Bengaluru Garbage Rules: ಕಸ ನಿರ್ವಹಣೆಗೆ ಹೊಸ ರೂಲ್ಸ್: ಮನೆ ಹೊರಗೆ ವಿಂಗಡಿಸಿ ಕಸ ಸಂಗ್ರಹಿಸಿ: ಸಚಿವ

ಬೆಂಗಳೂರಿನಲ್ಲಿ ನಿವಾಸಿಗಳೇ ಬಂದು ಪಾಲಿಕೆ ಸಿಬ್ಬಂದಿಗೆ, ಸ್ವಚ್ಛತಾ ಆಟೋಗಳಿಗೆ ಕಸ ನೀಡಬೇಕೆಂಬ ನಿರೀಕ್ಷೆಯನ್ನು ಬಿಡಬೇಕು. ನಿವಾಸಿಗಳು ಅವರವರ ಮನೆಯ ಹೊರಾಂಗಣದಲ್ಲಿರಿಸಿದ ವಿಂಗಡಿಸಿದ ಕಸವನ್ನು ಕಡ್ಡಾಯವಾಗಿ ಸಂಗ್ರಹಿಸಲು ಸ್ವಚ್ಛತಾ ಸಿಬ್ಬಂದಿಗಳಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ (ಜಿಬಿಎ) ಸಚಿವರಾದ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಇಂದು ಸೋಮವಾರ ಸಚಿವರು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರೊಂದಿಗೆ ಬೆಳ್ಳಂಬೆಳಗ್ಗೆ 5.30ಕ್ಕೆ ಪಾಲಿಕೆ ವ್ಯಾಪ್ತಿಯ ಹಲವೆಡೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಪರಿಶೀಲಿಸಿದರು. ತ್ಯಾಜ್ಯ ಸಂಗ್ರಹಣೆ, ಕಸ ವಿಲೇವಾರಿ ಕುರಿತು ಅಗತ್ಯ ಸೂಚನೆ ನೀಡಿದರು.

Bengaluru Garbage Rules Minister Krishna Byre Gowda Orders Door-to-Door Waste Collection from Homes

ದಾಸರಹಳ್ಳಿ ವಿಭಾಗದ ಮಲ್ಲಸಂದ್ರ ವಾರ್ಡ್ ವ್ಯಾಪ್ತಿಯ ಆಟೋ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿದ ಸಚಿವರು, ಚಾಲಕರು ಮತ್ತು ಹೆಲ್ಪರ್‌ಗಳ ಸಂಖ್ಯೆ ಹಾಗೂ ಹಾಜರಾತಿ ಮಾಹಿತಿ ಪಡೆದರು. ತ್ಯಾಜ್ಯ ಸಂಗ್ರಹಣೆಗೆ ನಿಯೋಜಿಸಲಾದ ಆಟೋಗಳ ಸ್ಕ್ಯಾನಿಂಗ್ ಹಾಗೂ ವಾಹನಗಳ ಕಾರ್ಯಾಚರಣೆ ಪರಿಶೀಲಿಸಿದರು. ಅಲ್ಲಿಂದ ಮಲ್ಲಸಂದ್ರ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಪೌರಕಾರ್ಮಿಕರ ಮಸ್ಟರಿಂಗ್ ವ್ಯವಸ್ಥೆ, ಹಾಜರಾತಿ, ಸಮವಸ್ತ್ರ, ಗ್ಲೌಸ್ ಬಳಕೆ ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರೊಂದಿಗೆ ನೇರವಾಗಿ ಸಂವಾದ ನಡೆಸಿದ ಸಚಿವರು, ಅವರ ಸಮಸ್ಯೆಗಳು ಹಾಗೂ ಅಹವಾಲು ಆಲಿಸಿ ಭರವಸೆ ನೀಡಿದರು.

ನಗರ ನಿವಾಸಿಗಳಿಗೆ ಸಚಿವರು ಸೂಚನೆ

ಮನೆಗಳಿಗೆ ಭೇಟಿ ನೀಡಿ, ಮನೆ-ಮನೆ ತ್ಯಾಜ್ಯ ಸಂಗ್ರಹಣೆ ನಡೆಯುತ್ತಿರುವ ವಿಧಾನ, ಸಾರ್ವಜನಿಕರು ತ್ಯಾಜ್ಯವನ್ನು ಯಾವ ರೀತಿಯಲ್ಲಿ ನೀಡುತ್ತಿದ್ದಾರೆ, ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಲಾಗುತ್ತಿದೆಯೇ, ತ್ಯಾಜ್ಯ ಸಂಗ್ರಹಣೆ ನಿಯಮಿತವಾಗಿ ನಡೆಯುತ್ತಿದೆಯೇ ಹಾಗೂ ರಸ್ತೆಗಳಲ್ಲಿನ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು. ಮನೆಯ ಗೇಟ್ ಬಳಿ ವಿಂಗಡಿಸಿದ ಕಸ ಚೆಲ್ಲದ ಹಾಗೆ, ಪಶು ಪ್ರಾಣಿಗಳಿಗೆ ಸಿಗದ ನೋಡಿಕೊಳ್ಳುವಂತೆ ತಿಳಿಸಿದರು.

ಮನೆಯಿಂದ ಹೋರ ಹೋಗುವಾಗ ಹೀಗೆ ಮಾಡಿ!

