ವಿಡಿಯೋ: ಪೆಟ್ರೋಲ್ ಬಂಕ್‌ನಲ್ಲಿಯೇ ಬಸ್‌ಗೆ ಬೆಂಕಿ: ತಪ್ಪಿದ ಭಾರಿ ಅನಾಹುತ

ಬೆಂಗಳೂರು, ಜನವರಿ 30: ನಗರದಲ್ಲಿ ಆಗಬಹುದಾಗಿದ್ದ ಭಾರಿ ಪ್ರಮಾದವೊಂದು ಅದೃಷ್ಟವಶಾತ್ ಸ್ವಲ್ಪದರಲ್ಲೇ ತಪ್ಪಿದೆ.

ನಗರದ ಮಡಿವಾಳದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದ ವೇಳೆ ಬಸ್‌ಗೆ ಬೆಂಕಿ ತಗುಲಿದೆ. ಆದರೆ ಪೆಟ್ರೋಲ್ ಬಂಕ್‌ಗೆ ಬೆಂಕಿ ವ್ಯಾಪಿಸದ ಕಾರಣ ಆಗಬಹುದಾಗಿದ್ದ ಬಹುದೊಡ್ಡ ಅಪಘಾತ ತಪ್ಪಿದೆ.

ಮಡಿವಾಳ‌ ಪೊಲೀಸ್ ಸ್ಟೇಷನ್ ಪಕ್ಕದಲ್ಲೆ ‌ಇರುವ ಭರತ್ ಪೆಟ್ರೋಲ್ ಬಂಕ್ ನಲ್ಲಿ ನಿನ್ನೆ ರಾತ್ರಿ ಟ್ರಾವೆಲ್ ಬಸ್‌ ಒಂದು ಡೀಸೆಲ್ ತುಂಬಿಸಿಕೊಂಡಿದೆ. ನಂತರ ಬಸ್ ಸ್ಟಾರ್ಟ್ ಮಾಡಿದ ಕೂಡಲೇ ಬೆಂಕಿ ಹತ್ತಿಕೊಂಡಿದೆ.

Bengaluru: Bus Cathes Fire While Filing Diesel In Petrol Bunk

ಬಸ್‌ನಲ್ಲಿದ್ದ 34 ಮಂದಿ ಪ್ರಯಾಣಿಕರು, ಡ್ರೈವರ್ ಸೇರಿ ಇತರ ಸಿಬ್ಬಂದಿ ಕೂಡಲೇ ಬಸ್ ಇಳಿದಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಸಫಲವಾಗಿಲ್ಲ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ.

ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕ ದಳ ವಾಹನಗಳು ಮತ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಪೆಟ್ರೋಲ್ ಬಂಕ್‌ಗೆ ಬೆಂಕಿ ತಗುಲದಂತೆ ತಡೆದಿದ್ದಾರೆ. ಅಲ್ಲದೆ ದೊಡ್ಡ ಅವಘಡವಾಗುವುದನ್ನು ಸಹ ತಡೆದಿದ್ದಾರೆ.

ಬೆಂಗಳೂರಿನಿಂದ ಕೊಯಮತ್ತೂರಿಗೆ ಹೊರಟಿದ್ದ ಬಸ್‌ ಇದಾಗಿದ್ದು, ಬೆಂಕಿ ಕಾರಣಕ್ಕೆ ಪೂರ್ಣ ಸುಟ್ಟು ಕರಕಲಾಗಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+