪ್ರಕ್ರಿಯೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಹಾಗೂ ದಾರಿಹೋಕರಿಗೆ ಯಾವುದೇ ರೀತಿಯ ದುರ್ವಾಸನೆ ಅಥವಾ ಸ್ಥಳೀಯರಿಗೆ ಕಿರಿಕಿರಿ ಉಂಟಾಗದಂತೆ ಕೇಂದ್ರದ ಸುತ್ತಲೂ ವ್ಯವಸ್ಥಿತವಾಗಿ ಶೀಟ್‌ಗಳನ್ನು ಅಳವಡಿಸಿದ್ದು, ಹೆಚ್ಚಿನ ವಾಸನೆ ಹೊರ ಹೋಗದ ರೀತಿಯಲ್ಲಿ ದ್ರಾವಣಗಳನ್ನು ಬಳಸಲಾಗುತ್ತಿದೆ. ಈ ರೀತಿಯ ಶಿಸ್ತುಬದ್ಧ ತ್ಯಾಜ್ಯ ನಿರ್ವಹಣಾ ಕಾರ್ಯಕ್ಕೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+