Bengaluru Cake Show 2024: ಬೆಂಗಳೂರು ಕೇಕ್ ಶೋ ದಿನಾಂಕ, ಸಮಯ, ಪ್ರವೇಶ ಶುಲ್ಕದ ಮಾಹಿತಿ
ಕೇಕ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೇಕ್ ಅಂದರೆ ಅಚ್ಚುಮೆಚ್ಚು. ಹೀಗಾಗಿ ವಿಭಿನ್ನ ಆಕಾರದ ಹಾಗೂ ವಿಭಿನ್ನ ರುಚಿಯ ಕೇಕ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹೀಗೆ ಕೇಕ್ ಪ್ರಿಯರನ್ನು ಸೆಳೆಯಲು ಬೆಂಗಳೂರಿನಲ್ಲಿ ಕೇಕ್ ಶೋವನ್ನು ಆಯೋಜಿಸಲಾಗಿದೆ. ಹಾಗಾದರೆ ಈ ವರ್ಷದ ಕೇಕ್ ಶೋ ಎಲ್ಲಿ ನಡೆಯುತ್ತಿದೆ? ಈ ಕೇಕ್ ಶೋ ಎಲ್ಲಿವರಿಗೂ ಇರಲಿದೆ? ಥೀಮ್ ಏನು? ಏನಿದರ ವಿಶೇಷತೆ? ಎಲ್ಲವನ್ನು ತಿಳಿಯೋಣ.
ಪ್ರತೀ ವರ್ಷ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜಿಸಲಾಗುತ್ತದೆ. ಈ ಬಾರಿ 50ನೇ ವಾರ್ಷಿಕ ಕೇಕ್ ಶೋವನ್ನು ನಗರದ ಪ್ಯಾಲೆಸ್ ಗ್ರೌಂಡ್‌ನಲ್ಲಿ ಆರಂಭಿಸಲಾಗಿದೆ. ಈ ಕೇಕ್ ಶೋ ಡಿಸೆಂಬರ್ 13 ರಿಂದ ಆರಂಭವಾಗಿದ್ದು ಜನವರಿ 1, 2025ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ದೇಶದ 50 ಪ್ರತಿಭಾವಂತ ಬಾಣಸಿಗರು ಈ ಕೇಕ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ವರ್ಷದ ಥೀಮ್ 'ಸೆಲೆಬ್ರೇಶನ್ ಆಫ್ ಆರ್ಟ್' ಆಗಿದ್ದು ಕ್ರಿಸ್ಮಸ್ ಆಚರಿಸುವ ಜನರನ್ನು ಹಾಗೂ ಕೇಕ್ ಪ್ರಿಯರನ್ನು ಸೆಳೆಯುತ್ತಿದೆ.

ಈ ಕೇಕ್ ಶೋನಲ್ಲಿ ಒಂದು ಬೃಹತ್ ಗಾತ್ರದ ಕೇಕ್ ಅನ್ನು ತಯಾರಿಸಲಾಗಿದ್ದು ಉಳಿದವುಗಳನ್ನು ಮನುಷ್ಯರಷ್ಟು ಎತ್ತರದಲ್ಲಿ ನಾನಾ ಗೊಂಬೆಯಂತೆ ವಿನ್ಯಾಸಗೊಳಿಸಲಾಗಿದೆ. ಈ ಕೇಕ್‌ಗಳನ್ನು ಪ್ರತಿಷ್ಠಿತ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಗೌರವಾರ್ಥವಾಗಿ ತಯಾರಿಸಲಾಗಿದೆ. ಈವೆಂಟ್‌ನ ಸೃಜನಶೀಲತೆ ಪ್ರಭಾವಿ ವ್ಯಕ್ತಿಗಳ ಗೌರವವನ್ನು ಎತ್ತಿತೋರಿಸುತ್ತದೆ.
ಅಂದಹಾಗೆ ಈ ಕೇಕ್ ಶೋ ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ (ಐಬಿಸಿಎ) ಮತ್ತು ಮೈಬೇಕರ್ಸ್‌ಮಾರ್ಟ್ ನಡುವಿನ ಸಹಯೋಗದೊಂದಿಗೆ ನಡೆಯುತ್ತಿದೆ. ಇಲ್ಲಿ ಭಾರತ ಮತ್ತು ಅದರಾಚೆಗಿನ ಬಾಣಸಿಗರು 50ಕ್ಕೂ ಹೆಚ್ಚು ಅಸಾಧಾರಣ ಕೇಕ್‌ಗಳನ್ನು ರಚಿಸಿದ್ದಾರೆ.
