ಬೆಂಗಳೂರು ಕಸ ಗುಡಿಸುವ ಯಂತ್ರ ಬಾಡಿಗೆಗೆ: ಸರ್ಕಾರದ ಪರ ಬ್ಯಾಟ್ ಬೀಸಿದ ಉದ್ಯಮಿ ಕಿರಣ್ ಮಜುಂದಾರ್ ಶಾ
Sweeping Machine: ಕಳೆದ ಕೆಲವು ದಿನಗಳಿಂದ ಬೆಂಗಳೂರು ಮೂಲಸೌಕರ್ಯ ಹಾಗೂ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು, ಬೆಂಗಳೂರಿನ ಕಸ ಗುಡಿಸುವ ಮಿಷನ್ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದಾರೆ. YeThikKarkeDikhao ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಮಾಡಲಾಗಿರುವ ಟ್ವೀಟ್‌ಗೆ ಕಿರಣ್ ಅವರು ರಿಯಾಕ್ಟ್ ಮಾಡಿದ್ದಾರೆ.

ಈ ಸೋಷಿಯಲ್ ಮೀಡಿಯಾ ಖಾತೆಯಿಂದ ಕರ್ನಾಟಕದ ಮುಖ್ಯಮಂತ್ರಿ ಸಿ.ಎಂ ಸಿದ್ದರಾಮಯ್ಯ ಅವರ ಕಾರ್ಯವೈಖರಿ ನೋಡಿ.
ನಿಮ್ಮ ಸರ್ಕಾರವು ಬೆಂಗಳೂರಿನ 46 ರಸ್ತೆ ಗುಡಿಸುವ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ವರ್ಷಕ್ಕೆ ₹ 613 ಕೋಟಿ ಖರ್ಚು ಮಾಡಲು ಬಯಸುತ್ತದೆ. ಆದರೆ GeM ನಲ್ಲಿರುವ ಅದೇ ಯಂತ್ರಗಳನ್ನು ನೇರವಾಗಿ ಖರೀದಿಸಲು ಸುಮಾರು ₹ 2.5 ಕೋಟಿ ವೆಚ್ಚವಾಗುತ್ತದೆ.
ನೀವು ಉತ್ತರಿಸಬೇಕಾದ ಕೆಲವು ಪ್ರಶ್ನೆಗಳು:
• ಪ್ರತಿ ಯಂತ್ರಕ್ಕೆ ವರ್ಷಕ್ಕೆ ₹ 2 ಕೋಟಿ ವಿಧಿಸುವ ಈ ಅಸಂಬದ್ಧ ಬಾಡಿಗೆ ಮಾದರಿಯನ್ನು ಯಾರು ವಿನ್ಯಾಸಗೊಳಿಸಿದರು ?
• ಯಂತ್ರದ ಪೂರ್ಣ ಖರೀದಿ ವೆಚ್ಚದ 80% ಅನ್ನು ವಾರ್ಷಿಕವಾಗಿ ಬಾಡಿಗೆಗೆ ಏಕೆ ನೀಡಲಾಗುತ್ತಿದೆ ?
• ಯಾವ ಗುತ್ತಿಗೆದಾರರನ್ನು ಪ್ರೋತ್ಸಾಹಿಸಲಾಗುತ್ತಿದೆ.
• ಸಂಪೂರ್ಣ ಖರೀದಿಯನ್ನು (ಅಗ್ಗದ ಮತ್ತು ಪಾರದರ್ಶಕ) ಏಕೆ ಆಯ್ಕೆ ಮಾಡಲಾಗಿಲ್ಲ ?
• GBA ಒಳಗೆ ಈ ಟೆಂಡರ್ ಪ್ರಸ್ತಾವನೆಯನ್ನು ಯಾರು ಅನುಮೋದಿಸಿದರು ?
• ಸಾರ್ವಜನಿಕ ಹಣವನ್ನು ಈ ರೀತಿ ಬಳಕೆ ಮಾಡುವ ಮೊದಲು ಯಾವ ರೀತಿ ಕೆಲಸ ಮಾಡಲಾಯಿತು ?
• ಬೆಂಗಳೂರಿನ ತೆರಿಗೆದಾರರು ನಿಜವಾದ ಮೂಲಸೌಕರ್ಯದ ಬದಲು ಈ "ಬಾಡಿಗೆ-ವಂಚನೆ"ಗೆ ಏಕೆ ಪಾವತಿಸಬೇಕು ಎಂದು ಸರಣಿ ಪ್ರಶ್ನೆಗಳನ್ನು ಕೇಳಲಾಗಿದೆ.
ಕರ್ನಾಟಕವು ಉತ್ತರಗಳು ಅರ್ಹವಾಗಿವೆ, ಕ್ಷಮಿಸಿಲ್ಲ.
ಈ ಟ್ವೀಟ್‌ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮಾಡಿದ್ದಾರೆ. ಒಪ್ಪಂದವನ್ನು ಅರ್ಥಮಾಡಿಕೊಳ್ಳದೆ ಕಾಮೆಂಟ್ ಮಾಡಬೇಡಿ. ನಗರವನ್ನು ಯಾಂತ್ರೀಕರಣಗೊಳಿಸಬೇಕಾಗಿದೆ. ಇವು ಭಾರೀ ಸಂಯೋಜಿತ ಯಂತ್ರಗಳಾಗಿವೆ, ನೀವು ಉಲ್ಲೇಖಿಸುತ್ತಿರುವ ದುರ್ಬಲ ವಾಹನಗಳಲ್ಲ. ಒಪ್ಪಂದವು ಸಾರ್ವಜನಿಕ ವಲಯದಲ್ಲಿರುತ್ತದೆ. ನಂತರ ನೀವು ಕಾಮೆಂಟ್ ಮಾಡಲು ಮುಕ್ತರಾಗಿದ್ದೀರಿ ಎಂದು ಹೇಳಿದ್ದಾರೆ. ಇದೀಗ ಈ ವಿಚಾರವು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ: ಇನ್ನು ಕಿರಣ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿರುವುದಕ್ಕೆ ಹಲವರು ಅಚ್ಚರಿ ಸೂಚಿಸಿದ್ದಾರೆ.












Click it and Unblock the Notifications