ಬೆಂಗಳೂರು: ನಕಲಿ ಬ್ರ್ಯಾಂಡೆಡ್ ಬಟ್ಟೆ ಅಂಗಡಿ ಮೇಲೆ ದಾಳಿ
ಬೆಂಗಳೂರು, ಮೇ 30 : ನಕಲಿ ಬ್ರಾಂಡ್ ಗಳನ್ನು ಬಳಸಿ ಶರ್ಟ್, ಟಿ-ಶರ್ಟ್ ಗಳನ್ನು ಮಾರಾಟ ಮಾಡುತ್ತಿದ್ದ ಬಟ್ಟೆ ಅಂಗಡಿ ಮೇಲೆ ಮಂಗಳವಾರ ಬೆಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದಾರೆ.
ಮೂಡಲಪಾಳ್ಯದಲ್ಲಿನ ಬಟ್ಟೆ ಅಂಗಡಿ ಮೇಲೆ ದಾಳಿ ಮಾಡಿರುವ ಪೊಲೀಸರು, ಸುಮಾರು 3,42,000 ರು. ಮೌಲ್ಯದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರಾಂಡ್‌ಗಳಾದ ಪೂಮಾ, ಅಲೈನ್ ಸೋಲಿ, ಯುಎಸ್ ಪೊಲೊ ಸೇರಿದಂತೆ ಇತರೆ ಕಂಪೆನಿಗಳ ನಕಲಿ ಬ್ರಾಂಡ್‌ಗನ್ನು ಒಳಗೊಂಡ ಶರ್ಟ್ ಮತ್ತು ಟಿ-ಶರ್ಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
Duplicate branded clothes shop raided in Mudalapalya, seized Puma, Allensolly, US Polo, etc shirts & T-shirts worth ₹ 3,42,000/- pic.twitter.com/CPtmZP8oMz
— S Ravi, IPS (@AddlCPCrime) May 30, 2017












Click it and Unblock the Notifications