ಈ ಅದ್ಬುತ ನೋಟ ಬೇಕಿಂಗ್ ಕಲೆಯಲ್ಲಿನ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಪ್ರತಿಯೊಂದು ಕೇಕ್ ಮೇರುಕೃತಿಯಾಗಿದ್ದು, ಅದರ ಸೃಷ್ಟಿಕರ್ತನ ಸೃಜನಶೀಲತೆ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಪಾಕಶಾಲೆಯನ್ನು ಇಷ್ಟಪಡುವವರು ಈ ಈವೆಂಟ್ ಗೆ ಭೇಟಿ ಮಾಡಬಹುದು.
ಕೇಕ್ ಶೋಗೆ ಭೇಟಿ ನೀಡುವ ಸಮಯ
ಕಲೆ ಮತ್ತು ಬೇಕಿಂಗ್‌ನ ಈ ಅದ್ಭುತ ಸಮ್ಮಿಳನವನ್ನು ವೀಕ್ಷಿಸಲು ಆಸಕ್ತಿ ಹೊಂದಿರುವವರಿಗೆ ಸಮಯವನ್ನು ನಿಗಧಿಸಲಾಗಿದೆ. ಬೆಂಗಳೂರು ಕೇಕ್ ಶೋ 2024 ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಜನವರಿ 1, 2025 ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 11:00 ರಿಂದ ರಾತ್ರಿ 9:00 ರವರೆಗೆ ಈ ಕೇಕ್‌ನ ಅದ್ಭುತ ರಚನೆಗಳನ್ನು ನೋಡಲು ಜನರಿಗೆ ಅವಕಾಶವಿರುತ್ತದೆ.
#WATCH | Bengaluru, Karnataka: The 50th annual 'Cake Show' was organised at the Palace Grounds as part of Christmas Celebrations.
— ANI (@ANI) December 23, 2024
Cakes in the shape of Ayodhya Ram Temple and Nadaprabhu Kempegowda were some of the highlights among other very creative and intricate shapes.… pic.twitter.com/9RIij0TQR7
ಕುಟುಂಬ ಹಾಗೂ ಸ್ನೇಹಿತರೊಂದಿಗೆ ಇಲ್ಲಿಗೆ ಜನ ಭೇಟಿ ನೀಡುತ್ತಿದ್ದಾರೆ. ಕೇಕ್ ಕಲೆಯ ಜಗತ್ತಿನಲ್ಲಿ ಅಧ್ಯಯನ ಮಾಡಲು ಉತ್ಸಾಹ ಹೊಂದಿರುವವರಿಗೆ ಈ ಪ್ರದರ್ಶನ ಹೇಳಿ ಮಾಡಿಸಿದಂತಿದೆ. ಈ ಅದ್ಭುತ ಅನುಭವವನ್ನು ಪ್ರತಿಯೊಬ್ಬರೂ ಪಡೆಯಲು ಅವಕಾಶವಿದೆ. ಪ್ರತಿ ವ್ಯಕ್ತಿಗೆ 100ರೂಪಾಯಿ ಪ್ರವೇಶ ಶುಲ್ಕ ನಿಗಧಿಮಾಡಲಾಗಿದೆ. ಆಸಕ್ತರು ಯಾವುದೇ ನಿರ್ಬಂಧವಿಲ್ಲದೆ ಕೇಕ್ ಕಲೆಯ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.
ಯಾವೆಲ್ಲಾ ವಿಧವಾದ ಕೇಕ್‌ಗಳು ಇವೆ?
ಬೆಂಗಳೂರು ಕೇಕ್ ಶೋನಲ್ಲಿ ಬೃಹತ್ ಕ್ರಿಸ್ಮಸ್ ಟ್ರೀ ಅನ್ನು ಕೇಕ್‌ನಿಂದ ರಚಿಸಲಾಗಿದೆ. ಅಲ್ಲದೇ ಅಯೋಧ್ಯ ರಾಮಮಂದಿರ, ಅರಮನೆ, ಕೆಂಪೇಗೌಡ, ಮಕ್ಕಳಿಗಾಗಿ ಪುಟ್ಟ ಪಟ್ಟ ಗೊಂಬೆಗಳನ್ನು ಕೇಕ್‌ನಿಂದ ತಯಾರಿಸಲಾಗಿದೆ. ಇದಲ್ಲದೆ ರಾಧಾ-ಕೃಷ್ಣ, ಅನೇಕ ಗಣ್ಯರು, ವೀಣೆ, ತಬಲ ಹೀಗೆ ಬಗೆ ಬಗೆಯ ವಿನ್ಯಾಸದ ಕೇಕ್‌ಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಇದು ಭಾರತದ ಕೆಲವು ಪ್ರತಿಭಾವಂತ ಬಾಣಸಿಗರ ಸೃಜನಶೀಲತೆಗೆ ಹಿಡಿದ ಕೈಗಣ್ಣಡಿಯಾಗಿದ್ದು ಜನರು ಇದನ್ನು ವೀಕ್ಷಿಸಿ ಎಂಜಾಯ್ ಮಾಡುತ್ತಿದ್ದಾರೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications