Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಜೂನ್‌ ವೇಳೆಗೆ ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್: ವಿಶೇಷತೆ, ಮಾರ್ಗ, ಮಾಹಿತಿ

ಬೆಂಗಳೂರು, ಜನೆವರಿ 10: ಇದೇ ವರ್ಷದ ಜೂನ್ ವೇಳೆಗೆ ಬೆಂಗಳೂರು ನಗರದಲ್ಲಿ ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ಸಂಚರಿಸಲಿದೆ.

BMTC ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ಸೂರ್ಯಸೇನ್‌ ಈ ವಿಚಾರವಾಗಿ ಮಾಹಿತಿ ನೀಡಿದರು.

'ನಗರ ಭೂ ಸಾರಿಗೆ ಇಲಾಖೆ (DULT) ನಿಧಿಯ ಅಡಿಯಲ್ಲಿ ಐದು ಡಬಲ್ ಡೆಕ್ಕರ್ AC ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಅನ್ನು ಆಹ್ವಾನಿಸಿದ್ದೇವೆ. ನಾವು ರಾಷ್ಟ್ರೀಯ ಕ್ಲೀನ್ ಏರ್ ಪ್ರೋಗ್ರಾಂ (NCAP) ಅಡಿಯಲ್ಲಿ ಅಂತಹ ಇನ್ನೊಂದು ಐದು ಬಸ್‌ಗಳನ್ನು ಖರೀದಿಸುತ್ತಿದ್ದೇವೆ' ಎಂದು ಸೂರ್ಯಸೇನ್‌ ತಿಳಿಸಿದ್ದಾರೆ. ಈ ಕುರಿತು 'ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ.

ಈ ವಿಚಾರವಾಗಿ ಜನವರಿ 17 ರಂದು ಪೂರ್ವಭಾವಿ ಸಭೆ ನಡೆಯಲಿದೆ ಎಂದು ಸೂರ್ಯಸೇನ್‌ ಹೇಳಿದರು.

Bengaluru city likely to get its first double-decker AC electric bus by June 2023

'ಈ ಪೂರ್ವಭಾವಿ ಸಭೆಯ ನಂತರ ಸ್ಪಷ್ಟ ಚಿತ್ರಣ ಹೊರಬರಲಿದೆ. ನಾವು ಫೆಬ್ರವರಿ 15 ರೊಳಗೆ ಟೆಂಡರ್ ಅನ್ನು ಅಂತಿಮಗೊಳಿಸಲು ಯೋಜಿಸುತ್ತಿದ್ದೇವೆ. ಮೊದಲ ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ ಅನ್ನು ಏಪ್ರಿಲ್ ಮತ್ತು ಜೂನ್ ನಡುವೆ ಪರಿಚಯಿಸಲಾಗುವುದು' ಎಂದು ಅಧಿಕಾರಿ ತಿಳಿಸಿದರು.

ಬಸ್‌ಗಳ ಉದ್ದವು 9,500 ಎಂಎಂ ಮತ್ತು 11,000 ಎಂಎಂ ನಡುವೆ ಇರುತ್ತದೆ.

ಡಬ್ಬಲ್ ಡೆಕ್ಕರ್ ಡೀಸೆಲ್ ಬಸ್‌ಗಳು 1970-80ರ ದಶಕದಲ್ಲಿ ನಗರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದವು. 1997ರ ವೇಳೆಗೆ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಯಿತು.

ಮೊದಲ ಡಬಲ್ ಡೆಕ್ಕರ್ ಇ-ಬಸ್ ಹೊರ ವರ್ತುಲ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಈ ಬಸ್‌ಗಳು ಸುಮಾರು 70 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru city likely to get its first double-decker AC electric bus by June 2023

ಅಶೋಕ್ ಲೇಲ್ಯಾಂಡ್-ಬೆಂಬಲಿತ ಸ್ವಿಚ್ ಮೊಬಿಲಿಟಿ, ಕಾಸಿಸ್ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ - ಈ ಮೂರು ಸಂಸ್ಥೆಗಳು ಯೋಜನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ.

ಚಾರ್ಜಿಂಗ್ ಸ್ಟೇಷನ್

BMTC ಹೊಸಕೋಟೆಯ ತನ್ನ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಟೆಂಡರ್ ಅನ್ನು ಕರೆದಿದೆ. ಅಲ್ಲಿಂದ ದೂರದ ಮಾರ್ಗಗಳಲ್ಲಿ ಇ-ಬಸ್‌ಗಳನ್ನು ಓಡಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru city likely to get its first double-decker AC electric bus by June 2023

ಮುಂಬೈನಲ್ಲಿ ಮೊದಲ ಎಲೆಕ್ಟ್ರಿಕ್‌ ಡಬಲ್‌ ಡೆಕ್ಕರ್‌

ಭಾರತದ ಮೊದಲ ಎಲೆಕ್ಟ್ರಿಕ್‌ ಡಬಲ್‌ ಡೆಕ್ಕರ್ ಬಸ್‌ ಅನ್ನು ಮುಂಬೈನಲ್ಲಿ ಆರಂಭಿಸಲಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದಕ್ಷಿಣ ಮುಂಬೈನ YB ಸೆಂಟರ್‌ನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನ್ನು ಪ್ರಾರಂಭಿಸಿದರು. ಬಸ್‌ನ ಹೆಸರು 'ಸ್ವಿಚ್ ಇಐವಿ 22', ಡಬಲ್ ಡೆಕ್ಕರ್ ಬಸ್ ಅನ್ನು ಮುಂಬೈ ನಾಗರಿಕ ಸಾರಿಗೆ ಸಂಸ್ಥೆ ಸೆಪ್ಟೆಂಬರ್‌ನಿಂದ ಓಡಿಸಲು ಆರಂಭಿಸಿದೆ. 35 ರಷ್ಟು ಮಾಲಿನ್ಯವು ಡೀಸೆಲ್ ಮತ್ತು ಪೆಟ್ರೋಲ್‌ನಿಂದ ಆಗಿದ್ದು, ಈ ಬಸ್‌ಗಳ ಅಳವಡಿಕೆಯಿಂದ ಮಾಲಿನ್ಯ ಕಡಿಮೆಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದ ಮೊದಲ ಹವಾನಿಯಂತ್ರಿತ ಡಬಲ್ ಡೆಕ್ಕರ್ ಬಸ್ ಸೇರಿದಂತೆ ಎರಡು ಹೊಸ ಎಲೆಕ್ಟ್ರಿಕ್ ಬಸ್‌ಗಳು ಬೃಹನ್‌ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ (ಬೆಸ್ಟ್) ಇಲಾಖೆ ಅಡಿ ಬರಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+