• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಕ್ರೈಮ್ ರೌಂಡಪ್: ಶ್ರೀಕಿ ಬಂಟ ಅಂದರ್, ಮೊಬೈಲ್ ಕಳ್ಳನಿಗೆ ಗೂಸಾ!

|
Google Oneindia Kannada News

ಬೆಂಗಳೂರು, ನ. 09: ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರನ್ನು ಕಟ್ಟಿ ಹಾಕಿ ಗೂಸಾ ನೀಡಿದ ಸಾರ್ವಜನಿಕರು. ಹೋಟೆಲ್ ಪುಂಡಾಟ ಪ್ರಕರಣದಲ್ಲಿ ಮತ್ತೊಬ್ಬ ಅರೋಪಿ ವಶಕ್ಕೆ. ಬಿಬಿಎಂಪಿ ಪಾರ್ಕ್, ಮೈದಾನ ಒತ್ತುವರಿ ಸಂಬಂಧ ಸರ್ವೆ ವರದಿ ಸಲ್ಲಿಸದ ಬಿಬಿಎಂಪಿಗೆ ತರಾಟೆ ಇವಿಷ್ಟು ಇಲ್ಲಿ ತನಕದ ಬೆಂಗಳೂರಿನ ಕ್ರೈಂ ಕಥೆಗಳು.

ಮೊಬೈಲ್ ಕಳ್ಳರಿಗೆ ಥಳಿತ:

ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಮೊಬೈಲ್ ಕಳ್ಳರನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಬೂದಿಹಾಳ್ ಗೇಟ್ ಬಳಿಯ ಶ್ರೀ ಭಜರಂಗಿ ಮೊಬೈಲ್‌ನಲ್ಲಿ ಕಳ್ಳತನ ಆಗಿತ್ತು. ಮುನಿರಾಜು ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಸುಮಾರು ಒಂದು ಲಕ್ಷ ರೂ. ಮೌಲ್ಯದ ಮೊಬೈಲ್ ಕದ್ದಿದ್ದರು. ಕದ್ದ ಮಾಲನ್ನು ಊರಿನ ಹೊರ ಭಾಗದಲ್ಲಿ ಹಂಚಿಕೊಳ್ಳುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಕಳ್ಳರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಆ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಯಲ್ ಆರ್ಕಿಡ್ ಹೋಟೆಲ್ ಪುಂಡಾಟ ಪ್ರಕರಣ:

ಶ್ರೀಕಿಯ ಮತ್ತೊಬ್ಬ ಸ್ನೇಹಿತ ಅಂದರ್: ರಾಯಲ್ ಆರ್ಕಿಡ್ ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಹಲ್ಲೆ ನೆಡೆಸಿದ ಪ್ರಕರಣ ಸಂಬಂಧ ಮತ್ತೊಬ್ಬ ವ್ಯಕ್ತಿಯನ್ನು ಜೀವನ ಭೀಮಾನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹ್ಯಾಕರ್ ಶ್ರೀಕಿ, ವಿಷ್ಣುಭಟ್ ಬಂಧನದ ಬಳಿಕ ಇದೀಗ ವಿಷ್ಣುಭಟ್‌ನ ಸಂಬಂಧಿ ಅಭಯ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಭೀಮಾ ಜ್ಯುವೆಲರಿ ಮಾಲೀಕನ ಪುತ್ರ ವಿಷ್ಣುಭಟ್ ಸಂಬಂಧಿಯಾಗಿರುವ ಅಭಯ್ ಮತ್ತು ಹ್ಯಾಕರ್ ಶ್ರೀಕೃಷ್ಣ ಆಪ್ತ. ವಿಷ್ಣುಭಟ್ ಜತೆ ಅಭಯ್ ಕೂಡ ಅಲ್ಲಿಯೇ ಇದ್ದ. ಶ್ರೀಕಿಯನ್ನು ಹಲವಾರು ಬಾರಿ ಹೋಟೆಲ್ ನಲ್ಲಿ ಭೇಟಿ ಮಾಡಿದ್ದ. ಇಬ್ಬರೂ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದು, ಗಲಾಟೆ ದಿನ ಕೂಡ ಅಭಯ್ ಅಲ್ಲಿಯೇ ಇದ್ದ ಎನ್ನಲಾಗಿದೆ. ಇದೇ ವೇಳೆ ಸಂಬಂಧಿ ವಿಷ್ಣುಭಟ್‌ಗೆ ಕರೆ ಮಾಡಿ ಹೋಟೆಲ್ ಬಳಿ ಬರುವಂತೆ ಸೂಚಿಸಿದ್ದ. ಬರುವಾಗ ಮಾದಕ ವಸ್ತು ತರುವಂತೆ ಸೂಚಿಸಿದ್ದ. ಅಭಯ್ ಪೋನ್ ಕರೆ ಮಾಡಿದ ಬೆನ್ನಲ್ಲೈ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ನನ್ನು ವಿಷ್ಣು ಭೇಟಿ ಮಾಡಿ ಹದಿನೈದು ಮಾದಕ ನಶೆಯ ಟ್ಯಾಬ್ಲೆಟ್ ತಂದಿದ್ದಾನೆ. ಅದರಲ್ಲಿ ವಿಷ್ಣುಭಟ್ ನಾಲ್ಕು ಟ್ಯಾಬ್ಲೆಟ್ ಸೇವನೆ ಮಾಡಿ ಮಾದಕ ಜಾಲದಲ್ಲಿ ತೇಲಾಡುತ್ತಿದ್ದ. ಅದೇ ನಶೆಯಲ್ಲಿ ಹೋಟೆಲ್ ಗೆ ಹೋಗಿ ಗಲಾಟೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಹೋಟೆಲ್ ಗೆ ತೆರಳಿದ ವಿಷ್ಣುಭಟ್ ಶ್ರೀಕಿಯನ್ನು ಭೇಟಿ ಮಾಡಿದ್ದ. ಹೋಟೆಲ್ ಶಿಷ್ಠಾಚಾರ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಷ್ಣುಭಟ್ ನನ್ನು ಸೆಕ್ಯುರಿಟಿ ಪ್ರಶ್ನಿಸಿದ್ದರು. ಈ ವೇಳೆ ಜಗಳ ನಡೆದಿದ್ದು, ಸೆಕ್ಯುರಿಟಿ ಸಿಬ್ಬಂದಿ ಮೇಲೆ ವಿಷ್ಣುಭಟ್ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಅಭಯ್ ಸ್ಥಳದಿಂದ ಪರಾರಿಯಾಗಿದ್ದಾನೆ.

