US Consulate: ಮುಂದಿನ ವರ್ಷ ಬೆಂಗಳೂರಿನಲ್ಲಿ ಯುಎಸ್ ರಾಯಭಾರ ಕಚೇರಿ; ಅಮೆರಿಕದ ರಾಯಭಾರಿ

ಭಾರತದ ಯುನೈಟೆಡ್ ಸ್ಟೇಟ್ಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬೆಂಗಳೂರಿನಲ್ಲಿ ಅಮೇರಿಕನ್ ಕಾನ್ಸುಲೇಟ್ ಮುಂದಿನ ವರ್ಷದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

2023 ರಲ್ಲಿ, ಪ್ರಧಾನಿ ನರೇಂದ್ರ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಗೆ ಭೇಟಿ ನೀಡಿದಾಗ ಮತ್ತು ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾದಾಗ, ಅವರು ಭಾರತದಲ್ಲಿ ಎರಡು ಹೊಸ ಯುಎಸ್ ಕಾನ್ಸುಲೇಟ್‌ಗಳನ್ನು ಘೋಷಣೆ ಮಾಡಿದ್ದರು.

Bengaluru Expected New US Consulate Next Year Says American Ambassador

ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಎರಿಕ್ ಗಾರ್ಸೆಟ್ಟಿ, "ಈ ಹಿಂದೆ ಪ್ರಧಾನಿ ಮೋದಿ ಅಧ್ಯಕ್ಷ ಬಿಡೆನ್ ಅವರನ್ನು ಭೇಟಿಯಾದಾಗ ಅವರು ಭಾರತದಲ್ಲಿ ಎರಡು ಕಾನ್ಸುಲೇಟ್‌ಗಳನ್ನು ಘೋಷಿಸಿದರು. ಅದರಲ್ಲಿ ಒಂದು ಬೆಂಗಳೂರಿನಲ್ಲಿ ಇರುತ್ತದೆ. ಮುಂಬರುವ ವರ್ಷದಲ್ಲಿ ಅದು ಆರಂಭವಾಗುತ್ತದೆ ಎಂದು ನಾನು ಆಶಿಸುತ್ತೇನೆ. ಈ ನಗರದಲ್ಲಿ ಯುಎಸ್‌ ದೂತಾವಾಸವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.

ಐದು ಲಕ್ಷ ಮಂದಿಗೆ ಅನುಕೂಲ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದಿಂದ ಕನಿಷ್ಠ ನಾಲ್ಕರಿಂದ ಐದು ಲಕ್ಷ ಜನರಿಗೆ ವೀಸಾ ಸಂಬಂಧಿತ ಕೆಲಸವನ್ನು ನಗರದಲ್ಲಿ ಮಾಡಲು ಯುಎಸ್ ರಾಯಭಾರ ಕಚೇರಿ ಸಹಾಯ ಮಾಡುತ್ತದೆ ಎಂದು ಹೇಳಿದರು.

ಬೆಂಗಳೂರಿನ ಜನರು ಯಾವುದೇ ಯುಎಸ್ ವೀಸಾ ಸಂಬಂಧಿತ ಕೆಲಸವನ್ನು ಪಡೆಯಲು ಚೆನ್ನೈ, ಹೈದರಾಬಾದ್ ಅಥವಾ ನವದೆಹಲಿಗೆ ಹೋಗಬೇಕಾಗಿತ್ತು. ಇದಕ್ಕಾಗಿ ₹25,000 ರಿಂದ ₹30,000 ಖರ್ಚಾಗುತ್ತಿತ್ತು. ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳನ್ನು ಹೊಂದಿದ್ದರೂ ಸಹ, ಬೆಂಗಳೂರಿಗೆ ಕಾನ್ಸುಲೇಟ್ ಇರಲಿಲ್ಲ. ವೈಟ್‌ಹೌಸ್ ಘೋಷಣೆಯ ಬಗ್ಗೆ ನಮಗೆ ಸಂತೋಷವಾಗಿದೆ ಮತ್ತು ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಎಂದರು.

ಬೆಂಗಳೂರಿನಲ್ಲಿರುವ ಯುಎಸ್ ಕಾನ್ಸುಲೇಟ್ ಪ್ರತಿ ವರ್ಷ ಕರ್ನಾಟಕದಲ್ಲಿರುವ ನಾಲ್ಕರಿಂದ ಐದು ಲಕ್ಷ ಜನರಿಗೆ ರಾಜ್ಯದ ಹೊರಗೆ ಪ್ರಯಾಣಿಸದೆ ವೀಸಾ ಸ್ಟಾಂಪಿಂಗ್ ಮಾಡಲು ಸಹಾಯ ಮಾಡುತ್ತದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ದೃಢವಾದ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಗುರುತಿಸಲು ಬಾಹ್ಯಾಕಾಶ ಕ್ಷೇತ್ರದ ವ್ಯಾಪಾರ ನಾಯಕರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಲು ಗಾರ್ಸೆಟ್ಟಿ ಬೆಂಗಳೂರಿಗೆ ಭೇಟಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+