ಶೀಘ್ರ ಚೆನ್ನೈ-ಬೆಂಗಳೂರು ರೈಲು ಮೈಸೂರಿನ ವರೆಗೆ ವಿಸ್ತರಣೆ
ಬೆಂಗಳೂರು, ಜನವರಿ 3: ಚೆನ್ನೈ-ಬೆಂಗಳೂರು ರೈಲು ಶೀಘ್ರದಲ್ಲಿ ಮೈಸೂರಿನವರೆಗೆ ವಿಸ್ತರಣೆಯಾಗಲಿದೆ.ಇದರಿಂದ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.
ರೈಲು ಚೆನ್ನೈನಿಂದ ಮಧ್ಯಾಹ್ನ 1.35ಕ್ಕೆ ಹೊರಟು ರಾತ್ರಿ 8.05ಕ್ಕೆ ಬೆಂಗಳೂರು ತಲುಪಲಿದೆ. ಬೈಯಪ್ಪನಹಳ್ಳಿ, ಕೆಆರ್‌ಪುರಂ ಮಾರ್ಗದಲ್ಲಿ ಸಂಚರಿಸುವ ಕಾರಣ ಈ ಭಾಗದಲ್ಲಿರುವ ಉದ್ಯೋಗಿಗಳು ಕೆಲಸ ಮುಗಿಸಿ ರೈಲು ಹತ್ತಿ ಮೈಸೂರು ತಲುಪಲು ಅನುಕೂಲವಾಗಲಿದೆ.
ರಾತ್ರಿ 8.05ಕ್ಕೆ ಬೆಂಗಳೂರಿಗೆ ತಲುಪುತ್ತಿದ್ದ ರೈಲು, ಮರುದಿನದವರೆಗೆ ಖಾಲಿ ನಿಲ್ಲುತ್ತಿತ್ತು, ಇದರ ಸದ್ಬಳಕೆಗೆ ರೈಲ್ವ ಬಳಕೆದಾರರು ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಮಾಡಿದ್ದರು. ಇದೇ ಮಾರ್ಗದಲ್ಲಿ ರೈಲು ಬೆಳಗಿನ ಜಾವ 4.30ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 2.35ಕ್ಕೆ ಚೆನ್ನೈ ತಲುಪಲಿದೆ. ಮೈಸೂರಿನಿಂದ ಬೇಗ ಹೊರಟು ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಸುಲಭವಾಗಲಿದೆ.

ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸಿಗರಿಗೆ ಅನುಕೂಲವಾಗಲು ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ್ನು ಮೈಸೂರಿನ ವರೆಗೂ ವಿಸ್ತರಿಸುವಂತೆ ತಿಳಿಸಲಾಗಿದೆ.
ಅಲ್ಲದೆ ಈಗಾಗಲೇ ಓಡಾಡುತ್ತಿರುವ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ ವಿಶ್ವಮಾನವ ಎಕ್ಸ್‌ಪ್ರೆಸ್, ಚಾಮುಂಡಿ, ಟಿಪ್ಪು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಗಳನ್ನು ಯಲಹಂಕ, ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಪಿಯುಷ್ ಗೋಯೆಲ್ ಬಳಿ ಮನವಿ ಮಾಡಿದ್ದಾರೆ.












Click it and Unblock the Notifications