ಕರ್ತವ್ಯ ನಿರತ ಅಂಗವೈಕಲ್ಯ ಸೈನಿಕರ ಕ್ರೀಡಾಕೂಟಕ್ಕೆ ಚಾಲನೆ
Recommended Video

ಯಲಹಂಕ, ಜುಲೈ.09: ಕರ್ತವ್ಯ ನಿರತ ಅಂಗವೈಕಲ್ಯ ಸೈನಿಕರ ಕ್ರೀಡಾಕೂಟವನ್ನು ಯಲಹಂಕದ ಬಿಎಸ್ ಎಫ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ನಗರದ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಚಾಲನೆ ನೀಡಿ ಎಲ್ಲರಿಗೂ ಶುಭ ಕೋರಿದರು.
ಇನ್ನು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದವರೆಲ್ಲ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಅಂಗಾಂಗಳನ್ನು ಕಳೆದುಕೊಂಡು ಸೈನಿಕರಾಗಿದ್ದವರು. ಇಂತಹ ಸೈನಿಕರ ಆತ್ಮಬಲ ಮತ್ತು ಮನೋ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿ.ಎಸ್.ಎಫ್, ಸಿ.ಎಸ್.ಎಫ್ ಮತ್ತು ಸಿವಿಲ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ಯೋಧರಿಗೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳಿಂದ ತರಬೇತಿ ನೀಡಲಾಯಿತು.

ಜಗತ್ತಿನ ಎಲ್ಲಾ ಸೇನೆಗಳು ಒಂದೊಂದು ವಿಶೇಷತೆಯನ್ನು ಹೊಂದಿದೆ. ಆದರೆ ಭಾರತೀಯ ಸೇನೆ ಎಲ್ಲದರಲ್ಲೂ ವಿಶೇಷತೆಯನ್ನು ಹೊಂದಿರುವುದರಿಂದಲೇ ಭಾರತೀಯ ಸೈನಿಕರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಯಾಕೆಂದರೆ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತಲೂ ಕಠಿಣವಾದ ಪ್ರದೇಶಗಳಲ್ಲಿ ಭಾರತೀಯ ಸೈನಿಕರು ಕಾರ್ಯನಿರ್ವಹಿಸುತ್ತಾರೆ.
ಭಾರತದ ಗಡಿ ಭಾಗವಾದ ಹಿಮಾಲಯದ 18000 ಅಡಿಗಳ ಮೇಲೆ ಭಾರತೀಯ ಸೈನಿಕರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ...!ಕೊರೆಯುವ ಚಳಿಯಿದ್ದರೂ ಸೈನಿಕರು ತಮ್ಮ ದೇಶಸೇವೆಯನ್ನು ಮಾಡುತ್ತಲೇ ಇರುತ್ತಾರೆ ಎನ್ನುವುದು ಹೆಮ್ಮೆಯ ವಿಷಯ.












Click it and Unblock the Notifications