ಮನೆಯಿಂದ ಹೊರ ಹೋಗಬೇಕಾದಾಗ ತ್ಯಾಜ್ಯ ಸಂಗ್ರಹಣಾ ಸಮಯಕ್ಕಿಂತ ಮುಂಚಿತವಾಗಿ ವಿಂಗಡಿಸಲಾದ ಕಸ ಮನೆಯ ಕಾಂಪೌಂಡ್/ಗೇಟ್‌ನ ಹೊರಭಾಗದಲ್ಲಿ ಸಾಧ್ಯವಾದಷ್ಟು, ತ್ಯಾಜ್ಯ ಚೀಲ/ಕಂಟೈನರ್ ಅನ್ನು ಗೇಟ್‌ಗೆ ನೇತುಹಾಕುವಂತೆ ಇಡಬೇಕು. ಇದರಿಂದ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗೆ ಸುಲಭವಾಗಿ ತಲುಪಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಕಾಂಪೌಂಡ್ ಅಥವಾ ಗೇಟ್ ಇಲ್ಲದಿರುವಲ್ಲಿ, ನಾಯಿಗಳು ಹಾಗೂ ಇತರೆ ಪಶು ಪಕ್ಷಿಗಳು ತ್ಯಾಜ್ಯವನ್ನು ಎಳೆದು ಹರಡದಂತೆ, ತ್ಯಾಜ್ಯವನ್ನು ಎತ್ತರದಲ್ಲಿ, ಸಾಧ್ಯವಾದಷ್ಟು ಗೋಡೆಗೆ ಅಳವಡಿಸಿರುವ ರೇಲಿಂಗ್/ಸ್ಟ್ಯಾಂಡ್ ಮೇಲೆ ಇಡಬೇಕು. ನಿವಾಸಿಗಳು ತ್ಯಾಜ್ಯವನ್ನು ಸರಿಯಾಗಿ ಪ್ಯಾಕ್ ಮಾಡಿ ಅಥವಾ ಕಂಟೈನರ್‌ನಲ್ಲಿ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು. ತ್ಯಾಜ್ಯವನ್ನು ರಸ್ತೆಗೆ ಚೆಲ್ಲಬಾರದು ಅಥವಾ ರಸ್ತೆ ಬದಿಯಲ್ಲಿ ಹಾಕಿ ಬ್ಲ್ಯಾಕ್ ಸ್ಪಾಟ್ ಸೃಷ್ಟಿ ಮಾಡಬಾರದೆಂದು ನಿವಾಸಿಗಳಿಗೆ ಸಚಿವರು ಸೂಚಿಸಿದರು.

ಆರೋಗ್ಯ ಪರಿವೀಕ್ಷಕರು ಮತ್ತು ಮಾರ್ಷಲ್‌ಗಳು ನಿವಾಸಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಿ, ತ್ಯಾಜ್ಯವನ್ನು ಸಂಗ್ರಹಣಾ ಸಿಬ್ಬಂದಿಗೆ ಸುಲಭವಾಗಿ ತಲುಪುವ ನಿಗದಿತ ಸ್ಥಳದಲ್ಲಿ ಇಡುವಂತೆ ಖಚಿತಪಡಿಸಬೇಕು. ಇದರ ಮುಖ್ಯ ಉದ್ದೇಶ ಮನೆ-ಮನೆ ತ್ಯಾಜ್ಯ ಸಂಗ್ರಹಣೆಯನ್ನು ಖಚಿತಪಡಿಸುವುದು, ರಸ್ತೆಗಳಲ್ಲಿ ಕಸ ಬೀಳುವುದನ್ನು ತಡೆಯುವುದು ಹಾಗೂ ಪ್ರಾಣಿಗಳಿಂದ ತ್ಯಾಜ್ಯ ಹರಡುವುದನ್ನು ತಪ್ಪಿಸುವುದು ಎಂದು ಸಚಿವರು ತಿಳಿಸಿದರು.

ಖಾಲಿ ನಿವೇಶನಗಳ ಸ್ವಚ್ಛತೆ: ನೋಟಿ ಜಾರಿ

ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದಿರುವ ಪ್ರಕರಣಗಳ ಬಗ್ಗೆಯೂ ಮಾಹಿತಿ ಪಡೆದ ಸಚಿವರು, ಸಂಬಂಧಿಸಿದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ. ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಾಲಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿಯೂ ಮನೆ-ಮನೆ ತ್ಯಾಜ್ಯ ಸಂಗ್ರಹಣೆ ಹಾಗೂ ತ್ಯಾಜ್ಯ ವಿಂಗಡಣೆ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಸಾರ್ವಜನಿಕರು ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡುವಂತೆ ಹಾಗೂ ತ್ಯಾಜ್ಯ ಸಂಗ್ರಹಣೆಯಲ್ಲಿ ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಜಲವಾಯು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ, STP ಘಟಕದ ಕಾರ್ಯವೈಖರಿ, ಅಪಾರ್ಟ್‌ಮೆಂಟ್‌ ನಲ್ಲಿ ಘನತ್ಯಾಜ್ಯವನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ, ವಿಂಗಡಿಸಲಾಗುತ್ತಿದೆ ಹಾಗೂ ವಿಲೇವಾರಿ ಮಾಡಲಾಗುತ್ತಿದೆಯಾ ಎಂದು ಖದ್ದು ವೀಕ್ಷಿಸಿದರು. ಅಪಾರ್ಟ್‌ಮೆಂಟ್‌ನಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿಯಮಾನುಸಾರ ನಿರ್ವಹಿಸಬೇಕೆಂದು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+