Bengaluru Power Cut: ಸೆಪ್ಟೆಂಬರ್ ಅಂತ್ಯದವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ: ಪ್ರದೇಶ, ಸಮಯ ವಿವರ

ಸೆಪ್ಟೆಂಬರ್ 30ರವರೆಗೆ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು, ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ತಿಂಗಳ ಅಂತ್ಯದವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯಾಗಲಿದೆ.

ಗುರುವಾರದಿಂದ ಶನಿವಾರದವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿಅಡಚಣೆ ಉಂಟಾಗಲಿದೆ. ಬಹುತೇಕ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ.

 Bengaluru Braces for Power Cut Until End of September: Area and Timing Details Inside

ಶನಿವಾರದವರೆಗೆ ವಿದ್ಯುತ್ ಕಡಿತವಾಗುವ ಪ್ರದೇಶಗಳು

ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ತಿರಸನಹಳ್ಳಿ, ದುರ್ಗದಹಳ್ಳಿ, ದುರ್ಗದಹಳ್ಳಿ ಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸೆಪ್ಟೆಂಬರ್ 28ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬಿಲಂಕೋಟೆ ಪ್ರದೇಶ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಕುಲವನಹಳ್ಳಿ ಗ್ರಾಪಂ, ಹರೇಬೋಮನಹಳ್ಳಿ ಗ್ರಾಪಂ, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾಪಂ ಹಾಗೂ ಹರೇಬೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆಪ್ಟೆಂಬರ್ 30ರಂದು ವಿದ್ಯುತ್ ವ್ಯತ್ಯಯ

ಬೂದಿಹಾಳ್, ಕಾಚನಹಳ್ಳಿ, ವೀರರಂಜಿಪುರ, ಭುವನೇಶ್ವರಿ, ಯರಮಂಚನಹಳ್ಳಿ, ಫಿಡೆಲಿಟಿ, ಫಿಲಿಪ್ಸ್, ಐಕ್ಯುಬೇಟರ್, ಐಬಿಎಂ ಡಿ4 ಬ್ಲಾಕ್, ಐಬಿಎಂ ಡಿ1 ಮತ್ತು ಡಿ2 ಬ್ಲಾಕ್, ಐಬಿಡಿ ಡಿ3 ಬ್ಲಾಕ್, ಎಫ್‌2 ಬ್ಲಾಕ್, ಎಲ್‌6 ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲೂಸೆಂಟ್, ಅಪಾರ್ಟ್‌ಮೆಂಟ್, ಹೆಬ್ಬಾಳ ಕೆಂಪಾಪುರ, ವಿನ್ಯಾಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ಜೆಎನ್‌ಸಿ, ಎಲ್ 5 ನೋಕಿಯಾ ಬ್ಲಾಕ್, ಜಿ1 ಬ್ಲಾಕ್, ಎಂಫಾರ್, ಮಧುವನ ಎಂ2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಕರ್ನಾಟಕ, ಮೇಸ್ತ್ರಿ ಪಾಳ್ಯ, ಬಿ.ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್ ಮತ್ತು ಮರಿಯಣ್ಣ ಪಾಳ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿವಿಧ ದುರಸ್ತಿ, ನಿರ್ವಹಣಾ ಕೆಲಸಗಳು ನಡೆಯುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಬೆಸ್ಕಾಂ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+