56 ಸಾವಿರ ಮನೆ ಬಾಡಿಗೆ, 1.3 ಲಕ್ಷ ಮಾಸಿಕ ವೆಚ್ಚ: ಬೆಂಗಳೂರು ದುಬಾರಿ ಜೀವನಕ್ಕೆ ನೆಟ್ಟಿಗರು ಶಾಕ್‌

ಬೆಂಗಳೂರು ನಗರದಲ್ಲಿ ಜೀವನ ವೆಚ್ಚ ಎಷ್ಟು ದುಬಾರಿ ಆಗಿದೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆ ಆರಂಭವಾಗಿದೆ. ಕಾರಣ ನಗರದ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳು ತಿಂಗಳಿಗೆ ಸುಮಾರು 1.3 ಲಕ್ಷ ರೂ. ಖರ್ಚು ಮಾಡಿದರೂ ಆರ್ಥಿಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು.

ಉತ್ಪನ್ನ ನಿರ್ವಹಣೆ (ಪ್ರೊಡಕ್ಟ್‌ ಮ್ಯಾನೇಜ್‌ಮೆಂಟ್‌) ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಈ ದಂಪತಿ ತಮ್ಮ ಮಾಸಿಕ ಖರ್ಚಿನ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅತಿಯಾದ ಐಶಾರಾಮಿ ಖರ್ಚುಗಳಿಗಿಂತ ಸಾಮಾನ್ಯ ದಿನನಿತ್ಯದ ವೆಚ್ಚಗಳೇ ದೊಡ್ಡ ಮೊತ್ತಕ್ಕೆ ಏರಿಕೆಯಾಗಿರುವುದು ಅನೇಕರ ಗಮನ ಸೆಳೆದಿದೆ.

Bengaluru Couple

ಬಾಡಿಗೆ ವೆಚ್ಚವೇ ಅತಿ ಹೆಚ್ಚು

ದಂಪತಿ ಪ್ರತಿ ತಿಂಗಳು ತಮ್ಮ ಅಪಾರ್ಟ್‌ಮೆಂಟ್‌ಗೆ 56 ಸಾವಿರ ರೂ. ಬಾಡಿಗೆಯನ್ನು ಕಟ್ಟುತ್ತಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಮನೆ ಬಾಡಿಗೆ ದರಗಳ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆ ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Bengaluru Rent: ಬೆಂಗಳೂರಲ್ಲಿ ಮನೆಗಳ ಬಾಡಿಗೆ ವಿಚಾರಕ್ಕೆ ಅಮೆರಿಕನ್ಸ್‌ ಶಾಕ್, ವೈರಲ್ ವಿಡಿಯೋ
Bengaluru Rent: ಬೆಂಗಳೂರಲ್ಲಿ ಮನೆಗಳ ಬಾಡಿಗೆ ವಿಚಾರಕ್ಕೆ ಅಮೆರಿಕನ್ಸ್‌ ಶಾಕ್, ವೈರಲ್ ವಿಡಿಯೋ

ದಿನನಿತ್ಯದ ವೆಚ್ಚಗಳೇ ಭಾರ

ಬಾಡಿಗೆಯ ಜೊತೆಗೆ ದಿನಸಿ, ಮನೆಯ ಸಾಮಾನುಗಳು, ಇಂಟರ್‌ನೆಟ್‌ ಬಿಲ್‌, ವಿದ್ಯುತ್‌, ಇಂಧನ, ಆನ್‌ಲೈನ್‌ ಆಹಾರ ಆರ್ಡರ್‌, ಸಬ್‌ಸ್ಕ್ರಿಪ್ಷನ್‌ ಸೇವೆಗಳು ಸೇರಿದಂತೆ ಹಲವು ಸಣ್ಣಪುಟ್ಟ ಖರ್ಚುಗಳು ತಿಂಗಳ ಕೊನೆಯಲ್ಲಿ ದೊಡ್ಡ ಮೊತ್ತವಾಗುತ್ತಿವೆ ಎಂದು ದಂಪತಿ ಹೇಳಿದ್ದಾರೆ.

