ಕಾಫಿ ಉದ್ಯಮದ ಹಿಂದಿನ ಅಸಲಿ ಕಥೆ: 5 ವರ್ಷದ ಸ್ಟಾರ್ಟಪ್ ಜರ್ನಿ ಬಿಚ್ಚಿಟ್ಟ 'ಡ್ರಿಕಲ್' ಸಂಸ್ಥಾಪಕ ವರ್ಧಮಾನ್ ಜೈನ್
ಭಾರತದಲ್ಲಿ ಸ್ಟಾರ್ಟಪ್ (ನವೋದ್ಯಮ) ಕಟ್ಟುವುದು ಹಾಗೂ ಅದನ್ನು ಉಳಿಸಿ ಬೆಳೆಸುವುದು ಎಂದಿಗೂ ಸುಲಭದ ಮಾತಲ್ಲ. ಇದು ಅಂದುಕೊಂಡಷ್ಟು ಸರಳವಲ್ಲ ಎಂಬುದನ್ನು ಬೆಂಗಳೂರು ಮೂಲದ ಕಾಫಿ ಬ್ರ್ಯಾಂಡ್ 'ಡ್ರಿಕಲ್' (Drickle - ಈ ಹಿಂದೆ ಬೊನೊಮಿ - BONOMI ಎಂದು ಕರೆಯಲಾಗುತ್ತಿತ್ತು) ಸಹ-ಸಂಸ್ಥಾಪಕ ವರ್ಧಮಾನ್ ಜೈನ್ ತಮ್ಮ ಅನುಭವದ ಮೂಲಕ ಬಿಚ್ಚಿಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಉದ್ಯಮಶೀಲತೆಯ ಹಾದಿಯಲ್ಲಿ ಸಾಗುತ್ತಿರುವ ಅವರು, ತಮ್ಮ ಯಶಸ್ಸು ಮತ್ತು ಸಂಘರ್ಷದ ಕಠಿಣ ವಾಸ್ತವಗಳನ್ನು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ವರ್ಧಮಾನ್ ಜೈನ್ ಅವರ ಪ್ರಕಾರ, ಭಾರತದಲ್ಲಿ ಕಾಫಿ ಬ್ಯುಸಿನೆಸ್ ಕಟ್ಟುವುದು ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಅವರು ಮಾಡಿರುವ ಅತ್ಯಂತ ಕಠಿಣ ಕೆಲಸವಾಗಿದೆ. ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, "ನಾನು ಭಾರತದಲ್ಲಿ ನನ್ನ ಕಾಫಿ ಬ್ರ್ಯಾಂಡ್ ಕಟ್ಟಲು ಪ್ರಾರಂಭಿಸಿ ಸರಿಸುಮಾರು ಐದು ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಉದ್ಯಮಶೀಲತೆಯು ವರ್ಷದಿಂದ ವರ್ಷಕ್ಕೆ ಒಬ್ಬ ವ್ಯಕ್ತಿಯನ್ನು ನಿಧಾನವಾಗಿ ಬದಲಾಯಿಸುತ್ತದೆ. ಸ್ಥಾಪಕರು ಎದುರಾಗುವ ನಿರಂತರ ಟೀಕೆಗಳನ್ನು ಎದುರಿಸಲು ಮಾನಸಿಕವಾಗಿ ಕಠಿಣವಾಗಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಬ್ಯುಸಿನೆಸ್ ಕಟ್ಟುವ ಹಿಂದಿನ ವಾಸ್ತವ
ಉದ್ಯಮವನ್ನು ಕಟ್ಟುವಾಗ ಎದುರಾಗುವ ಕಹಿಸತ್ಯಗಳ ಬಗ್ಗೆ ವಿವರಿಸಿದ ಜೈನ್, "ವ್ಯಾಪಾರಸ್ಥರು ತಿರಸ್ಕಾರವನ್ನು (Rejection) ನಿಭಾಯಿಸಲು ಕಲಿಯಲೇಬೇಕು. ಜನರು ನಿಮ್ಮ ಉತ್ಪನ್ನವನ್ನು ಕಟುವಾಗಿ ಟೀಕಿಸಬಹುದು, ಅದನ್ನು ಕಡೆಗಣಿಸಬಹುದು ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು. ಸಮಯ ಕಳೆದಂತೆ ನಮ್ಮೊಳಗಿನ ಅಹಂಕಾರ (Ego) ಬದಿಗೆ ಸರಿಯಬೇಕು. ನಿಮ್ಮ ಪ್ರಾಡಕ್ಟ್ ಮೇಲಿನ ಭಾವನಾತ್ಮಕತೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಆಗ ಮಾತ್ರ ಸ್ಥಾಪಕರು ತಮ್ಮ ಉದ್ಯಮವನ್ನು ಅದರ ನೈಜ ರೂಪದಲ್ಲಿ ಅಂದರೆ, ಕೇವಲ ಒಂದು 'ಬ್ಯುಸಿನೆಸ್' ಆಗಿ ನೋಡಲು ಪ್ರಾರಂಭಿಸುತ್ತಾರೆ" ಎಂದಿದ್ದಾರೆ.
"ನೀವು ಟೀಕೆಗಳನ್ನು ಎದುರಿಸುವ ಕಲೆ ಕರಗತ ಮಾಡಿಕೊಳ್ಳುತ್ತೀರಿ, ಅಹಂ ಬಿಡುತ್ತೀರಿ, ಜನ ನಿಮ್ಮ ಉತ್ಪನ್ನವನ್ನು ತೆಗೆದು ಹಾಕಿದರೂ ಅದನ್ನು ಸ್ವೀಕರಿಸುತ್ತೀರಿ. ಅಂತಿಮವಾಗಿ ಭಾವನಾತ್ಮಕವಾಗಿ ನಿರ್ಲಿಪ್ತರಾಗಿ, ಇದೊಂದು ಕೇವಲ ವ್ಯಾಪಾರ ಎಂಬುದನ್ನು ಅರಿತುಕೊಳ್ಳುತ್ತೀರಿ," ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.
