ಬೆಂಗಳೂರಿನಲ್ಲಿ ವಸತಿ ಬೆಲೆಯಲ್ಲಿ ಭಾರೀ ಏರಿಕೆ: ವರದಿ

ಬೆಂಗಳೂರು, ಅಕ್ಟೋಬರ್‌ 14: ಬೆಂಗಳೂರು ಜಾಗತಿಕ ವಸತಿ ಬೆಲೆಗಳ ಮೌಲ್ಯವರ್ಧನೆಯ ಸೂಚ್ಯಂಕದಲ್ಲಿ ಭಾರೀ ಏರಿಕೆಯಾಗಿದ್ದು, 55 ಸ್ಥಾನದಿಂದ ಜಿಗಿದು 22ನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್‌ನಿಂದ ಜೂನ್‌ವರೆಗಿನ ಜಾಗತಿಕ ಸೂಚ್ಯಂಕದಲ್ಲಿ ಭಾರತೀಯ ನಗರಗಳಾದ ಮುಂಬೈ ಮತ್ತು ಬೆಂಗಳೂರು 95ನೇ ಮತ್ತು 77ನೇ ಸ್ಥಾನದಿಂದ 19ನೇ ಮತ್ತು 22ನೇ ಸ್ಥಾನಕ್ಕೆ ಜಿಗಿದಿವೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯ ಸಂಸ್ಥೆ ನೈಟ್ ಫ್ರಾಂಕ್ ವರದಿ ತಿಳಿಸಿದೆ.

bengaluru-climbs-to-22nd-rank-in-global

ನೈಟ್ ಫ್ರಾಂಕ್ ಸಂಸ್ಥೆಯು ಗ್ಲೋಬಲ್ ರೆಸಿಡೆನ್ಶಿಯಲ್ ಸಿಟೀಸ್ ಇಂಡೆಕ್ಸ್ ಕ್ಯೂ 3 2023 ಎಂಬ ವರದಿಯಲ್ಲಿ ವಿಶ್ವದ ಹಲವಾರು ನಗರಗಳಲ್ಲಿ ವಸತಿ ಬೆಲೆಗಳಲ್ಲಿನ ಏರಿಕೆಯನ್ನು ವಿಶ್ಲೇಷಿಸಿದೆ. ಇದು ಎರಡನೇ ತ್ರೈಮಾಸಿಕ ಸೂಚ್ಯಂಕದಲ್ಲಿ ಮುಂಬೈ ನಂತರ ಕರ್ನಾಟಕದ ರಾಜಧಾನಿ ಬೆಂಗಳೂರು ಎರಡನೇ ಅತಿ ಹೆಚ್ಚು ಶ್ರೇಯಾಂಕದ ಭಾರತೀಯ ನಗರವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ವಸತಿ ಬೆಲೆಗಳಲ್ಲಿ ಶೇಕಡಾ 5.3 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

2023ರ ಎರಡನೇ ತ್ರೈಮಾಸಿಕದಲ್ಲಿ ಪ್ರಪಂಚದಾದ್ಯಂತದ 107 ನಗರಗಳಲ್ಲಿನ ವಸತಿ ಬೆಲೆಗಳ ಬೆಳವಣಿಗೆಯು 2022 ರಲ್ಲಿ 11.7 ರಷ್ಟು ವರ್ಷದಿಂದ ವರ್ಷಕ್ಕೆ 1.7 ಶೇಕಡಾಕ್ಕೆ ಕುಸಿದಿದೆ ಎಂದು ತಿಳಿಸಿದೆ. ಮುಂಬೈಯು ವರ್ಷದಿಂದ ವರ್ಷಕ್ಕೆ 6 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ. ಇದು 76ನೇ ಸ್ಥಾನದಿಂದ 19ಕ್ಕೆ ಸ್ಥಾನಕ್ಕೆ ಜಿಗಿದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯು ಸೂಚ್ಯಂಕದಲ್ಲಿ 25ನೇ ಸ್ಥಾನದಲ್ಲಿ ಮೂರನೇ ಅತಿ ಹೆಚ್ಚು ಶ್ರೇಯಾಂಕದ ಭಾರತೀಯ ನಗರವಾಗಿದೆ. ಇಲ್ಲಿ ವಸತಿ ಬೆಲೆ 4.5% ರಷ್ಟು ಏರಿಕೆಯಾಗಿದೆ.

ಇದರೊಂದಿಗೆ ಚೆನ್ನೈ ಮತ್ತು ಕೋಲ್ಕತ್ತಾ ಕ್ರಮವಾಗಿ 39 ಮತ್ತು 40ನೇ ಸ್ಥಾನದಲ್ಲಿವೆ. ಇಲ್ಲಿ ವಸತಿ ಬೆಲೆಗಳು ತಲಾ 2.5 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿವೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ವಸತಿ ಬೆಲೆ ಬರೋಬ್ಬರಿ ಶೇಕಡಾ 105.9 ರಷ್ಟು ಬೆರಗುಗೊಳಿಸುವ ಬೆಳವಣಿಗೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರ ಇಸ್ತಾನ್‌ಬುಲ್ 85.1 ಶೇಕಡಾ ಬೆಳವಣಿಗೆ, ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್ ನಲ್ಲಿ ಬೆಲೆ ಏರಿಕೆಯು ಶೇಕಡಾ 14.3ರಷ್ಟಿದ್ದು, ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ನೈಟ್ ಫ್ರಾಂಕ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಮಾತನಾಡಿ, "2022 ರ ಆರಂಭದಿಂದಲೂ ಬಲವಾದ ಬೇಡಿಕೆಯೊಂದಿಗೆ ವಸತಿ ಬೆಲೆಗಳು ನಿರಂತರವಾಗಿ ಬೆಳೆದಿವೆ. ದರಗಳು ಏರಿಕೆಯಾಗಿದ್ದರೂ ಸಹ ಗ್ರಾಹಕರ ವಿಶ್ವಾಸವು ಹೆಚ್ಚಾಗುತ್ತಲೇ ಇದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+