ಅದರ ಜೊತೆಗೆ ಮನೆ ಕೆಲಸಕ್ಕೆ ಮತ್ತು ಅಡುಗೆ ಮಾಡುವವರನ್ನು ನೇಮಿಸಬೇಕಾಗಿರುವುದಾಗಿ ತಿಳಿಸಿದ್ದಾರೆ. ಇಬ್ಬರೂ ಪೂರ್ಣಕಾಲಿಕ ಉದ್ಯೋಗದಲ್ಲಿರುವ ಕಾರಣ ಮನೆಯ ಕೆಲಸಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ರಜೆ, ಐಷಾರಾಮಿ ಖರ್ಚು ಇಲ್ಲದಿದ್ದರೂ 1.3 ಲಕ್ಷ ರೂ. ವೆಚ್ಚ

ಅತ್ಯಂತ ಗಮನಾರ್ಹ ಸಂಗತಿ ಎಂದರೆ ಈ ವೆಚ್ಚದಲ್ಲಿ ಪ್ರವಾಸವಾಗಲಿ, ದುಬಾರಿ ಶಾಪಿಂಗ್‌ ಆಗಲಿ ಅಥವಾ ವಿಶೇಷ ಖರೀದಿಗಳು ಸೇರಿಸಿಲ್ಲ. ಇದು ಸಾಮಾನ್ಯ ಜೀವನಶೈಲಿಯ ಖರ್ಚುಗಳೇ ಸುಮಾರು 1.3 ಲಕ್ಷ ರೂ. ತಲುಪುತ್ತಿದೆ ಎಂದು ದಂಪತಿ ಹೇಳಿಕೊಂಡಿದ್ದಾರೆ.

Bengaluru Rental: ಬೆಂಗಳೂರು ಬಾಡಿಗೆದಾರರಿಗೆ ಹೊಸ ಸಂಕಷ್ಟ; ಈ ಕಾರಣಕ್ಕೆ ಪೂರ್ಣ ಅಡ್ವಾನ್ಸ್‌ ಹಣ ತೆಗೆದುಕೊಂಡ ಮನೆ ಮಾಲೀಕ
Bengaluru Rental: ಬೆಂಗಳೂರು ಬಾಡಿಗೆದಾರರಿಗೆ ಹೊಸ ಸಂಕಷ್ಟ; ಈ ಕಾರಣಕ್ಕೆ ಪೂರ್ಣ ಅಡ್ವಾನ್ಸ್‌ ಹಣ ತೆಗೆದುಕೊಂಡ ಮನೆ ಮಾಲೀಕ

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಈ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಬೆಂಗಳೂರಿನಲ್ಲಿ ಬಾಡಿಗೆ, ಸೌಲಭ್ಯ ಸೇವೆಗಳು ಮತ್ತು ಜೀವನಶೈಲಿಯ ವೆಚ್ಚಗಳು ನಿಜವಾಗಿಯೂ ಜಾಸ್ತಿಯಾಗಿವೆ ಎಂದು ದಂಪತಿಗೆ ಬೆಂಬಲ ಸೂಚಿಸಿದ್ದಾರೆ.

ಇನ್ನೂ ಕೆಲವರು ಇದು ವೈಯಕ್ತಿಕ ಆಯ್ಕೆಗಳ ಪರಿಣಾಮ ಎಂದು ಅಭಿಪ್ರಾಯಪಟ್ಟಿದ್ದಾರೆ. "ಅನೇಕರೂ ಬೆಂಗಳೂರಿನಲ್ಲಿ ಇದಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಬದುಕುತ್ತಿದ್ದಾರೆ" ನೀವು ಹಾಗೆಯೆ ಬದುಕಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಯುವ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಭಯದ ವಾತಾವರಣ

ಆದರೆ ಈ ಘಟನೆ ಒಂದು ದೊಡ್ಡ ವಾಸ್ತವವನ್ನು ಹೊರಹಾಕಿದೆ. ಮೆಟ್ರೋ ನಗರಗಳಲ್ಲಿ ಉತ್ತಮ ಸಂಬಳ ಪಡೆದರೂ ಮಾನಸಿಕ ಶಾಂತಿ ಮತ್ತು ಆರ್ಥಿಕ ಭದ್ರತೆ ಸಿಗುತ್ತಿಲ್ಲ ಎಂಬ ಭಾವನೆ ಯುವ ಉದ್ಯೋಗಿಗಳಲ್ಲಿ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜೀವನ ವೆಚ್ಚ ಹೆಚ್ಚಾಗುತ್ತಿರುವುದು ಮಧ್ಯಮ ವರ್ಗದ ಉದ್ಯೋಗಿಗಳ ಜೀವನಶೈಲಿಗೆ ಹೊಸ ಸವಾಲುಗಳನ್ನು ಎದುರಿಸುವಂತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+