Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ BMTC ಬಸ್‌ನಲ್ಲಿ ಮಹಿಳೆ-ಚಾಲಕ ಜಗಳ, ಕೈ-ಕೈ ಮಿಲಾಯಿಸಲು ಯತ್ನ! ವಿಡಿಯೋ ವೈರಲ್

ಬೆಂಗಳೂರು, ಸೆಪ್ಟಂಬರ್ 11: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಂಚಾರ ದಟ್ಟಣೆ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ಮಾಡುವವರಿಗೆ ಟ್ರಾಫಿಕ್ ಜಾಮ್ ಬಿಸಿ ಜೊತೆಗೆ ಸಹ ಪ್ರಯಾಣಿಕರು ಮತ್ತು ನಿರ್ವಾಹಕ ಜಗಳದಿಂದ ಬೇಸತ್ತಿರುತ್ತಾರೆ. ಕೆಲವೊಮ್ಮೆ ಸಂಚಾರ ನಿಧಾನವಾಗಿಬಿಡುತ್ತದೆ. ಇದೇ ರೀತಿ ಬಸ್‌ನಲ್ಲಿ ಮಹಿಳೆ ಚಾಲಕರೊಂದಿಗೆ ಜಗಳವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ತುಮಕೂರು ರಸ್ತೆಯ ಪೀಣ್ಯ ಬಳಿ ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮತ್ತು ಚಾಲಕನ ನಡುವೆ ತೀವ್ರ ಜಗಳ ನಡೆದಿದೆ. ಬಸ್‌ನಲ್ಲಿದ್ದ ಹೆಚ್ಚಿನ ಪ್ರಮಾಣದ ಜನರಿದ್ದರು. ಈ ವೇಳೆ ವಾಗ್ವಾದ ಶುರುವಾಗಿದೆ. ಮಹಿಳೆ ಕೈ ಮಾಡಲು ಮುಂದಾಗಿದ್ದು, ಅದಕ್ಕೆ ಚಾಲಕ ಪ್ರತಿಕ್ರಿಯಿಸಿದ್ದು ನೋಡಿ ದಿಗ್ಭ್ರಮೆಗೊಂಡರು. ಘಟನೆಗೆ ಸಂಬಂಧಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಇದನ್ನು ಎಕ್ಸ್‌ ಖಾತೆಯಲ್ಲಿ Karnataka Portfolio ಹಂಚಿಕೊಂಡಿದೆ. ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Bengaluru BMTC Bus Woman Driver Fight Video Goes Viral Know Reason

ವಿಡಿಯೋದಲ್ಲಿ ಕಾಣುವಂತೆ ಮಹಿಳೆಯನ್ನು ಎಷ್ಟು ತಡೆದು ಕೇಳದ ಚಾಲಕನ ಸೀಟು ಬಳಿ ಬಂದು ಕೋಪದಿಂದ ವಾಗ್ವಾದ ನಡೆಸಿದ್ದು ಕಾಣಸುತ್ತದೆ. ಮಾತಿಗೆ ಮಾತು ಬೆಳೆದು ಡ್ರೈವರ್ ಹಿಂಬದಿ ಬಂದು ಕೈ ಎತ್ತಿ ಹೊಡೆಯಲು ಮುಂದಾಗಿದ್ದ ಸಹ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಚಾಲಕರೂ ಮಹಿಳೆಯ ಆವಾಜ್‌ಗೆ ಬಗ್ಗೆ ತಿರುಗೇಟು ಕೊಡಲು ಪ್ರಯತ್ನಿಸಿದ್ದು ಕಾಣುತ್ತದೆ. ಇದು ಕ್ಷಣಮಾತ್ರದಲ್ಲಿ ಗಲಾಟೆ ಆಗಿ ಪರಿವರ್ತನೆ ಆಗಿಯಿತು. ಬಸ್ ಸಂಚಾರ ನಿಮಿಷಗಳ ಕಾಲ ವಿಳಂಬವಾಯಿತು.

ಮೊದಲು ಹಲ್ಲೆಗೆ ಮುಂದಾಗಿದ್ದರು ಯಾರು?

ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯನ್ನು ಅನೇಕ ನೆಟ್ಟಿಗರು ಖಂಡಿಸಿದ್ದಾರೆ. ಕೆಲವರು ಮಹಿಳೆಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವರು ಮಹಿಳೆ ಬಗ್ಗೆ ಮಾತನಾಡದೇ ಚಾಲಕನನ್ನು ಬೆಂಬಲಿಸಿದ್ದಾರೆ. ಮಹಿಳೆಯೇ ಮೊದಲು ಹಲ್ಲೆಗೆ ಮುಂದಾಗಿದ್ದು ಸಹ ಪ್ರಯಾಣಿಕರು ತೆಗೆದ ವಿಡಿಯೋದಲ್ಲಿ ಕಾಣಿಸುತ್ತದೆ. ದುರ್ವತೆಯ ಮಹಿಳೆಯನ್ನು ಬಂಧಿಸುವಂತೆ ಕೆಲವರು ಆಗ್ರಹಿಸಿದ್ದಾರೆ. ಈ ಜಗಳಕ್ಕೆ ನಿಖರ ಕಾರಣವೇನೆಂಬುದು ತಿಳಿದು ಬಂದಿಲ್ಲ.

ಈ ವಿಡಿಯೋ ಸಮೇತ ಪ್ರಕರಣವನ್ನು ಸಂಬಂಧಿಸಿ ಬೆಂಗಳೂರು ಪೊಲೀಸರ ಗಮನಕ್ಕೆ ತರಲಾಗಿದೆ. ಇಂತಹ ಘಟನೆಗಳು ಶಕ್ತಿ ಯೋಜನೆ ಜಾರಿ ಬೆನ್ನಲ್ಲೆ ನಡೆದು ನಂತರ ಕಡಿಮೆ ಆಗಿದ್ದವು. ಇದೀಗ ಮತ್ತೆ ಬೆಂಗಳೂರಿನಲ್ಲಿ ಅಲ್ಲಲ್ಲಿ ಉಂಟಾಗುತ್ತಿವೆ. ಅನೇಕ ಬಾರಿ ನಿರ್ವಾಹಕರ ಜೊತೆಗೆ ವಾಗ್ವಾದಕ್ಕೆ ನಿಲ್ಲುವ ಮಹಿಳೆಯರು ಕೆಲವೊಮ್ಮೆ ಚಾಲಕರನ್ನು, ಸಹ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ನಡೆದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+