Bengaluru Bandh: ಪ್ರಯಾಣಿಕರೇ ಗಮನಿಸಿ: ಸೆಪ್ಟೆಂಬರ್ 11ರಂದು ಆಟೋ, ಟ್ಯಾಕ್ಸಿ, ಬಸ್‌ಗಳ ಸಂಚಾರ ಸ್ಥಗಿತ!

ಬೆಂಗಳೂರು ಸೆಪ್ಟೆಂಬರ್ 2: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಚಾಲಕರು-ಮಾಲೀಕರು ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ನಷ್ಟಕ್ಕೊಳಗಾಗಿರುವ ಖಾಸಗಿ ಸಾರಿಗೆ ಚಾಲಕರು-ಮಾಲೀಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

Bengaluru Bandh on September 11, traffic of autos, taxis and buses will be suspended

ಖಾಸಗಿ ವಾಹನ ಒಕ್ಕೂಟದ ಜೊತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತುಕತೆ ನಡೆಸಿ, ನಿಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆಗಸ್ಟ್ 31ರೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವಧಿ ಮುಗಿದರೂ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ರಾಜ್ಯ ಖಾಸಗಿ ಸಂಘಗಳ ಒಕ್ಕೂಟಗಳ ಅಧ್ಯಕ್ಷ ನಟರಾಜ್ ಶರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

32 ಖಾಸಗಿ ಸಾರಿಗೆ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಸೆ.10ರ ಭಾನುವಾರ ಮಧ್ಯರಾತ್ರಿ 12 ರಿಂದ ಸೋಮವಾರ ರಾತ್ರಿ 12ರವರೆಗೆ ಆಟೋ, ಟ್ಯಾಕ್ಸಿ, ಕ್ಯಾಬ್, ಕಾರ್ಪೋರೇಟ್ ವಾಹನಗಳು, ಖಾಸಗಿ ಬಸ್, ಶಾಲಾ ಬಸ್ ಸೇರಿ ಇತರ ಖಾಸಗಿ ವಾಹನಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದರು.

Bengaluru Bandh on September 11, traffic of autos, taxis and buses will be suspended

ಅಂದು ಮೆಜೆಸ್ಟಿಕ್ ರೈಲುಸಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೆಳಿಗ್ಗೆ 10.30ಕ್ಕೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು. 11.30ಕ್ಕೆ ರ್ಯಾಲಿ ಸ್ವತಂತ್ರ ಉದ್ಯಾನವನ ತಲುಪಿ, ಸಂಜೆ 7 ರವರೆಗೆ ಅಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಿವರಿಸಿದರು.

ಒಕ್ಕೂಟದ ಬೇಡಿಕೆಗಳೇನು?

*ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಧನ ನೀಡಬೇಕು

* ರ್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ ಮಾಡಬೇಕು

* ಅಸಂಘಟಿತ ವಾಣಿಜ್ಯ ಚಾಲಕರ, ಸಾರಿಗೆ ಅಭಿವೃದ್ಧ ನಿಗಮ ಸ್ಥಾಪನೆ

* ನೇರ ಸಾಲಸೌಲಭ್ಯ ಯೋಜನೆಯಡಿ ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸೌಲತ್ತು.

*ವೈಟ್ ಬೋರ್ಡ್ ವಾಹನಗಳ ಬಾಡಿಗೆಗೆ ನಿಷೇಧವನ್ನು

*ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು

*ಓಲಾ, ಊಬರ್ ಆ್ಯಪ್ ಆಧಾರಿತ ಸೇವೆಗಳ ನಿರ್ಬಂಧಗಳನ್ನು

*ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ

*ಖಾಸಗಿ ವಾಹನಗಳನ್ನು ಸರ್ಕಾರ ಬಾಡಿಗೆಗೆ ಪಡೆಯಬೇಕು

*ನಿಯಮಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+