ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬೆಂಗಳೂರಿನ ಮೊದಲ ನಿಯೋ ಮೆಟ್ರೋ

ಬೆಂಗಳೂರು, ಸೆಪ್ಟೆಂಬರ್ 09: ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬೆಂಗಳೂರಿನ ಮೊದಲ ನಿಯೋ ಮೆಟ್ರೋ ನಿರ್ಮಾಣವಾಗಲಿದೆ. ಮೆಟ್ರೋ ನಿಯೋ ಓವರ್‌ಹೆಡ್ ಎಲೆಕ್ಟ್ರಿಕ್ ಟ್ರ್ಯಾಕ್ ಹೊಂದಿರುವ ಟ್ರಾಲಿ ಬಸ್ ಸಿಸ್ಟಂ ಆಗಿದೆ.

ಎಲೆಕ್ಟ್ರಾನಿಕ್‌ಸಿಟಿ ಇಂಟಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ನಾಲ್ಕು ಕಿ.ಮೀ ದೂರದವರೆಗೆ ನಿಯೋ ಮೆಟ್ರೋ ಮಾರ್ಗ ನಿರ್ಮಿಸಲು ಚಿಂತನೆ ನಡೆಸಿದೆ.

ಮುಂಬರಲಿರುವ ಹಳದಿ ಮೆಟ್ರೋ ಮಾರ್ಗದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ನಿತ್ಯವೂ ಎಲೆಕ್ಟ್ರಾನಿಕ್‌ಸಿಟಿಗೆ 1.1 ಲಕ್ಷ ಮಂದಿ ಕೆಲಸಕ್ಕೆಂದು ತೆರಳುತ್ತಾರೆ.

Bengaluru Could Soon Get Its 1st Metro Neo Network At Electronics City

ಬೊಮ್ಮನಹಳ್ಳಿ ಆರ್‌ವಿರಸ್ತೆ ಮೆಟ್ರೋ 2023ಕ್ಕೆ ರೆಡಿಯಾಗಲಿದೆ. ಬೊಮ್ಮಸಂದ್ರ-ಬೊಮ್ಮನಹಳ್ಳಿ ಕಾರಿಡಾರ್‌ನ ಹೊಸೂರು ರಸ್ತೆ ಮೆಟ್ರೋ 2022ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ.

ಚಾಲಕ ರಹಿತ ಮೆಟ್ರೋ ವ್ಯವಸ್ಥೆ ಹಾಗೂ 2ನೇ ಹಂತದ ನಗರಗಳಲ್ಲಿ ಮೆಟ್ರೋ ಲೈಟ್‌, ನಿಯೊ ಸೇವೆಯನ್ನೂ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಲಾಗಿದೆ. ಜತೆಗೆ ಕೊಚ್ಚಿಯಲ್ಲಿ ವಾಟರ್‌ ಮೆಟ್ರೋ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಕೋವಿಡ್‌ ಬಿಕ್ಕಟ್ಟಿನಿಂದ ಮೆಟ್ರೋ ನಿಗಮಗಳು ಸಾಕಷ್ಟು ನಷ್ಟ ಅನುಭವಿಸಿವೆ. ಕೋವಿಡ್‌ ಪೂರ್ವಕ್ಕೆ ಹೋಲಿಸಿದರೆ, ಈಗ ಶೇ.25ರಷ್ಟು ಮಂದಿ ಮಾತ್ರ ಪ್ರಯಾಣಿಸುತ್ತಿದ್ದಾರೆ.

ನಿಯೋ ಮೆಟ್ರೋ ರೈಲು ಎಂದರೆ ರಸ್ತೆ ಹಾಗೂ ಹಳಿ ಎರಡಲ್ಲೂ ಸಂಚರಿಸಬಹುದಾದ ಮೆಟ್ರೋ ವ್ಯವಸ್ಥೆ ಇದಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಯೋಜನೆಗಳೆಲ್ಲವೂ ಸುಸೂತ್ರವಾಗಿ ನಡೆದರೆ ಒಂದೆರಡು ವರ್ಷಗಳಲ್ಲೇ ಚಾಲಕರಹಿತ ರೈಲುಗಳಲ್ಲಿ ಪಯಣಿಸುವ ಅವಕಾಶ ನಿಮ್ಮದಾಗಬಹುದು.

2022-23ರ ವೇಳೆಗೆ ಸಂಪೂರ್ಣ ಚಾಲಕರಹಿತ ಅತ್ಯಾಧುನಿಕ ರೈಲುಗಳನ್ನು ಹಳದಿ ಮಾರ್ಗದಲ್ಲಿ (ಆರ್‌ವಿ ರೋಡ್-ಬೊಮ್ಮಸಂದ್ರ) ಓಡಿಸಲು ಮೆಟ್ರೋ ರೈಲು ನಿಗಮ ಯೋಜನೆ ಹಾಕಿಕೊಂಡಿದೆ.

