Bengaluru Cost of Living: ಹಾಲು, ಮೆಟ್ರೋ, ಬಸ್, ಪೆಟ್ರೋಲ್ ದರ ಏರಿಸಿ; ಬೆಂಗಳೂರು ಬಿಟ್ಟು ಹೋಗುತ್ತೇವೆ ಎಂದ ನೆಟ್ಟಿಗರು!
ಬೆಂಗಳೂರಿನಲ್ಲಿ ಕನ್ನಡ ಬಳಕೆ ಹಾಗೂ ಕನ್ನಡಿಗರಿಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಮತ್ತೊಂದು ಮಹತ್ವದ ಟ್ವೀಟ್ ಮಾಡಿದ್ದಾರೆ. ಆದರೆ, ಇದಕ್ಕೆ ನೆಟ್ಟಿಗರು, ಕನ್ನಡಿಗರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರಿನ ಐಟಿ-ಬಿಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಮತ್ತು ಮಾತೃಭಾಷಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ನೆಲದ ಯುವಕ-ಯುವತಿಯರ ಉದ್ಯೋಗದ ಹಕ್ಕು, ಸ್ವಾಭಿಮಾನ ಹಾಗೂ ಅವಕಾಶಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಯಾವುದೇ ಖಾಸಗಿ ಸಂಸ್ಥೆಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ.

ಮುಂದುವರಿದು ಈ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾಡಿನ ಯುವಜನತೆಯ ಉದ್ಯೋಗ ಭದ್ರತೆ ಮತ್ತು ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು ?
ಜನರು ಇನ್ನು ಮೂರ್ಖರಲ್ಲ. ನೀವು ಸರಿಯಾದ ಆದ್ಯತೆಗಳನ್ನು ಹೊಂದಿಸದ ಕಾರಣ ನಾವು ಈ ಸರ್ಕಾರದಿಂದ ಯಾವುದೇ ಕ್ರಮಗಳನ್ನು ನೋಡುತ್ತಿಲ್ಲ. ಮಾತಲ್ಲಿ ಇರೋ ಗಂಭೀರತೆ ಕೆಲಸದಲ್ಲಿ ಕೂಡ ಸ್ವಲ್ಪ ತೋರ್ಸಿ ಎಂದು ಕನ್ನಡಿಗರು ಆಗ್ರಹಿಸಿದ್ದಾರೆ. ಮಾತಿನಲ್ಲಿ ಏನೂ ಸಾಧ್ಯವಾಗೋಲ್ಲ ಒಂದು ಕಾನೂನು ತನ್ನಿ. ನಿಮಗೆ ಮಾತ್ರ ಆ ಶಕ್ತಿ ಇದೆ ಎಂದು ನಂಬಿಕೆ ಇಟ್ಟು ಕೇಳುತ್ತಿದ್ದೀವಿ ಎಂದು ಕನ್ನಡಿಗರು ಹೇಳಿದ್ದಾರೆ. ಇದೇ ಧೈರ್ಯನ ಭೂಕಾಯ್ದೆ ತಿದ್ದುಪಡಿ ಮೇಲೆ ಮಾಡಿಬಿಟ್ಟರೆ (ವಾಪಸು ಪಡೆಯಿರಿ)ಸಾಷ್ಟಾಂಗ ನಮಸ್ಕಾರ ಹಾಕಿಬಿಡ್ತಿನಿ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಉತ್ತರ ಕರ್ನಾಟಕದ ಜನರಿಗೆ ನಿಮ್ಮಿಂದ ಏನಾದರೂ ಮಾಡಬೇಕೆಂದು ಸರ್ಕಾರವನ್ನು ನಾನು ವಿನಂತಿಸುತ್ತೇನೆ, ನಾವು ಹೆಚ್ಚಾಗಿ ಹೈದರಾಬಾದ್‌ಗೆ ಕೆಲಸಕ್ಕಾಗಿ ಹೋಗುತ್ತೇವೆ ಏಕೆಂದರೆ ಅದು ನಮಗೆ ಹತ್ತಿರದ ದೊಡ್ಡ ನಗರವಾಗಿದ್ದು, ಅದು ನಮ್ಮ ಮನೆಗಳಿಗೆ ಸಮೀಪ ಇರಲು ಸಹಾಯ ಮಾಡುತ್ತದೆ. ಆದರೆ, ನಮಗೆ ಕಲಬುರಗಿ, ಯಾದಗಿರಿ ಅಥವಾ ರಾಯಚೂರು ಬಳಿ ಕೆಲಸ ಬೇಕು ಎಂದೂ ಉತ್ತರ ಕರ್ನಾಟಕದ ಐಟಿ ಜನ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಿಗರ ಉದ್ಯೋಗಗಳನ್ನು ರಕ್ಷಿಸಲು ನೀವು ಕೈಗೊಳ್ಳುವ ಕ್ರಮಗಳೇನು. ಮೊದಲು ಎಲ್ಲಾ ಕಂಪನಿಗಳ ಎಂಜಿನಿಯರಿಂಗ್ ಹಾಗೂ ಮಾನವ ಸಂಪನ್ಮೂಲ ವಿಭಾಗಗಳಲ್ಲಿ ಮೀಸಲಾತಿಯನ್ನು ನವೆಂಬರ್ 1 ರಿಂದಲೇ ಜಾರಿಗೆ ತನ್ನಿ. ಪ್ರಸ್ತುತ ವರ್ಷ ಸೇರಿದಂತೆ ಹಿಂದಿನ 10 ವರ್ಷದ ಸಂಸ್ಥೆಗಳ ಎಲ್ಲಾ ನೇಮಕಾತಿ ಕಟ್ಟುನಿಟ್ಟಾಗಿ ಪರಿಶೀಲಿಸಿ ಪರವಾನಗಿ ರದ್ದುಮಾಡಿ ಎಂದೂ ಕೆಲವರು ಆಗ್ರಹಿಸಿದ್ದಾರೆ.