Bengaluru Crime News Roundup (09 Nov 2021): Mobile Thieves Tied to Poll, Sriki Close Aide Arrested

ಹ್ಯಾಕರ್ ಶ್ರೀಕಿ ಬಳಿಯಿದ್ದ ಲ್ಯಾಪ್‌ಟಾಪ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ಕು ಲ್ಯಾಪ್‌ಟಾಪ್ ಇಟ್ಟುಕೊಂಡು ಶ್ರೀಕಿ ಏನು ಮಾಡುತ್ತಿದ್ದ ಎಂಬುದು ಪೊಲೀಸರನ್ನು ನಿದ್ದೆಗೆಡಿಸಿದೆ. ಲ್ಯಾಪ್‌ಟಾಪ್‌ಗಳ ಮೇಲೆ ಹ್ಯಾಕಿಂಗ್ ಚಿತ್ರಗಳಿದ್ದು, ಲ್ಯಾಪ್‌ಟಾಪ್ ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವಿಷ್ಣುಭಟ್‌ನನ್ನು ವಶಕ್ಕೆ ಪಡೆದು ಜೀವನ ಭೀಮಾನಗರ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.

   ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ರಿಲೀಸ್ | Oneindia Kannada

   ಅಕ್ರಮ ಕಟ್ಟಡ ಸರ್ವೆ ವರದಿಗೆ ಹೈಕೋರ್ಟ್ ತರಾಟೆ: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನವನ ಮತ್ತು ಮೈದಾನದಲ್ಲಿ ತಲೆಯೆತ್ತಿರುವ ಅಕ್ರಮ ಕಟ್ಟಡ ತೆರವು ಸಂಬಂಧ ಮಾಡಿರುವ ಸರ್ವೆ ವರದಿ ಸಲ್ಲಿಸದ ಬಿಬಿಎಂಪಿ ಅಧಿಕಾರಿಗಳ ಕ್ರಮದ ಬಗ್ಗೆ ಹೈಕೋರ್ಟ್ ಕೆಂಡಾಮಂಡಲವಾಗಿದೆ. ಕೋರ್ಟ್ ಆದೇಶವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ಒಂದಿಬ್ಬರನ್ನು ಜೈಲಿಗೆ ಕಳುಹಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಬಿಬಿಎಂಪಿ ಮುಖ್ಯ ಆಯುಕ್ತರನ್ನು ಕಳುಹಿಸಬೇಕು. ಕೋರ್ಟ್ ಘನತೆ ವಿಚಾರದಲ್ಲಿ ರಾಜಿ ಇಲ್ಲ ಎಂದು ಎಂದು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

   English summary
   Karnataka Crime News Roundup (09 Nov 2021) : Mobile Thieves Tied to Poll and public beaten in Nelamanagala. Royal Orchid Hotel Case; Sriki close aide Abhay arrested by Jeevan Bhima nagar police. High court charges BBMP for not submitting report on illegal building construction in BBMP park.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X