ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಾಮಲಿಂಗಾ ರೆಡ್ಡಿ: ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ವಾಪಸ್
ಬೆಂಗಳೂರು ಸೆಪ್ಟೆಂಬರ್ 11: ಫ್ರೀಡಂಪಾರ್ಕ್‌ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಖಾಸಗಿ ಸಾರಿಗೆ ಒಕ್ಕೂಟಗಳು ಹಿಂದಕ್ಕೆ ಪಡೆದಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟ ನಿರತರ ಮನವಿ ಆಲಿಸಿದ ಬಳಿಕ ಬಂದ್ ವಾಪಸ್ ಪಡೆಯಲಾಗಿದೆ.

ನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸ್ವತಃ ಸಾರಿಗೆ ಸಚಿವರೇ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ನಾಳೆಯಿಂದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಬಂದ್ ವಾಪಸ್ ಪಡೆದುಕೊಂಡಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, 'ನಾನೂ ನಿಮ್ಮ ಪರ. ನಿಮಗೆ ಸಹಾಯ ಮಾಡಲು ಪ್ರಯತ್ನ ಮಾಡುವೆ. ನನ್ನನ್ನೂ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಟ್ಯಾಕ್ಸ್ ಹಾಗೂ ಶಕ್ತಿ ಯೋಜನೆ ನಮ್ಮ ಸರ್ಕಾರದಿಂದ ಆಗಿದೆ. ಹಿಂದೆ ಪೈನ್ ಜಾಸ್ತಿ ಆಗಿತ್ತು, ನಾನೇ ಕಡಿಮೆ ಮಾಡಿಸಿದ್ದೆ, ಸಿಎಂ ಸಭೆಗೆ ಬಂದಿರಲಿಲ್ಲ , ಎಲ್ಲಾ ಬೇಡಿಕೆ ಈಡೇರಿಸುವ ಮಾತು ಮೊದಲೇ ಹೇಳಿದ್ದೆ. ಚಾಲಕರ ಅಭಿವೃದ್ಧಿ ನಿಗಮ ಮಾಡೇ ಮಾಡ್ತೀವಿ. ಚಾಲಕರಿಗೆ ಕ್ಯಾಂಟೀನ್ ಮಾಡುತ್ತವೆ. ಅಗ್ರೀಗೇಟ್ ಬಗ್ಗೆಯೂ ಆಕ್ಟ್ ಮಾಡ್ತೇವೆ' ಎಂದರು.
'ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಪತ್ರ ಬರೆದಿರುವೆ. ಸಿಎಂ ಜೊತೆಗೆ ಸಭೆ ಮಾಡುವೆ. ಸೀನಿಯರ್ ಮೊಸ್ಟ್ ವಕೀಲರನ್ನ ಇಟ್ಟು ಕೇಸ್ ಗಳ ಕುಲಾಸೆ ಬಗ್ಗೆ ಗಮನ ಹರಿಸ್ತೇವೆ. ಚಾಲಕರಿಗೆ ವಸತಿ ಯೋಜನೆ ಬಗ್ಗೆ ಸಚಿವ ಜಮೀರ್ ಜೊತೆಗೆ ಮಾತಾಡುವೆ. ಮಕ್ಕಳಿಗೆ 17 ಕೋಟಿ ರೂಪಾಯಿ ಇಟ್ಟಿದ್ದೇವೆ, ಪ್ರಾಥಮಿಕ ಶಿಕ್ಷಣದಿಂದಲೇ ನೀಡಲು ಮಾತಾಡುವೆ' ಎಂದು ರಾಮಲಿಂಗರೆಡ್ಡಿ ಅವರು ಹೇಳಿದರು.
'ಪೋಲೀಸ ಇಲಾಖೆಯವರು ರಿಯಾಯಿತಿ ನೀಡಿದ್ರು, ಓನ್ ಟೈಮ್ ಸಟಲ್ ಮೆಂಟ್ ಬಗ್ಗೆ ಗಮನ ಹರಿಸ್ತೇವೆ. ರಿನಿವಲ್, ಖಾಸಗಿ ವಾಹನಗಳ ಬಗ್ಗೆ ಸಣ್ಣ ತಿದ್ದುಪಡಿ ಆಗಬೇಕಿದೆ. ಪೋರ್ಟರ್, ಇನ್ನಿತರ ಆಪ್ ಆಧಾರಿತ ಕಂಪನಿಗಳನ್ನ ತೆಗೆದುಕೊಳ್ತಿಲ್ಲ. ತೆಗೆದುಕೊಳ್ತಿದ್ರೆ ಕಾನೂನು ಕ್ರಮ ತೆಗೆದುಕೊಳ್ತೇವೆ. ಆಕ್ರಮ ರ್ಯಾಪಿಂದ್ ಬೈಕ್ ವಿಚಾರ ಕೋರ್ಟ್ ನಲ್ಲಿ ಇದೆ. ವೆಕೆಟ್ ಮಾಡಬೇಕು, ಶೇ 2ರಷ್ಟು ರ್ಯಾಯಲ್ಟಿ ನೀಡಬೇಕಿತ್ತು. ರ್ಯಾಪಿಡ್, ಅಂಕಲ್ ಎಲ್ಲಾ ಇಲ್ಲಿಗಲ್ ಇದೆ ತಗಿಸೋಣ' ಎಂದು ಅವರು ಹೇಳಿದರು.
'ಹಣಕಾಸು ಕಂಪನಿಗಳ ದೌರ್ಜನ್ಯದ ಬಗ್ಗೆ ಪೋಲಿಸ್ ಆಯುಕ್ತರ ಜೊತೆಗೆ ಮಾತಾಡುವೆ. ಕಾನೂನು ಬಾಹಿರ ವೈಟ್ ಬೋರ್ಡ್ ವಾಹನಗಳ ಓಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾನು ನಿಮ್ಮ ಪರ ಇರುವೆ' ಎಂದು ಭರವಸೆ ನೀಡುವೆ.
'ಜೊತೆಗೆ ಚಾಲಕರ ದಿನಾಚರಣೆ ಮಾಡಿ, ಉತ್ತಮ ಚಾಲಕರಿಗೆ ಪ್ರಶಸ್ತಿ ನೀಡ್ತೇವೆ. ಎಷ್ಟು ದಿನದಲ್ಲಿ ಬೇಡಿಕೆ ಈಡೇರಿಸ್ತೀರಾ ಹೇಳಿ ಎಂದು ಪದಾಧಿಕಾರಿಗಳ ಪಟ್ಟು. ಅಮೈನ್ ಮೆಂಟ್ ಮಾಡೋಣ. ಈ ವೇಳೆ ಪ್ರತಿಭಟನಾಕಾರರು ಕಾಲ ಮಿತಿ ಹೇಳಿ ಎಂದು ಪಟ್ಟು ಹಿಡಿದರು. ಆಗ ಸಚಿವರು ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಮಾಡ್ತೇವೆ ಎಂದು ಭರವಸೆ ನೀಡಿದರು' ಎಂದು ಪ್ರತಿಭಟನಾಕಾರರನ್ನು ವಿಶ್ವಾಶಕ್ಕೆ ಪಡೆದರು.












Click it and Unblock the Notifications