ಬೆಂಗಳೂರು ಈಜೀಪುರ ಮೇಲ್ಸೇತುವೆ ಹೊಸ ಸಮಸ್ಯೆ: ಕಟ್ಟುವ ಮುಂಚೆಯೇ ಸಂಕಷ್ಟ!

ಬೆಂಗಳೂರಿನಲ್ಲಿ ಪ್ರಾರಂಭವಾಗುವುದಕ್ಕೆ ಮುಂಚೆಯೇ ಹಲವು ವಿವಾದಗಳಲ್ಲಿ ಸಿಲುಕಿರುವ ಈಜೀಪುರ ಫ್ಲೈಓವರ್ ವಿಚಾರದಲ್ಲಿ ಇದೀಗ ಹೊಸದೊಂದು ವಿವಾದ ಸೃಷ್ಟಿಯಾಗಿದೆ. ಈಜೀಪುರ ಮೇಲ್ಸೇತುವೆ ಹಲವು ವರ್ಷಗಳಿಂದ ನಡೆಯುತ್ತಿದೆ. ಸದ್ಯಕ್ಕೆ ಈ ಮೇಲ್ಸೇತುವೆ ಮುಕ್ತಾಯವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ಪ್ರಕಾರ, ಇದೇ ವರ್ಷಾಂತ್ಯಕ್ಕೆ ಈಜೀಪುರ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗಲಿದೆ. ಇದರ ನಡುವೆ ಕಾಮಗಾರಿ ಪೂರ್ಣಗೊಳ್ಳುವುದಕ್ಕಿಂತ ಮುಂಚೆಯೇ ಇದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಸಂಬಂಧ ಐಐಎಸ್ಸಿ ವರದಿ ಸಲ್ಲಿಕೆ ಮಾಡಿದೆ.

ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಯೂ ಬೆಂಗಳೂರಿಗರಿಗೆ ನರಕ ಸದೃಶ್ಯ ಎಂದೇ ಹೇಳಬಹುದು. 2.5 ಕಿ.ಮೀನ ಈ ಮೇಲ್ಸೇತುವೆ ಕಾಮಗಾರಿಯು ಬರೋಬ್ಬರಿ 8 ವರ್ಷಗಳಿಂದ ನಡೆಯುತ್ತಿದೆ. ಆದರೆ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಸರ್ಜಾಪುರ ರಸ್ತೆ ಕೋರಮಂಗಲ ಭಾಗದಲ್ಲಿ ಸಂಚಾರ ಸಮಸ್ಯೆ ಎದುರಾಗಿದೆ.

Bengaluru Ejipura Flyover Faces Fresh Trouble Even Before Completion

ಕೋರಮಂಗಲ, ಸಿಲ್ಕ್‌ಬೋರ್ಡ್, ಮತ್ತು ಇಂದಿರಾನಗರದಂತಹ ಪ್ರದೇಶಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲ್ಸೇತುವೆ ಕಾಮಗಾರಿಯಿಂದ ಟ್ರಾಫಿಕ್ ಜಾಮ್ ಕಡಿಮೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ ಇದರ ನಡುವೆ ಈ ಮೇಲ್ಸೇತುವೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಪೂರ್ವಸಿದ್ಧತಾ ಕಾರ್ಯದ ಸಮಯದಲ್ಲಿ ಈಜೀಪುರ ಫ್ಲೈಓವರ್‌ನಲ್ಲಿ ಪತ್ತೆಯಾದ ಬಿರುಕು ದೊಡ್ಡ ಸಮಸ್ಯೆ ಏನಲ್ಲ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಪ್ರಾಧ್ಯಾಪಕರ ಮಧ್ಯಂತರ ವರದಿ ಹೇಳಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೇಲ್ಸೇತುವೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಆದರೆ ಪ್ರಮುಖ ಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ, ಇದನ್ನು ಸರಿಪಡಿಸಿದರೆ ಸಾಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗಿದೆ.

ಮುಂದಿನ ವರ್ಷ ಮುಕ್ತಾಯ ನಿರೀಕ್ಷೆ: ಇನ್ನು ಈಜೀಪುರ ಮೇಲ್ಸೇತುವೆ ಕಾಮಗಾರಿಯು 2025ನೇ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಈಜೀಪುರ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಕಾಮಗಾರಿಯು ಮುಂದಿನ ವರ್ಷ / 2026ನೇ ಸಾಲಿನ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಜನರಿಂದ ತೀವ್ರ ಟೀಕೆ: ಇನ್ನು ಬೆಂಗಳೂರಿನ ಈಜೀಪುರ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಬೆಂಗಳೂರಿಗರು ಅಸಮಾಧಾನ ಹೊರ ಹಾಕಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯಲ್ಲಿ ಅನವಶ್ಯಕ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಬೆಂಗಳೂರಿಗರು ಅಸಮಾಧಾನ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+