ನಿಗಮದ ಹಿರಿಯ ಅಧಿಕಾರಿಯೊಬ್ಬರು ಈ ವಿಷಯ ಬಹಿರಂಗಪಡಿಸಿದ್ದು, ಹಳದಿ ಮಾರ್ಗದಲ್ಲಿ ಕಮ್ಯುನಿಕೇಷನ್ ಬೇಸ್ಡ್‌ ಟ್ರೈನ್ ಕಂಟ್ರೋಲ್ (ಸಿಬಿಟಿಸಿ- ಸಂವಹನ ಆಧರಿತ ರೈಲು ನಿಯಂತ್ರಣ) ವ್ಯವಸ್ಥೆಯನ್ನು ಪರಿಚಯಿಸಲಿದೆ. 'ಸಾಮಾನ್ಯವಾಗಿ ಚಾಲಕರಹಿತ ತಂತ್ರಜ್ಞಾನ ಎಂದೇ ಕರೆಯಲ್ಪಡುವ ಸಿಬಿಟಿಸಿ ವ್ಯವಸ್ಥೆಯನ್ನು ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಅಳವಡಿಸಲಾಗುತ್ತಿದೆ. ನಿಯಂತ್ರಣ ಕೇಂದ್ರಗಳ ಮೂಲಕ ಸ್ವಯಂಚಾಲಿತ ವ್ಯವಸ್ಥೆಯಡಿ ಈ ರೈಲುಗಳು ಚಲಿಸಲಿವೆ.

ಪ್ರಸ್ತುತ ನಮ್ಮ ಮೆಟ್ರೋ ಡಿಟಿಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಚಲಿಸುತ್ತಿದೆ. ಅದರನ್ವಯ ಎರಡು ರೈಲುಗಳ ನಡುವಣ ಅಂತರ ಎರಡೂವರೆ ನಿಮಿಷಗಳಷ್ಟಿರುತ್ತವೆ. ಸಿಬಿಟಿಸಿ ಚಾಲ್ತಿಗೆ ಬಂದ ಬಳಿಕ ಎರಡು ರೈಲುಗಳ ಅಂತರವನ್ನು 90 ಸೆಕೆಂಡ್‌ಗಳಿಗೆ ತಗ್ಗಿಸಬಹುದು.

ಸಿಬಿಟಿಸಿ ವ್ಯವಸ್ಥೆ ವಿಭಿನ್ನ ಸ್ವಯಂಚಾಲಿತ ಶ್ರೇಣಿ (ಗ್ರೇಡ್)ಗಳ ಮೂಲಕ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್ ಮಾನದಂಡಗಳ ಅನುಸಾರ ಕಾರ್ಯನಿರ್ವಹಿಸುತ್ತದೆ. ಹಳದಿ ಮಾರ್ಗದಲ್ಲಿ ಜಿಓಎ4 ಮಾನದಂಡಗಳ ಅನುಸಾರ ಸಿಬಿಟಿಸಿ ಉಪಕರಣಗಳನ್ನು ಅಳವಡಿಸಲಾಗುತ್ತದೆ. ಪ್ರಸ್ತುತ ಜಿಓಎ2 ಅಡಿಯಲ್ಲಿ ಬಿಎಂಆರ್‌ಸಿಎಲ್ ಕಾರ್ಯನಿರ್ವಹಿಸುತ್ತಿದೆ.

ಅದರನ್ವಯ ರೈಲುಗಳು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸ್ವಯಂಚಾಲಿತವಾಗಿಯೇ ಚಲಿಸುತ್ತವೆ. ಆದರೆ ಬಾಗಿಲುಗಳನ್ನು ತೆರೆಯುವುದು ಮತ್ತು ಮುಚ್ಚುವ ಕಾರ್ಯವನ್ನು ಚಾಲಕರು ಮಾಡುತ್ತಾರೆ. ಜತೆಗೆ ಹಳಿಗಳಲ್ಲಿ ಏನಾದರೂ ತಡೆಯುಂಟಾಗಿದೆಯೇ ಎಂಬುದನ್ನು ಗಮನಿಸುತ್ತಿರುತ್ತಾರೆ.

40 ನಗರಗಳಲ್ಲಿ ಚಾಲ್ತಿಯಲ್ಲಿದೆ: ಜಗತ್ತಿನಾದ್ಯಂತ 40ಕ್ಕೂ ಹೆಚ್ಚು ನಗರಗಳಲ್ಲಿ ಅತ್ಯಾಧುನಿಕ ಜಿಓಎ4 ಮಾನದಂಡದ ಸ್ವಯಂಚಾಲಿತ ಮೆಟ್ರೋ ರೈಲುಗಳು ಓಡುತ್ತಿವೆ. 'ಜಿಓಎ4 ಅಡಿ ಅನ್ ಅಟೆಂಡೆಡ್ ಟ್ರೈನ್ ಆಪರೇಶನ್ (ಯುಟಿಓ) ಚಾಳನೆಗೊಳ್ಳುತ್ತಿದ್ದು, ಯಾವುದೇ ಸಿಬ್ಬಂದಿಯ ಸಹಾಯವಿಲ್ಲದೆ ರೈಲುಗಳು ಕಾರ್ಯಾಚರಿಸುತ್ತವೆ. ನಿಗದಿತ ನಿಲುಗಡೆಗಳಲ್ಲಿ ನಿಲ್ಲುವುದು, ವೇಗದ ಹೊಂದಾಣಿಕೆ, ಡಿಪೋಗಳಿಗೆ ಹೋಗುವುದು ಮತ್ತು ಹಿಮ್ಮುಖ ತಿರುಗುವುದು- ಇಂತಹ ಕಾರ್ಯಗಳನ್ನು ರೈಲುಗಳು ತಾನಾಗಿಯೇ ಮಾಡುತ್ತವೆ.

ಸಿಬಿಟಿಸಿ ವ್ಯವಸ್ಥೆಯಡಿ ಮಾನವ ಪ್ರಮಾದಗಳಿಗೆ ಅವಕಾಶವಿಲ್ಲ. ಹೆಚ್ಚಿನ ಸುರಕ್ಷತೆ, ಹೆಚ್ಚಿನ ಆವರ್ತನೆಗಳೊಂದಿಗೆ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಬಲ್ಲ ತಂತ್ರಜ್ಞಾನ ಇದಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+