ರಷ್ಯಾದ ಸ್ಪುಟ್ನಿಕ್ V ಕೋವಿಡ್ ಲಸಿಕೆ ಬೆಂಗಳೂರಲ್ಲಿ ಉತ್ಪಾದನೆ

ಬೆಂಗಳೂರು, ಮಾರ್ಚ್ 19: ರಷ್ಯಾದ ಕೋವಿಡ್ ಲಸಿಕೆಯಾದ ಸ್ಪುಟ್ನಿಕ್ V ಅನ್ನು ಬೆಂಗಳೂರಿನಲ್ಲಿ ಕೇಂದ್ರ ಕಚೇರಿನ ಹೊಂದಿರುವ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್‌ನ ಅಂಗ ಸಂಸ್ಥೆ ಸ್ಟೆಲಿಸ್ ಬಯೋಫಾರ್ಮಾ ತಯಾರಿಸಲಿದೆ. ರಷ್ಯಾದ ಸ್ಪುಟ್ನಿಕ್ ಕೋವಿಡ್ ಲಸಿಕೆಯು ಹಲವು ತಿಂಗಳ ಹಿಂದೆಯೇ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿತ್ತು. ಆದರೆ ಇದುವರೆಗೂ ಅದಕ್ಕೆ ಅನುಮತಿ ನೀಡಿಲ್ಲ. ಈ ನಡುವೆ ಸ್ಟೆಲಿಸ್ ಬಯೋಫಾರ್ಮಾ ಕನಿಷ್ಠ 200 ಮಿಲಿಯನ್ ಡೋಸ್ ಲಸಿಕೆಗಳ ಉತ್ಪಾದನೆ ಹಾಗೂ ಪೂರೈಕೆಯ ಕಾರ್ಯನಡೆಸುತ್ತಿದೆ.

ಇತ್ತೀಚಿನ ಒಪ್ಪಂದವು ಭಾರತದಲ್ಲಿ ವರ್ಷಕ್ಕೆ ಸುಮಾರು 550 ಮಿಲಿಯನ್ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೆಚ್ಚಿಸಿದೆ. ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (ಆರ್‌ಡಿಐಎಫ್) ಸ್ಟೆಲಿಸ್ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.

ಕಂಪೆನಿಯು ಈ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಿಂದ ಸ್ಪುಟ್ನಿಕ್ ಲಸಿಕೆಯ ಪೂರೈಕೆ ಅರಂಬಿಸುವ ಗುರಿ ಹೊಂದಿದೆ. ಆರಂಭದ ಒಪ್ಪಂದದಾಚೆಗೂ ಸ್ಟೆಲಿಸ್ ಲಸಿಕೆ ಉತ್ಪಾದನೆಯ ಮೂಲಕ ಹೆಚ್ಚುವರಿ ಪೂರೈಕೆಗಾಗಿ ಆರ್‌ಡಿಐಎಫ್ ಜತೆ ಕೆಲಸ ಮುಂದುವರಿಸಲಿದೆ ಎಂದು ಆರ್‌ಡಿಐಎಫ್ ತಿಳಿಸಿದೆ.

Bengaluru Based Stelis Biopharma To Produce 200 Million Doses Of Russias Sputnik V Covid Vaccine

ಸ್ಟೆಲಿಸ್, ಸ್ಪಟ್ನಿಕ್ ಲಸಿಕೆಗಾಗಿ ಆರ್‌ಡಿಐಎಫ್ ಜತೆ ಒಪ್ಪಂದ ಮಾಡಿಕೊಂಡ ಭಾರತದ ನಾಲ್ಕನೆಯ ಕಂಪೆನಿಯಾಗಿದೆ. ಜತೆಗೆ ಭಾರತದಲ್ಲಿ ರಷ್ಯಾದ ಲಸಿಕೆ ಉತ್ಪಾದಿಸುವ ಮೂರನೇ ಕಂಪೆನಿಯಾಗಿದೆ. ಈ ವಾರದ ಆರಂಭದಲ್ಲಿ ಹೈದರಾಬಾದ್ ಮೂಲದ ಗ್ಲಾಂಡ್ ಫಾರ್ಮಾ, 250 ಮಿಲಿಯನ್ ಡೋಸ್ ಸ್ಪುಟ್ನಿಕ್ ಲಸಿಕೆ ಉತ್ಪಾದನೆಯ ಒಪ್ಪಂದವನ್ನು ಪ್ರಕಟಿಸಿತ್ತು. ಕಳೆದ ವರ್ಷ ಹೈದರಾಬಾದ್‌ನದ್ದೇ ಮತ್ತೊಂದು ಸಂಸ್ಥೆ ಹೆಟೆರೊ ಬಯೋಫಾರ್ಮ ಜತೆಗೆ ಆರ್‌ಡಿಐಎಫ್ 100 ಮಿಲಿಯನ್ ಡೋಸ್‌ಗಾಗಿ ಒಪ್ಪಂದ ಮಾಡಿಕೊಂಡಿತ್ತು.

ಭಾರತದಲ್ಲಿ ರಷ್ಯಾದ ಲಸಿಕೆಯ ಉತ್ಪಾದನೆಗೆ ಮೊದಲು ಒಪ್ಪಂದ ಮಾಡಿಕೊಂಡಿದ್ದು ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರಿ. ಭಾರತದಲ್ಲಿ ಲಸಿಕೆಯ ತುರ್ತು ಬಳಕೆಯ ಅನುಮತಿ ನೀಡುವಂತೆ ಡಾ. ರೆಡ್ಡೀಸ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಒಮ್ಮ ಅನುಮತಿ ದೊರಕಿದ ಕೂಡಲೇ ಸುಮಾರು 200 ಮಿಲಿಯನ್ ಡೋಸ್ ಲಸಿಕೆಯನ್ನು ಪೂರೈಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+