Bengaluru Weather: 'ಮುರುಸು' ಪ್ರಭಾವ! ನಗರದಲ್ಲಿಂದು ದಿಢೀರ್ ಬದಲಾದ ವಾತಾವರಣ, ಅಲ್ಲಲ್ಲಿ ಜೋರು ಮಳೆ
ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರಿದ್ದು, ಇಂದು ಬುಧವಾರ ಮಧ್ಯಾಹ್ನವೇ ನಗರದಲ್ಲಿ ಬಿಸಿಲು ಸಂಪೂರ್ಣ ಕಣ್ಮರೆಯಾಯಿತು. ಮಧ್ಯಾಹ್ನ 2 ಗಂಟೆ ನಂತರ ವಿವಿಧ ಬಡಾವಣೆಗಳಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ ಸುರಿಯಿತು. ಪೂರ್ವ ತೆಲಂಗಣ ಮತ್ತು ಪಕ್ಕದ ಕರಾವಳಿ ಆಂಧ್ರಪ್ರದೇಶದ ಮೇಲೆ ನೆಲೆಗೊಂಡಿದ್ದ 'ಮುರುಸು'ಚಂಡಮಾರುತ ತೀವ್ರತೆಯ ಕಾರಣದಿಂದ ಕರ್ನಾಟಕದ ವಿವಿಧೆಡೆ ಮಳೆ ಆಗುತ್ತಿದ್ದು, ನಗರದಲ್ಲೂ ಮಳೆ ಚುರುಕು ಪಡೆದಿದೆ.
ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನವೆಂಬ್ 5ರವರೆಗೆ (ಗುರುವಾರ) ಹಗುರದಿಂದ ಸಾಧಾರಣ, ಕೆಲವೆಡೆ ವ್ಯಾಪಕ ಮಳೆ ಆಗಬಹುದು ಎಂದು ತಿಳಿಸಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಗರಿಷ್ಟ 20 ಮಿಲಿ ಮಿಟರ್ ಮಳೆ
ಇಂದು ಜೆಪಿನಗರ, ಗೊಟ್ಟಿಗೆರೆ, ಬೊಮ್ಮನಹಳ್ಳಿ, ಬೇಗೂರಿನಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಸುಮಾರು ಗರಿಷ್ಟ 20 ಮಿಲಿ ಮಿಟರ್ ನಷ್ಟು ಮಳೆ ಆಗಿದೆ. ಉಳಿದಂತೆ ವಿವಿ ಪುರಂ, ದಾಸರಹಳ್ಳಿ, ಎಚ್‌ಎಸ್ ಆರ್ ಬಡಾವಣೆ, ಕೋರಮಂಗಲ, ಉತ್ತರ ಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿಯಲ್ಲಿ ಜಿಟಿ ಜೀಟಿ ಮಳೆ ಆಯಿತು.
ಇನ್ನುಳಿದಂತೆ ಡೈರಿ ವೃತ್ತ, ವೈಟ್‌ಫಿಲ್ಡ್, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಬೆಳ್ಳಂದೂರು, ಕೇಂಗೇರಿ, ನಾಯಂಡಹಳ್ಳಿ, ಮೆಜೆಸ್ಟಿಕ್, ವಿಜಯನಗರ, ಚಾಮರಾಜಪೇಟೆ, ಯಶವಂತಪರು, ವಿದ್ಯಾರಣ್ಯಪುರ, ಹೆಬ್ಬಾಳ, ಜಕ್ಕೂರು ಸೇರಿದಂತೆ ವಿವಿಧೆಡೆ ಮಧ್ಯಾಹ್ನ ಹೊತ್ತಿಗೆ ಮಬ್ಬು, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಯಿತು. ನೋಡ ನೋಡುತ್ತಿದಂತೆ ಕೆಲವೆಡೆ ಮಳೆ ಆಗಿದ್ದು, ವಾಹನ ಸಂಚಾರಕ್ಕೆ ಕಿರಿ ಕಿರಿ ಉಂಟಾಯಿತು.
ತಾಪಮಾನದಲ್ಲಿ ಇಳಿಕೆ
ನಗರದಲ್ಲಿಂದು ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದ್ದು, 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19-21ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ನವೆಂಬರ್ 6ರಿಂದ ಮೂರು ದಿನ ಹಗುರದಿಂದ ಸಾಮಾನ್ಯ ಮಳೆ ಆಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.
ಮುರುಸು ಚಂಡಮಾರುತ ಪ್ರಭಾವ, ಮಳೆ ಚುರುಕು
ಆರಂಭದಲ್ಲಿ ಅಬ್ಬರಿಸಿದ್ದ ಹಿಂಗಾರು ಮಳೆ ಮತ್ತೆ ದುರ್ಬಲವಾಗಿತ್ತು. ಇದೀಗ ನವೆಂಬರ್ ಮೊದಲವಾರವೇ ಮತ್ತೆ ಮಳೆ ಚುರುಕಾಗಿದೆ. ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಇತ್ತ ಬೆಂಗಳೂರಿನಲ್ಲೂ ಮಳೆ ಸಿಂಚನವಾಗುತ್ತಿದೆ.