ಹಾಲಿನ ರೇಟ್, ಮೆಟ್ರೋ ರೇಟ್, KSRTC, BMTC ರೇಟ್, ಎಣ್ಣೆ ರೇಟ್ ಇನ್ನೊಂದೆರಡು ಸಲ ಜಾಸ್ತಿ ಮಾಡಿ, ನಾವು ಅವರು ಎಲ್ಲರೂ ಬೆಂಗಳೂರು ಬಿಟ್ಟು ಹೋಗ್ತೀವಿ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ಐಟಿ-ಬಿಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಮತ್ತು ಮಾತೃಭಾಷಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ನೆಲದ ಯುವಕ-ಯುವತಿಯರ ಉದ್ಯೋಗದ ಹಕ್ಕು, ಸ್ವಾಭಿಮಾನ ಹಾಗೂ ಅವಕಾಶಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಯಾವುದೇ ಖಾಸಗಿ ಸಂಸ್ಥೆಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.ಈ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾಡಿನ ಯುವಜನತೆಯ ಉದ್ಯೋಗ ಭದ್ರತೆ ಮತ್ತು ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.Our Government has taken serious note of complaints that Kannadigas are being denied employment opportunities and native Kannada speakers are being overlooked in Bengaluru’s IT-BT sector.The rights, dignity and employment opportunities of Kannadigas are of utmost importance to our government. We will not tolerate any deliberate discrimination against the youth of our state, and appropriate action will be taken against any private establishment found engaging in such practices.I want to assure everyone that the government will directly look into this matter and take all necessary steps to address these concerns. Therefore, I appeal to all organisations not to visit IT-BT companies directly or take matters into their own hands. Such issues must be resolved through dialogue and within the framework of the law. Our government remains firmly committed to protecting the rights and interests of Kannadigas.
— DK Shivakumar (@DKShivakumar) October 30, 2026


Click it and Unblock the Notifications
