Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ವಿಸ್ತರಣೆ ಯೋಜನಾ ಕಾಮಗಾರಿ ಬಿಗ್‌ ಅಪ್ಡೇಟ್‌

Bengaluru-Chennai Expressway: ಭಾರತದಲ್ಲಿ ಇದೇ ವರ್ಷ ಉದ್ಘಾಟನೆ ಆಗಲಿರುವ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಯವಾಗಿದೆ. ಇನ್ನು ಇದೀಗ ಈ ಹೆದ್ದಾರಿ ವಿಸ್ತರಣೆ ಯೋಜನೆ ಕುರಿತು ಬಿಗ್‌ ಅಪ್ಡೇಟ್‌ವೊಂದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊರಹಾಕಿದೆ.

ರಾಷ್ಟ್ರೀಯ ಹೆದ್ದಾರಿಯನ್ನು 4ರಿಂದ ಆರು ಪಥಗಳಿಗೆ ವಿಸ್ತರಣೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಈ ಕಾಮಗಾರಿಯನ್ನು 2021ರಲ್ಲಿ ಆರಂಭಿಸಲಾಗಿದ್ದು, ಕಾರಣಂತರಗಳಿಂದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದೆ. ಇಲ್ಲಿಯವರೆಗೂ ಬರೀ ಶೇಕಡ 57ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆ ಇದರ ಜವಾಬ್ದಾರಿ ಹೊತ್ತ ಕಂಪನಿಯ ಒಪ್ಪಂದವನ್ನು ಪ್ರಾಧಿಕಾರ ರದ್ದುಗೊಳಿಸಿದೆ.

Bengaluru-Chennai Expressway Extension Project Big Update

ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಯೋಜನೆಗೆ ಅಂದಾಜು 654 ಕೋಟಿ ರೂಪಾಯಿ ವೆಚ್ಚ. ಎರಡು ಪ್ರಮುಖ ಮೆಟ್ರೋಪಾಲಿಟನ್ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸಲಿವೆ. ಆದ್ದರಿಂದ ಈ ಹೆದ್ದಾರಿಯಲ್ಲಿ ಅಪಘಾತಗಳು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದುವರೆಗೂ ಗುತ್ತಿಗೆದಾರರಿಗೆ ನೀಡಿದ ಕಾಮಗಾರಿಯನ್ನು ಪೂರ್ಣಗೊಳಿಸದ ಪರಿಣಾಮ ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ. ಇನ್ನು ವಿಳಂಬ ಮತ್ತು ಟ್ರಾಫಿಕ್ ಜಾಮ್ ಬಗ್ಗೆ ಹಲವರು ಈಗಾಗಲೇ ದೂರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಪ್ರಕಾರ, ಮರು ಟೆಂಡರ್ ನಡೆಸಲಾಗಿದ್ದು, ಉಳಿದ 17 ಕಿಲೋ ಮೀಟರ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಹೊಸ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ.

2025ರ ಜನವರಿ ಅಂತ್ಯದೊಳಗೆ ಕಾಮಗಾರಿ ಆರಂಭಿಸುವಂತೆ ಹೊಸ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಎಚ್‌ಎಐ ಭರವಸೆ ನೀಡಿದೆ. ಎನ್‌ಎಚ್‌ಎಐನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೇಕಡ 57ರಷ್ಟು ಪೂರ್ಣಗೊಂಡಿದೆ. ಉಳಿದ 17 ಕಿಲೋ ಮೀಟರ್‌ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮರು ಟೆಂಡರ್ ಕರೆದಿದ್ದೇವೆ ಎಂದು ಹೇಳಿದರು.

ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗೆ ಅಂದಾಜು 654 ಕೋಟಿ ರೂಪಾಯಿಯನ್ನು ಮೂರು ಹಂತಗಳಲ್ಲಿ ನೀಡಲಾಗಿದೆ. ಅಕ್ಟೋಬರ್ 2024ರಿಂದ ಡಿಸೆಂಬರ್ 2024ರ ಗಡುವಿಗಳೊಂದಿಗೆ ನಿರ್ಮಾಣ ಕಾರ್ಯವನ್ನು ಬಹು ಹಂತಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, 2021ರಲ್ಲಿ ಪ್ರಾರಂಭವಾದ ಫ್ಲೈಓವರ್‌ಗಳ ನಿರ್ಮಾಣ ಕಾರ್ಯವು ಇನ್ನೂ ಪೂರ್ಣವಾಗಿಲ್ಲ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಅದರಲ್ಲೂ ಶ್ರೀಪೆರಂಬದೂರು-ಒರಗಡಂ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಚಿನ್ನಯ್ಯನಛತ್ರ, ರಾಜಕುಲಂ, ಎನತ್ತೂರು ಸೇರಿದಂತೆ ವಿವಿಧೆಡೆ ಪರ್ಯಾಯ ಮಾರ್ಗಗಳು ಹಾಗೂ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ, ರ‍್ಯಾಂಪ್‌ ಸೌಲಭ್ಯದ ಕೊರತೆಯಿಂದ ಯೋಜನೆ ಪೂರ್ಣಗೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+