ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.19ರಿಂದ ಬೆಂಗಳೂರು ಪುಸ್ತಕೋತ್ಸವ

|
Google Oneindia Kannada News

ಬೆಂಗಳೂರು, ನ.12 : 'ಪುಸ್ತಕಕ್ಕೆ ಮರಳಿ'ಎಂಬ ಪರಿಕಲ್ಪನೆಯೊಂದಿಗೆ ಬೆಂಗಳೂರು ಪುಸ್ತಕ ಮಾರಾಟ ಮತ್ತು ಪ್ರಕಾಶಕರ ಸಂಘ ಬೆಂಗಳೂರು ಪುಸ್ತಕೋತ್ಸವವನ್ನು ಹಮ್ಮಿಕೊಂಡಿದೆ. ಡಿ.19ರಂದು ಪುಸ್ತಕೋತ್ಸವಕ್ಕೆ ಚಾಲನೆ ದೊರೆಯಲಿದ್ದು, ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದೆ.

ಬೆಂಗಳೂರು ಪುಸ್ತಕ ಮಾರಾಟ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿತಿನ್ ಎಸ್ ಶಾ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಡಿ.19 ರಿಂದ 28 ರವರೆಗೆ ಜೆ.ಪಿ.ನಗರದ ಇಲಾನ್ ಕನ್ವೆನ್ಷನ್ ಸೆಂಟರ್‌ನಲ್ಲಿ 11ನೇ ವರ್ಷದ ಪುಸ್ತಕೋತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.

Book

ಪುಸ್ತಕೋತ್ಸವದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಮಲಯಾಳಂ, ಗುಜರಾತಿ ಸೇರಿದಂತೆ ದೇಶದ ನಾನಾ ಭಾಷೆಗಳ ಪುಸ್ತಕಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. [ವಾಲ್ಮೀಕಿ' ಪುಸ್ತಕ ಮಾರಾಟ, ಸಪ್ನಾ ಮಳಿಗೆ ಮೇಲೆ ದಾಳಿ]

ಕನ್ನಡ ಪುಸ್ತಕಗಳಿಗೆ ಪುಸ್ತಕೋತ್ಸವದಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಎಲ್ಲಾ ಪುಸ್ತಕಗಳಿಗೂ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ. ಕತೆ, ಕಾದಂಬರಿ, ಆತ್ಮಚರಿತ್ರೆ, ಹಾಸ್ಯ, ಮನರಂಜನೆ, ಮನೋವಿಕಾಸ, ಸಾಹಿತ್ಯ ಸೇರಿದಂತೆ ವಿಭಿನ್ನ ರೀತಿಯ ಪುಸ್ತಕಗಳು ದೊರೆಯಲಿವೆ. [ನಿಮ್ಮ ಇಷ್ಟದ ಪುಸ್ತಕ ಓದಲೊಂದು ವೆಬ್ ತಾಣ]

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ : ಹತ್ತು ದಿನಗಳ ಪುಸ್ತಕೋತ್ಸವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ದೇಶದ ನಾನಾ ಭಾಗದ ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಚಾರ ಗೋಷ್ಠಿಗಳು : ಪುಸ್ತಕೋತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ನಾಡಿನ ಹಿರಿಯ ಹಾಗೂ ಕಿರಿಯ ಸಾಹಿತಿಗಳು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಾಹಿತ್ಯಾಸಕ್ತರು ಇದರಲ್ಲಿ ಭಾಗವಹಿಸಲಿದ್ದಾರೆ.

English summary
2014 Bengaluru book Festival organized from December 19 to 28 at Elaan Convention Center in J.P.Nagar. 250 book stall available at festival and 10 percent discount for Kannada books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X