ಚಂಡಮಾರುತ ಮುರುಸು ಮತ್ತಷ್ಟು ದುರ್ಬಲ ಸಾಧ್ಯತೆ
ಪೂರ್ವ ತೆಲಂಗಾಣ ಮತ್ತು ಪಕ್ಕದ ಕರಾವಳಿ ಆಂಧ್ರಪ್ರದೇಶದ ಸಮುದ್ರ ಭಾಗದಲ್ಲಿರುವ ಚಂಡಮಾರುತ 'ಮುರಸು' ಕಳೆದ 06 ಗಂಟೆಗಳಲ್ಲಿ ಪ್ರತಿ ಗಂಟೆಗೆ 6 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ನಿಧಾನವಾಗಿ ಸಾಗಿದೆ. ಇಂದು ಬೆಳಗ್ಗೆ ಖಮ್ಮಂನಿಂದ (ತೆಲಂಗಾಣ) ನೈರುತ್ಯಕ್ಕೆ ಸುಮಾರು 10 ಕಿ.ಮೀ, ನಂದಿಗಾಮದಿಂದ (ಆಂಧ್ರಪ್ರದೇಶ) ಉತ್ತರ-ವಾಯುವ್ಯಕ್ಕೆ 50 ಕಿ.ಮೀ, ರೆಂಟಚಿಂತಲದಿಂದ (ಆಂಧ್ರಪ್ರದೇಶ) ವಾಯುವ್ಯಕ್ಕೆ 90 ಕಿ.ಮೀ, ನಲ್ಗೊಂಡದಿಂದ (ತೆಲಂಗಾಣ) ಪೂರ್ವ-ಈಶಾನ್ಯಕ್ಕೆ 90 ಕಿ.ಮೀ, ವಿಜಯವಾಡದಿಂದ (ಆಂಧ್ರಪ್ರದೇಶ) ವಾಯುವ್ಯಕ್ಕೆ 90 ಕಿ.ಮೀ ಮತ್ತು ಭದ್ರಾಚಲಂನಿಂದ (ತೆಲಂಗಾಣ) ಪಶ್ಚಿಮ-ನೈರುತ್ಯಕ್ಕೆ 100 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಇದು ಉತ್ತರದ ಕಡೆಗೆ ಚಲಿಸುತ್ತಿದೆ.
ಮುಂದಿನ 06 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಂಡು 'ವೆಲ್ ಮಾರ್ಕ್ಸ್ ಲೋ ಪ್ರೆಶರ್ ಏರಿಯಾ' (ಸ್ಪಷ್ಟವಾಗಿ ಗುರುತಿಸಬಹುದಾದ ಕಡಿಮೆ ಒತ್ತಡದ ಪ್ರದೇಶ) ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ. ಇನ್ನೂ ಕೊಂಕಣ ಮತ್ತು ಗೋವಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈ ವಾತಾವರಣದಲ್ಲಿನ ಚಂಡಮಾರುತದ ಪರಿಚಲನೆ (cyclonic circulation) ಮುಂದುವರಿದಿದೆ. ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಕಂಡು ಬಂದಿದೆ.
12.35PM: Heavy showers 🌧️☔ in Gottigere It's Bucketing Down 🌧️.#BengaluruRains https://t.co/yB5ZKakCNq
— Namma Karnataka Weather (@namma_vjy) November 4, 2026
ತಮಿಳುನಾಡು ದಕ್ಷಿಣ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದವರೆಗೆ ಮೇಲ್ಮ ವಾತಾವರಣದಲ್ಲಿನ ಚಂಡಮಾರುತದ ಪರಿಚಲನೆ ಮುಂದುವರಿದಿದೆ.
ಲಕ್ಷದ್ವೀಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮೈ ವಾತಾವರಣದಲ್ಲಿನ ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಇದಲ್ಲೆ ಕಾರಣದಿಂದ ತಮಿಳುನಾಡು, ಕರ್ನಾಟಕ, ಚೆನ್ನೈ, ಆಂಧ್ರ, ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಹಗುರ, ಸಾಧಾರಣ ಮತ್ತು ಭಾರೀ ಮಳೆ ಆಗಲಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
12.30PM: Passing Showers 🌧️☔ in Gottigere. Typical NEM Rains 🌧️.#BengaluruRains https://t.co/74dFPxLQBD
— Namma Karnataka Weather (@namma_vjy) November 4, 2026


Click it and Unblock the Notifications