ಹೊಸ ಉದ್ಯಮಿಗಳಿಗೆ ಜೈನ್ ಕಿವಿಮಾತು
ತಮ್ಮ ಐದು ವರ್ಷಗಳ ಅನುಭವದ ಪಾಠಗಳನ್ನು ಮೆಲುಕು ಹಾಕಿರುವ ವರ್ಧಮಾನ್ ಜೈನ್, ಬಲವಾದ ಆರ್ಥಿಕ ಹಿನ್ನೆಲೆ ಅಥವಾ ಬೆಂಬಲವಿಲ್ಲದೆ ಯಾರಿಗೂ ಹೊಸ ಬ್ಯುಸಿನೆಸ್ ಪ್ರಾರಂಭಿಸಲು ಸಲಹೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮದೇ ಉತ್ಪನ್ನದ ಮೇಲೆ ಅತಿಯಾದ ವ್ಯಾಮೋಹ ಹೊಂದಿರಬಾರದು, ಏಕೆಂದರೆ ಇದು ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಮರೆಮಾಚುತ್ತದೆ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
"ಸ್ಟಾರ್ಟಪ್ ಜರ್ನಿ ಎನ್ನುವುದು ಬಹಳ ದೀರ್ಘ ಹಾಗೂ ಒಂಟಿತನದ ಪ್ರಯಾಣ. ಹೊರಗಿನಿಂದ ನೋಡಲು ಬ್ರ್ಯಾಂಡ್ ಕಟ್ಟುವುದು ರೋಮಾಂಚಕಾರಿಯಾಗಿ ಕಾಣಿಸಬಹುದು, ಆದರೆ ಒಳಗಿನ ವಾಸ್ತವವು ಹೆಚ್ಚು ಪರೀಕ್ಷೆಗಳಿಂದ ಕೂಡಿರುತ್ತದೆ. ಹಾಗಾಗಿ, ಈ ಜರ್ನಿಗೆ ಕಾಲಿಡುವ ಮುನ್ನ ತುಂಬ ಯೋಚಿಸಿ" ಎಂದು ಅವರು ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.
I’m about to complete 5 years of building or trying to build a coffee business in India.
— Vardhman Jain (@lightroastguy) March 3, 2026
This has been the most gruelling thing I’ve done, both mentally and financially. Building a business changes you year after year. You develop a thick skin for bullshit, let go of your ego,…
ಎಕ್ಸ್ ಬಳಕೆದಾರರ ಪ್ರತಿಕ್ರಿಯೆ ಹೇಗಿತ್ತು?
ವರ್ಧಮಾನ್ ಜೈನ್ ಅವರ ಈ ಪ್ರಾಮಾಣಿಕ ಪೋಸ್ಟ್‌ಗೆ ಎಕ್ಸ್ ಬಳಕೆದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕರು ಅವರ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, "ಈ ಪ್ರಾಮಾಣಿಕತೆಗೆ ನನ್ನ ಗೌರವವಿದೆ. ಹೆಚ್ಚಿನ ಜನರು ಕೇವಲ ಸುಂದರವಾದ ಕೆಫೆಯನ್ನು ನೋಡುತ್ತಾರೆ, ಆದರೆ ಅದರ ಹಿಂದಿನ ಕ್ಯಾಶ್-ಫ್ಲೋ (ಹಣದ ಹರಿವು) ಶೀಟ್ ನೋಡುವುದಿಲ್ಲ. ಅವರು ಬ್ರ್ಯಾಂಡ್ ನೋಡುತ್ತಾರೆ, ಆದರೆ ಆ ಬ್ರ್ಯಾಂಡ್ ಕಟ್ಟಲು ಕಳೆದ ಹಣ ಹಾಗೂ ಶ್ರಮವನ್ನು ನೋಡುವುದಿಲ್ಲ" ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಬ್ಯುಸಿನೆಸ್ ಕಟ್ಟುವುದು ಕೇವಲ ಕೆಲಸ ಮಾಡುವುದಲ್ಲ, ಅದು ಗುರುತಿನ ಕೆಲಸ. ಉತ್ಪನ್ನವು ವಿಕಸನಗೊಳ್ಳುತ್ತದೆ, ಆದರೆ ಅದಕ್ಕೂ ಮೊದಲು ಸ್ಥಾಪಕರು ಒಬ್ಬ ಹೊಸ ಮನುಷ್ಯನಾಗಿ ಬದಲಾಗಿರುತ್ತಾನೆ." ಎಂದು ಅರ್ಥಪೂರ್ಣವಾಗಿ ಬರೆದಿದ್ದಾರೆ.
"ಏನೇ ಆದರೂ, ಉದ್ಯೋಗ ಹುಡುಕುವ ಅವಮಾನಕರ ಆಚರಣೆಗಳಿಗಿಂತ, ಗ್ರಾಹಕರನ್ನು ಬೆನ್ನಟ್ಟುವುದು ಹಾಗೂ ಬ್ಯುಸಿನೆಸ್‌ನ ಕಷ್ಟಗಳು ಉತ್ತಮ. ಏಕೆಂದರೆ ಇದು ಘನತೆಯನ್ನು ನೀಡುತ್ತದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications