Bengaluru Toll Fee: ರಾಜ್ಯದ ಈ ಟೋಲ್ ನಲ್ಲಿ ದಶಕದಲ್ಲೇ ದಾಖಲೆಯ ಶುಲ್ಕ ಸಂಗ್ರಹ

ಬೆಂಗಳೂರು, ಡಿಸೆಂಬರ್ 10: ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಭರ್ಜರಿ ಟೋಲ್ ಸಂಗ್ರಹವಾಗುತ್ತಿದೆ. ಈ ಪೈಕಿ ಬೆಂಗಳೂರಿನ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹದಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಟೋಲ್ ಸಂಗ್ರಹದ ಏರಿಕೆಯನ್ನು ದೃಢ ಬೆಳವಣಿಗೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬಣ್ಣಿಸಿದ್ದಾರೆ.

ಹೌದು, ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಟೋಲ್ ಪ್ಲಾಜಾದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೋಬ್ಬರಿ 308 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ದಶಕದ ಅತ್ಯಧಿಕ ಗರಿಷ್ಠ ದಾಖಲೆಯಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆಂದು ಎಂದು 'ದಿ ಹಿಂದೂ' ವರದಿ ಮಾಡಿದೆ.

Bengaluru Devanahalli Toll Plaza Tops in Karnataka with Rs 308 Crore Toll fee Collection in FY 24

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ಸಾಲಿನಲ್ಲಿ (2023-24) ಕರ್ನಾಟಕದಾದ್ಯಂತ ಇರುವ ಒಟ್ಟು 40 ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಭರ್ತಿ 2,859.90 ಕೋಟಿ ರೂಪಾಯಿ ಟೋಲ್ ಶುಲ್ಕ ಸಂಗ್ರಹವಾಗಿದೆ.

ದಶಕದಲ್ಲಿ ಟೋಲ್ ಆದಾಯ ದುಪ್ಪಟ್ಟು: ಅಂಕಿ ಸಂಖ್ಯೆ

ಇಷ್ಟು ಹಣದಲ್ಲಿ ರೂ.308.01 ಕೋಟಿ ಸಂಗ್ರಹಿಸುವ ಮೂಲಕ ಬೆಂಗಳೂರು ದೇವನಹಳ್ಳಿ ಹೆದ್ದಾರಿ (ಸಾದಹಳ್ಳಿ) ಟೋಲ್ ಪ್ಲಾಜಾವು ಮೊದಲ ಸ್ಥಾನದಲ್ಲಿದೆ. ಈ ಟೋಲ್ ಪ್ಲಾಜಾವು ಕಳೆದ ಸಾಲಿನಲ್ಲಿ ಅತ್ಯಧಿಕ ಶುಲ್ಕ (308.01 ಕೋಟಿ) ಸಂಗ್ರಹಿಸಿದೆ ಎಂದು ಸಂಸತ್‌ನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವಿವರವಾಗಿ ತಿಳಿಸಿದ್ದಾರೆ.

Bengaluru Devanahalli Toll Plaza Tops in Karnataka with Rs 308 Crore Toll fee Collection in FY 24

ಇದೇ ದೇವನಹಳ್ಳಿ ಟೋಲ್ ಹತ್ತು ವರ್ಷಗಳ ಹಿಂದೆ ಅಂದರೆ 2014-15ರ ಆರ್ಥಿಕ ವರ್ಷದ ಸಾಲಿನಲ್ಲಿ ₹125.75 ಕೋಟಿ ರೂ. ಸಂಗ್ರಹಿಸಿತ್ತು. ಇದು ಈ ಕಳೆದ ಒಂದು ದಶಕದ ಅವಧಿಯ ಮಹತ್ವದ ಮೈಲಿಗಲ್ಲು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಟೋಲ್‌ಗಳಿಂದ ಕಳೆದ ವರ್ಷ ₹ 2,859.90 ಕೋಟಿ ಹಣ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಈ ಟೋಲ್ ಶುಲ್ಕ ಸಂಗ್ರಹ ಪ್ರಮಾಣ ಏರಿಕೆ ಆಗಬಹುದೆಂದು ಅಂದಾಜಿಸಲಾಗಿದೆ. ಕರ್ನಾಟಕ ಸೇರಿದಂತೆ ಭಾರವು ಟೋಲ್ ಆದಾಯದಲ್ಲಿ ದೃಢ ಬೆಳವಣಿಗೆ ಸಾಧಿಸುತ್ತಿದೆ ಎಂದರು.

ನೆಲಮಂಗಲ ಟೋಲ್ ಪ್ಲಾಜಾ ಆದಾಯ ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 4 (NH-4) ರಲ್ಲಿ ಬರುವ ನೆಲಮಂಗಲ ಟೋಲ್ ಪ್ಲಾಜಾವು ದಶಕದ ಹಿಂದೆ (2014-15) ರೂ 59 ಕೋಟಿ ಗೂ ಹೆಚ್ಚು ಶುಲ್ಕ ಸಂಗ್ರಹಿಸಿದ್ದರು. ಈ ಬಾರಿ ₹103.41 ಕೋಟಿ (2023-24ರಲ್ಲಿ) ಶುಲ್ಕ ಸಂಗ್ರಹಿಸುವ ಮೂಲಕ ಪ್ರಗತಿ ಸಾಧಿಸಿದೆ ಎಂದು ಅವರು ಲೆಕ್ಕ ಕೊಟ್ಟರು.

ವಾಹನಗಳ ಸಂಚಾರದಲ್ಲಿ ಏರಿಕೆ

ಬೆಂಗಳೂರಿನಿಂದ ತುಮಕೂರು ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣ ಸಂಪರ್ಕಿಸುವ ಹೆದ್ದಾರಿ ಟೋಲ್‌ ಸಂಗ್ರಹ ಹೆಚ್ಚಳ ಕುರಿತು ಸಂಚಾರ ತಜ್ಞರೊಬ್ಬರು ಮಾತನಾಡಿದ್ದಾರೆ. ಇಷ್ಟು ಪ್ರಮಾಣದಲ್ಲಿ ಟೋಲ್ ಹೆಚ್ಚಾಗುತ್ತಿದೆ ಎಂದರೆ, ವಾಹನಗಳ ತ್ವರಿತ ಏರಿಕೆ, ವಾಹನ ಬಳಕೆಯಲ್ಲಿನ ಪ್ರಗತಿಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಬೆಂಗಳೂರು ವೇಗವಾಗಿ ಬೆಳಯುತ್ತಿರುವ ಮಹಾನಗರವಾದ ಕಾರಣ ಈ ನಗರಕ್ಕೆ ಬರುವ, ಹೋಗುವ ವಾಹನಗಳ ಪ್ರಮಾಣ ಹೆಚ್ಚಾಗಿರುತ್ತದೆ. ನಗರದ ಸುತ್ತಮುತ್ತ ಹೆದ್ದಾರಿಗಳು ಈಗಾಗಲೇ ಅಭಿವೃದ್ಧಿ ಆಗಿವೆ. ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರವು ಟೋಲ್ ಹೆಚ್ಚಳವನ್ನು ವಿಸ್ತರಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಟೋಲ್ ಫಿ ಇನ್ನಷ್ಟು ಹೆಚ್ಚಾಗಲಿದೆ. ಪ್ರಯಾಣಿಕರು ಟೋಲ್ ಶುಲ್ಕ ರಿಯಾಯಿತಿ, ಆಫರ್ ಘೋಷಣೆಗೆ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+