Expressways: ರಾಜ್ಯದಲ್ಲಿ ಉದ್ಘಾಟನೆ ಹಂತದಲ್ಲಿರುವ ಎರಡು ಪ್ರಮುಖ ಎಕ್ಸ್‌ಪ್ರೆಸ್‌ವೇಗಳು
Expressways: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಅಭಿವೃದ್ಧಿ ಕ್ರಾಂತಿ ಆಗುತ್ತಿದೆ. ಈಗಾಗಲೇ ಮೈಸೂರು-ಬೆಂಗಳೂರು-ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾಗಿ ವಾಹನಗಳು ಸಹ ಸಂಚಾರ ಮಾಡುತ್ತಿವೆ. ಮತ್ತೊಂದೆಡೆ, ಒಂದು ಉದ್ಘಾಟನೆ ಹಂತದಲ್ಲಿದ್ದರೆ, ಇನ್ನೊಂದರ ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾದ್ರೆ, ಅವುಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಆಗಿದ್ದು, ವಾಹನ ಸಂಚಾರ ಕೂಡ ಮಾಡುತ್ತಿವೆ. ಇನ್ನೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ 71 ಕಿಲೋ ಮೀಟರ್ ಪೂರ್ಣಗೊಂಡಿದ್ದು, ವಾಹನಗಳು ಸಂಚಾರ ಮಾಡುತ್ತಿದೆ. ಆದರೆ, ಇನ್ನೂ ಉದ್ಘಾಟನೆ ಆಗಿಲ್ಲ. ಇದಕ್ಕೆ ಕಾರಣವೂ ಇದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೂ ಮುನ್ನವೇ ಈಗಾಗಲೇ ಟೋಲ್ ಶುಲ್ಕಗಳನ್ನು ರಿವೀಲ್ ಮಾಡಲಾಗಿದ್ದು, ಪ್ರಾಧಿಕಾರದಿಂದ ಅನುಮತಿ ಸಿಕ್ಕ ಬಳಿಕ ಇದು ಜಾರಿ ಆಗಲಿದೆ ಎಂದು ತಿಳಿದುಬಂದಿದೆ. ಈ ಹೆದ್ದಾರಿ ಉದ್ಘಾಟನೆ ವಿಳಂಬಕ್ಕೆ ಪ್ರಮುಖ ಕಾರಣ ಅಂದ್ರೆ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದು ಈ ವರ್ಷ ಅಥವಾ 2026ರ ಜೂನ್ ಒಳಗಡೆ ನೆರವೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
260 ಕಿಲೋ ಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇ ಅನ್ನು ಗ್ರೀನ್‌ಫೀಲ್ಡ್ ಯೋಜನೆಯಡಿ ₹17,900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ 6 ಗಂಟೆಗಳಿಂದ ಕೇವಲ 3 ಗಂಟೆಗೆ ಇಳಿಕೆ ಆಗಲಿದೆ.
ಕರ್ನಾಟಕದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಎಕ್ಸ್‌ಪ್ರೆಸ್ ವೇ ನಿರ್ಮಾಭ ಮಾಡಲಾಗಿದೆ. ಹೊಸಕೋಟೆಯಿಂದ ಮಾಲೂರು (27.1 ಕಿಮೀ), ಮಾಲೂರಿನಿಂದ ಬಂಗಾರಪೇಟೆ (27.1 ಕಿಮೀ) ಮತ್ತು ಬಂಗಾರಪೇಟೆಯಿಂದ ಬೇತಮಂಗಲ (17.5 ಕಿಮೀ). ಈ ಮಾರ್ಗವು ದಾಬಾಸ್‌ಪೇಟೆಯಲ್ಲಿರುವ ಮಲ್ಟಿ ಮಾಡೆಲ್ ಲಾಜಿಸ್ಟಿಕ್ಸ್ ಪಾರ್ಕ್‌ಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದ್ದು, ವ್ಯಾಪಾರ ಮತ್ತು ಮೂಲಸೌಕರ್ಯವನ್ನು ಹೆಚ್ಚಳ ಮಾಡಲು ಸಹಾಯ ಆದಂತಾಗಲಿದೆ.
ಎಲ್ಲೆಲ್ಲಿ ಹಾದುಹೋಗಲಿದೆ?: ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ. ಈ ಹೆದ್ದಾರಿ ಬೆಂಗಳೂರಿನ ಹೊರವಲಯದಲ್ಲಿ ಇರುವ ಹೊಸಕೋಟೆಯಿಂದ ಆರಂಭ ಆಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನವರೆಗೂ ಸಂಪರ್ಕ ಕಲ್ಪಿಸಲಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ: ಇದು ಕೂಡ ಕರ್ನಾಟಕದ ಹಲವು ಜಿಲ್ಲೆಗಳ ಮೇಲೆ ಹಾದುಹೋಗಲಿದ್ದು, ಪೂರ್ಣಗೊಂಡರೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುದರಲ್ಲಿ ಎರಡು ಮಾತಿಲ್ಲ. ಮೊದಲಿಗೆ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಬೆಂಗಳೂರು-ಪುಣೆ ನಗರಗಳ ನಡುವಿನ ಪ್ರಮಾಣ ಸಮಯ 15 ರಿಂದ 7 ಗಂಟೆಗಳಿಗೆ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು ಕೇವಲ 5 ಗಂಟೆಗಳಿಗೆ ಇಳಿಕೆಯಾಗಲಿದ ಎಂದು ತಿಳಿಸಿದ್ದರು. ಇನ್ನು ಇದು 2028ರ ವೇಳೆಗೆ ಸಂಚಾರ ಮುಕ್ತ ಆಗಲಿದೆ ಎನ್ನುವ ಮಾಹಿತಿ ಇದೆ.
ಎಲ್ಲೆಲ್ಲಿ ಹಾದುಹೋಗಲಿದೆ?: ಈ ಎಕ್ಸ್‌ಪ್ರೆಸ್‌ವೇ ಪುಣೆಯಲ್ಲಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕ ಸಾಧಿಸಲಿದ್ದು, ಎರಡು ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಇದು ಮಹಾರಾಷ್ಟ್ರದ ಸಾಂಗ್ಲಿ, ಸತಾರ ಮತ್ತು ಪುಣೆ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಸೇರಿ ಒಟ್ಟು 12 ಜಿಲ್ಲೆಗಳ ಮೂಲಕ ಹಾದುಹೋಗಲಿದೆ.












Click it and Unblock the Notifications